Top

ಸ್ಯಾಂಡಲ್​ವುಡ್​ ಡ್ರಗ್ಸ್​​ ಪ್ರಕರಣ: ತರುಣ್​ ರಾಜ್​ ಹೇಳಿಕೆ ಆಧರಿಸಿ ಆ್ಯಂಕರ್​ ಅನುಶ್ರೀ ವಿಚಾರಣೆ

ನನಗೆ ಸಿಸಿಬಿ ಅಧಿಕಾರಿಗಳು ನೋಟಿಸ್​ ನೀಡಿದ್ದಾರೆ. ಅವರು ನೋಟಿಸ್​ ನೀಡಿದ ಮಾತ್ರಕ್ಕೆ ನಾನು ಅಪರಾಧಿ ಅಲ್ಲ, ವಿಚಾರಣೆಗೆ ಕರೆದಿದ್ದಾರೆ ಅಷ್ಟೇ .

ಸ್ಯಾಂಡಲ್​ವುಡ್​ ಡ್ರಗ್ಸ್​​ ಪ್ರಕರಣ: ತರುಣ್​ ರಾಜ್​ ಹೇಳಿಕೆ ಆಧರಿಸಿ ಆ್ಯಂಕರ್​ ಅನುಶ್ರೀ ವಿಚಾರಣೆ
X

ನಿರೂಪಕಿ ಅನುಶ್ರೀ

ಮಂಗಳೂರು/ಬೆಂಗಳೂರು: ಸ್ಯಾಂಡಲ್​ವುಡ್​ನ ಡ್ರಗ್ಸ್​ ಜಾಲದ ನಂಟಿನ ಕುರಿತು ವಿಚಾರಣೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಮಾಹಿತಿ ಆಧರಿಸಿ, ಒಬ್ಬೊಬ್ಬರನ್ನು ವಶಕ್ಕೆ ಪಡೆದು ಸಮಗ್ರ ವಿಚಾರಣೆ ನಡೆಸುತ್ತಿದ್ದಾರೆ.

ಶುರುವಿನಲ್ಲಿ ಕಿಶೋರ್ ಶೆಟ್ಟಿ ಬಂಧಿಸಿದ್ದ ಸಿಸಿಬಿ ಅಧಿಕಾರಿಗಳಿಗೆ ಆ್ಯಂಕರ್ ಕಂ ನಟಿಯೊಬ್ಬರು ಡ್ರಗ್ಸ್ ಪಾರ್ಟಿಯಲ್ಲಿ ಭಾಗವಹಿಸಿದ್ದ ಮಾಹಿತಿ ಇತ್ತು. ಆದರೆ, ಇದಕ್ಕೆ ಸರಿಯಾದ ಸಾಕ್ಷಿ-ಆಧಾರಗಳು ಇರಲಿಲ್ಲ. ನಿನ್ನೆ ಕಿಶೋರ್ ಸ್ನೇಹಿತ ತರುಣ್ ರಾಜ್ ನನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು ಆತನನ್ನು ವಿಚಾರಣೆ ನಡೆಸಿದ್ದರು.

ತರುಣ್ ರಾಜ್​ ವಿಚಾರಣೆಯಲ್ಲಿ ಹೇಳಿಕೆ ನೀಡಿದ್ದು, ಆ್ಯಂಕರ್ ಅನುಶ್ರೀ ಕೂಡ ಡ್ರಗ್ಸ್ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎಂದು ಮಾಹಿತಿ ನೀಡಿದ್ದ ಜೊತೆಗೆ ಆತನ ಹೇಳಿಕೆಗೆ ಪೂರಕವಾಗಿರುವ ದಾಖಲೆಗಳು ಪೊಲೀಸರಿಗೆ ದೊರೆತಿವೆ. ಹಾಗಾಗಿಯೇ ಅನುಶ್ರೀಗೆ ನೋಟಿಸ್ ಜಾರಿ ಮಾಡಲಾಗಿತ್ತು.

ತರುಣ್ ರಾಜ್, ಅನುಶ್ರೀಗೆ ಡ್ಯಾನ್ಸ್ ಕಲಿಸಿಕೊಟ್ಟಿದ್ದ. ಲಾಕ್​ಡೌನ್​ಗೂ ಮೊದಲು ನಡೆಸಿದ್ದ ಡ್ರಗ್ಸ್ ಪಾರ್ಟಿಯಲ್ಲಿ ಅನುಶ್ರೀ ಭಾಗವಹಿಸಿದ್ದರು ಎನ್ನುವ ಮಾಹಿತಿ ಸಿಸಿಬಿ ಅಧಿಕಾರಿಗಳಿಗೆ ದೊರೆತಿದೆ.

ಸದ್ಯ ಈ ಎಲ್ಲ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿರುವ ಸಿಸಿಬಿ ಅಧಿಕಾರಿಗಳು, ಅನುಶ್ರೀ ವಿಚಾರಣೆ ನಡೆಸಲು ನೋಟಿಸ್​ ನೀಡಿದೆ. ಇದಕ್ಕಾಗಿ ಡಿಸಿಪಿ ವಿನಯ್ ಗಾಂವ್ಕರ್ ನೇತೃತ್ವದಲ್ಲಿ 14 ಜನರ ತಂಡವನ್ನು ವಿಚರಣೆ ನಡೆಸಲಾಗುತ್ತಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪತ್ರಿಕಾ ಪ್ರಕಟಣೆ ನೀಡಿರುವ ಆ್ಯಂಕರ್​ ಅನುಶ್ರೀ, ನನಗೆ ಸಿಸಿಬಿ ಅಧಿಕಾರಿಗಳು ನೋಟಿಸ್​ ನೀಡಿದ್ದಾರೆ. ಅವರು ನೋಟಿಸ್​ ನೀಡಿದ ಮಾತ್ರಕ್ಕೆ ನಾನು ಅಪರಾಧಿ ಅಲ್ಲ, ವಿಚಾರಣೆಗೆ ಕರೆದಿದ್ದಾರೆ ಅಷ್ಟೇ ಎಂದಿದ್ದಾರೆ.



Next Story

RELATED STORIES