Top

ಬ್ರಿಲಿಯಂಟ್ ಹ್ಯಾಕರ್ಸ್ ನಿಂದ ನಡೀತಿದೆ ಎಟಿಎಂ ರಾಬರಿ..!

ಸ್ಟೂಡೆಂಟ್ ವೀಸಾದಲ್ಲಿ ಬಂದು ಎಟಿಎಂ ರಾಬರಿ..!

ಬ್ರಿಲಿಯಂಟ್ ಹ್ಯಾಕರ್ಸ್ ನಿಂದ ನಡೀತಿದೆ ಎಟಿಎಂ ರಾಬರಿ..!
X

ಬೆಂಗಳೂರು: ಕ್ರೈಂಗಳು ಈಗ ಹೊಸ ಆಯಾಮಗಳನ್ನ ಪಡೆದುಕೊಳ್ತಿದೆ. ಮೊದ ಮೊದಲು ಹಣಕ್ಕಾಗಿ ಬೀದಿ ಬದಿ ನಿಲ್ಲುತ್ತಿದ್ದ ಕ್ರಿಮಿನಲ್​ಗಳು ಈಗ ಕುಳಿತಲ್ಲಿಯೇ ಹಣ ಮಾಡೋ ವಿಧಾನ ಕಂಡುಕೊಂಡಿದ್ದಾರೆ. ಅಂದ್ಹಾಗೆ ಇವರು ಟಾರ್ಗೆಟ್ ಮಾಡುತ್ತಿದ್ದು ಎಟಿಎಂಗಳನ್ನು.

ಹೆಚ್ಚು ರಿಸ್ಕ್ ತೆಗೆದುಕೊಳ್ಳದೆ ಅನಾಯಾಸವಾಗಿ ನಡೆಸೋ ಕ್ರೈಂ ಅಂದ್ರೆ ಸೈಬರ್ ಅಫೆನ್ಸ್. ಮೊದಲು ಓದು ಬರಹವಿಲ್ಲದೆ ಹಾದಿ ತಪ್ಪಿ ಅಫೆನ್ಸ್ ಗಿಳಿದರೆ ಈಗ ಓದಿಕೊಂಡವರೇ ಹಣಕ್ಕಾಗಿ ಮಣ್ಣು ತಿನ್ನೋ ಕೆಲಸ ಮಾಡುತ್ತಿದ್ದಾರೆ. ಸಂಪಿಗೆಹಳ್ಳಿಯಲ್ಲಿ ಈ ಹಿಂದೆ ನಡೆದಿದ್ದ ಎಟಿಎಂ ರಾಬರಿ ಪ್ರಕರಣಕ್ಕೆ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣದ ಆರೋಪಿತೆ ಸ್ಟಿಫಾನಿಯಾ@ಖೇಟ್ ಎಂಬಾಕೆಯನ್ನ ಪೊಲೀಸರು ಬಂಧಿಸಿದರು.

ಈಗ ಸಿಕ್ಕಿಬಿದ್ದಿರುವ ಸ್ಟಿಫಾನಿಯಾ@ ಖೇಟ್ ಎಂಬಾಕೆ ಎರಡು ಮೂರನೇ ಹಂತದ ವರ್ಕರ್. ಈಕೆಯ ಹಿಂದೆ ಬಹುದೊಡ್ಡ ಜಾಲವೇ ಇದೆ. ಈಕೆಗೆ ಲೊಕೇಷನ್ ಅಸೈನ್ ಮಾಡೋಕೆಂದೇ ಮತ್ತೊಬ್ಬ ಮಿಡ್ಲ್ ಮೆನ್ ಕೂಡ ಇದ್ದಾನೆ. ಆತ ಲೊಕೇಷನ್ ಶೇರ್ ಮಾಡಿದ್ರೆ ಈಕೆ ಆ ಲೊಕೇಷನ್ ರೀಚ್ ಆಗುತ್ತಿದ್ಲು. ಕ್ರೈಂ ಮಾಡಲೆಂದೇ ಸ್ಟೂಡೆಂಟ್ ವೀಸಾದಲ್ಲಿ ಬರುವ ಖದೀಮರು ಇಲ್ಲಿ ಕ್ರೈಂ ಮಾಡಿ ನಂತರ ತಮ್ಮ ದೇಶಕ್ಕೆ ವಾಪಾಸ್ ತೆರಳುತ್ತಿದ್ದರು. ಇಂತಹ ವ್ಯಕ್ತಿಗಳನ್ನೇ ಆಯ್ಕೆ ಮಾಡುತ್ತಿದ್ದ ಖದೀಮರು ತಾವು ಕನ್ನ ಹಾಕುವ ಎಟಿಎಂ ಮೆಷೀನ್ ಗಳಿಗೆ ಹೈಟೆಕ್ ಪ್ರೋಗ್ರಾಂ ಡಿವೈಝ್ ನ್ನ ಅಳವಡಿಸುತಿದರು.

ಈ ಡಿವೈಝ್ ಫಿಕ್ಸ್ ಆದ ಬಳಿಕ ಎಟಿಎಂ ನಲ್ಲಿ ಹಣ ಡ್ರಾ ಮಾಡಲು ಬಟನ್ ಒತ್ತಿದರೆ ಅದರ ಹತ್ತು ಪಟ್ಟು ಹಣ ಡ್ರಾ ಆಗುತಿತ್ತು. ಉದಾ: 1000 ರೂ. ಎಂದು ಬಟನ್ ಪ್ರೆಸ್ ಮಾಡಿದರೆ ಈ ಡಿವೈಝ್ ಆ ಹಣಕ್ಕೆ ಎಕ್ಸ್ಟ್ರಾ ಸೊನ್ನೆಗಳನ್ನ ಸೇರಿಸಿ ಹಣ ಡ್ರಾ ಆಗುವಂತೆ ನೋಡಿಕೊಳ್ಳುತಿತ್ತು. ಈ ತರಹ ಎಟಿಎಂ ರಾಬರಿ ಮಾಡದರೆ ಶೇ. 20 ಕಮೀಷನ್ ಕೂಡ ಆರೋಪಿಗಳಿಗೆ ಸಿಗುತಿತ್ತು.

ಸದ್ಯ ವಿದೇಶದಲ್ಲಿ ಕುಳಿತ ಬ್ರಿಲಿಯಂಟ್ ಹ್ಯಾಕರ್ ಈ ದಂಧೆಯ ಪ್ರಮುಖ ಕಿಂಗ್ ಪಿನ್ ಆಗಿದ್ದು, ಆತನ ಅನತಿಯ ಮೇರೆಗೆ ಈ ರೀತಿ ರಾಬರಿಗಳು ನಡೆಯುತ್ತಿದೆ. ಸದ್ಯ ಈ ಜಾಲದ ಬಗ್ಗೆ ಸಂಪಿಗೆಹಳ್ಳಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Next Story

RELATED STORIES