Top

ನಿರ್ಮಾಪಕ ಉಮಾಪತಿ ಬ್ರದರ್ಸ್​ಗೆ ಬಾಂಬೆ ರವಿ ಧಮ್ಕಿ ಆಡಿಯೋ ಟೇಪ್​ ವೈರಲ್​

ಅಷ್ಟಲ್ಲದೆ ಆಡಿಯೋದಲ್ಲಿಯೂ ಕೂಡ ಮತ್ತೊಂದ್ಸಲ ಹೊಡಿತಿನಿ ಎಂದು ರಾಜಾರೋಷವಾಗಿ ಹೇಳಿಕೊಂಡಿದ್ದಾನೆ

ನಿರ್ಮಾಪಕ ಉಮಾಪತಿ ಬ್ರದರ್ಸ್​ಗೆ ಬಾಂಬೆ ರವಿ ಧಮ್ಕಿ ಆಡಿಯೋ ಟೇಪ್​ ವೈರಲ್​
X

ಬೆಂಗಳೂರು: ಒಬ್ಬ ಕ್ರಿಮಿನಲ್​ನ ಬೆಳೆಯೋದಕ್ಕೆ ಬಿಟ್ಟರೆ ಏನಾಗಬಹುದು ಎಂಬುದಕ್ಕೆ ಈತನೇ ಸಾಕ್ಷಿ. ಪ್ಯಾರಲಲ್ ಗೌರ್ನಮೆಂಟ್ ರೀತಿ ವರ್ತಿಸುತ್ತಿರುವ ಈ ಕ್ರಿಮಿನಲ್​ನ ಅಟ್ಟಹಾಸ ಮಟ್ಟ ಹಾಕಲೇಬೇಕಿದೆ ಅಷ್ಟಕ್ಕೂ ಆತ ಯಾರು(?) ಅವನು ಮಾಡಿರುವ ಕೃತ್ಯ ಎಂತದ್ದು ಗೊತ್ತಾ(?).

ಆ್ಯಂಟಿ ಸೋಷಿಯಲ್ ಎಲಿಮೆಂಟ್ಸ್ ಹಾಗೆ ಬಿಟ್ಟರೆ ಯಾವ ಮಟ್ಟಕ್ಕೆ ಬೆಳೆದುಬಿಡ್ತಾರೆ ಅನ್ನೋದಕ್ಕೆ ಈ ಬಾಂಬೆ ರವಿ ಎಂಬ ಸ್ವಯಂ ಘೋಷಿತ ಡಾನ್ ಸಾಕ್ಷಿ. ಈಗಾಗಲೆ ಅನಾಮಿಕನೊಬ್ಬ ಬಾಂಬೆ ರವಿ ಜೊತೆ ಮಾತನಾಡಿದ ಆಡಿಯೋ ಕ್ಲಿಪ್ ವೈರಲ್ ಆಗಿದೆ.

ಮೊದಲನೆಯದಾಗಿ ಕಳೆದ ಸಲ ಮಿಸ್ಸಾಗಿದ್ದಾನೆ ಈ ಬಾರೀ ಹೊಡಿತಿನಿ ಎಂದು ರಾಜಾರೋಷವಾಗಿ ಹೇಳಿಕೊಂಡಿದ್ದಾನೆ. ರಾಬರ್ಟ್ ಸಿನಿಮಾ ನಿರ್ಮಾಪಕರ ಹತ್ಯಾಯತ್ನ ಪ್ರಕರಣದ ಆರೋಪಿಯಾಗಿರುವ ಬಾಂಬೆ ರವಿ ಹತ್ಯೆಗೆ ಸ್ಕೆಚ್ ಹಾಕಲು ಕಾರಣವೇನು ಎಂಬುದನ್ನ ತಿಳಿಸಿದ್ದಾನೆ.

ಹಲವು ವರ್ಷಗಳಿಂದಲೂ ಸೈಕಲ್ ರವಿಗೂ ಬಾಂಬೆ ರವಿಗೂ ದುಶ್ಮನಿ ಇತ್ತು. ಒಂದು ಲ್ಯಾಂಡ್​ಗಳ ವಿಚಾರವಾಗಿ ಮತ್ತೊಂದು ಅಂಡರ್ ವರ್ಲ್ಡ್​ನ ಖುರ್ಚಿಗಾಗಿ. ಎರಡೂ ಕಡೆಯೂ ಕೂಡ ಕಿರಾತಕರ ಗ್ಯಾಂಗೇ ಸೇರಿತ್ತು. ಸೈಕಲ್ ರವಿ ನಗರದಲ್ಲಿಯೇ ಕುಳಿತು ಬಾಲ ಬಿಚ್ಚಿದರೆ, ಬಾಂಬೆ ರವಿ ನೆದರ್ಲಾಂಡ್​ನಲ್ಲೇ ಎಲ್ಲ ಕೇಸುಗಳನ್ನ ಮಾಡುತ್ತಿದ್ದ. ಹಲವು ವರ್ಷಗಳಿಂದ ದೇಶ ಬಿಟ್ಟಿದ್ದ ಬಾಂಬೆ ರವಿ, ಸೈಕಲ್ ರವಿ ವಿಚಾರಕ್ಕೆ ತಲೆ ಕೆಡಿಸಿಕೊಂಡಿದ್ದ. ಇವರಿಬ್ಬರ ನಡುವೆ ಅಡ್ಡ ಬಂದಿದ್ದು ಒನ್ಸ್ ಆಗೇನ್ ಇದೇ ನಿರ್ಮಾಪಕರು ಎಂಬುದನ್ನ ಸ್ವತಃ ಬಾಂಬೇ ರವಿಯೇ ಹೇಳಿದ್ದಾನೆ. ಸೈಕಲ್ ರವಿಗೆ ಫಂಡಿಂಗ್ ಮಾಡುವ ಕೆಲಸಗಳನ್ನ ಉಮಾಪತಿ ಮತ್ತು ಸಹೋದರ ದೀಪಕ್​ ಮಾಡುತ್ತಿದ್ರಂತೆ.

ಅಷ್ಟಲ್ಲದೆ, ರಾಬರ್ಟ್ ಸಿನಿಮಾಗೆ 10 ಕೋಟಿ ಸೈಕಲ್ ರವಿನೇ ಕೊಟ್ಟಿದ್ನಂತೆ. ಇಂತಹ ಆರೋಪ ಮಾಡುತ್ತಿರುವ ಬಾಂಬೆ ರವಿ, ಹತ್ಯೆ ವಿಫಲವಾದ ನಂತರವೂ ದೀಪಕ್​ಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ನಂತೆ. ಅಷ್ಟಲ್ಲದೆ ಆಡಿಯೋದಲ್ಲಿಯೂ ಕೂಡ ಮತ್ತೊಂದ್ಸಲ ಹೊಡಿತಿನಿ ಎಂದು ರಾಜಾರೋಷವಾಗಿ ಹೇಳಿಕೊಂಡಿದ್ದಾನೆ.

ಇನ್ನು ಇಂತಹ ಕ್ರಿಮಿನಲ್ ಗಳ ಬಂಧಿಸಲೇಬೇಕಾದ ಅನಿವಾರ್ಯತೆ ಪೊಲೀಸರಿಗಿದೆ. ಇಲ್ಲದಿದ್ದಲ್ಲಿ ಮುಂದೆ ಇಂತಹ ಕ್ರಿಮಿನಲ್ ಗಳು ಬಡ್ಡಿಂಗ್ ರೌಡೀಸ್ ಗಳಿಗೆ ಮಾದರಿಯಾಗುವ ಸಾಧ್ಯತೆ ಇದೆ.

Next Story

RELATED STORIES