Top

ನಾಲ್ಕು ದಿನಗಳ ಬಳಿಕ ರಮೇಶ್ ಜಾರಕಿಹೊಳಿ ಹಾಜರಾಗಬೇಕಿದೆ

ಬಂಧನಕ್ಕೆ ತೀರ ಹತ್ತಿರವಾಗ್ತಿದ್ದಾರಾ ಜಾರಕಿಹೋಳಿ(?) ಹೀಗೊಂದು ಅನುಮಾನ ಮೂಡಿದೆ.

ನಾಲ್ಕು ದಿನಗಳ ಬಳಿಕ ರಮೇಶ್ ಜಾರಕಿಹೊಳಿ ಹಾಜರಾಗಬೇಕಿದೆ
X

ಬೆಂಗಳೂರು: ಬಂಧನಕ್ಕೆ ತೀರ ಹತ್ತಿರವಾಗ್ತಿದ್ದಾರಾ ಜಾರಕಿಹೋಳಿ(?) ಹೀಗೊಂದು ಅನುಮಾನ ಮೂಡಿದೆ. ಇಂದು ಸಿಡಿ ಯುವತಿ ಸ್ಟೇಟ್​ಮೆಂಟ್​ ಕೊಟ್ಟಿದ್ದೇ ಆದಲ್ಲಿ ರಮೇಶ್ ಜಾರಕಿಹೊಳಿಯವರಿಗೆ ಸಂಕಷ್ಟ ಕಾದಿತ್ತು. ಅದೇ ರೀತಿ ಇಂದು ಸುದೀರ್ಘ ವಿಚಾರಣೆ ಕೂಡ ಎದುರಿಸಿದ್ದಾರೆ.

ನಾಲ್ಕು ಗಂಟೆಗಳ ವಿಚಾರಣೆ ಇದು. ಇಂದು ಬೆಳಗ್ಗೆ 10 ಗಂಟೆಗೆ ಆಡುಗೋಡಿ ಟೆಕ್ನಿಕಲ್ ಸೆಲ್​ಗೆ ಆಗಮಿಸಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರನ್ನ ಎಸ್​ಐಟಿಯ ತಂಡ ಸತತ ವಿಚಾರಣೆಗೊಳಪಡಿಸಿತ್ತು.

ಆದರೆ, ರಮೇಶ್ ಜಾರಕಿಹೋಳಿ ಮಾತ್ರ ಎಸ್​ಐಟಿ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಅಷ್ಟಲ್ಲದೇ ಆಡುಗೋಡು ಸೆಲ್ ಬಳಿ ರಮೇಶ್ ಜಾರಕಿಹೋಳಿ ಅವರನ್ನ ಬಂಧಿಸುವಂತೆ ಪ್ರತಿಭಟನೆಗಳೂ ನಡೆದಿದ್ದು, ಹಲವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಿಡಿ ಯುವತಿ ನಿನ್ನೆ ಉಚ್ಛ ನ್ಯಾಯಾಲಕ್ಕೆ ಪತ್ರ ಬರೆದು ತನಿಖೆಯನ್ನ ನ್ಯಾಯಾಂಗದ ಉಸ್ತುವಾರಿಯಲ್ಲಿ ಎಸ್​ಐಟಿ ತನಿಖೆ ನಡೆಯಲಿ ಎಂದಿದ್ದಲ್ಲದೆ ತನ್ನ ತಂದೆ ತಾಯಿಗೆ ಬಲವಂತವಾಗಿ ಹೇಳಿಕೆ ಪಡೆದುಕೊಳ್ಳಲಾಗಿದೆ. ರಮೇಶ್ ಜಾರಕಿಹೋಳಿ ಪ್ರಭಾವಿ ವ್ಯಕ್ತಿಯಾಗಿದ್ದು, ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದಾರೆ. ಹೀಗಾಗಿ ರಕ್ಷಣೆ ಬೇಕು ಎಂದು ಹೈಕೋರ್ಟ್​​ಗೆ ಈ ಮೇಲ್ ಮುಖಾಂತರ ಪತ್ರ ಬರೆದಿದ್ದಾಳೆ.

ಅಷ್ಟಲ್ಲದೆ ಇಂದು ಆಕೆ ನ್ಯಾಯಾಲಯದ ಮುಂದೆ ಹೇಳಿಕೆ ಕೊಡ್ತಾಳೆ ಎಂಬ ಕಾರಣಕ್ಕೆ ರಮೇಶ್ ಜಾರಕಿಹೊಳಿಗೆ ತರಾತುರಿಯಲ್ಲಿ ನೊಟೀಸ್ ನೀಡಿದ್ರಾ ಎಂಬ ಅನುಮಾನಗಳು ವ್ಯಕ್ತವಾಗುತ್ತಿದೆ. ನ್ಯಾಯಾಧೀಶರ ಮುಂದೆ ಆಕೆ ಹೇಳಿಕೆ ನೀಡಿದ್ರೆ ಸಹಜವಾಗಿಯೇ ಎಸ್​ಐಟಿಗೆ ಕೋರ್ಟ್ ಕೇಸ್​ನ ಪ್ರಗತಿಯ ಬಗ್ಗೆ ಪ್ರಶ್ನೆ ಮಾಡುತ್ತೆ. ಹೀಗಾಗಿ ಇಂದು ಎಸ್​ಐಟಿ ರಮೇಶ್ ಅವರಿಗೆ ನೊಟೀಸ್ ನೀಡಲಾಗಿತ್ತು ಎನ್ನಲಾಗಿದೆ.

ಇನ್ನು ವಿಚಾರಣೆ ವೇಳೆ ಯಾವುದೇ ಪ್ರಶ್ನೆಗೆ ಉತ್ತರ ಕೊಡದೆ ಯುವತಿ ಯಾರೆಂದೇ ಗೊತ್ತಿಲ್ಲ ಎಂಬ ಉತ್ತರಕ್ಕೆ ಕಟ್ಟು ಬಿದ್ದಿದ್ದರು ಹೀಗಾಗಿ ನಾಲ್ಕು ದಿನಗಳ ಕಾಲಾವಕಾಶ ನೀಡಿ ಮಾರ್ಚ್ 2 ರಂದು ಮತ್ತೆ ಹಾಜರಾಗಲು ಎಸ್​ಐಟಿ ಸೂಚಿಸಿದೆ. ಇನ್ನು ದೂರು ನೀಡಿದ್ದ ರಮೇಶ್ ಆಪ್ತ ನಾಗರಾಜ್, ವಕೀಲ ಶ್ಯಾಂ ಸುಂದರ್ ಅವರೊಂದಿಗೆ ಬಂದಿದ್ದ ಜಾರಕಿಹೊಳಿ ನಾಲ್ಕು ಗಂಟೆಯ ವಿಚಾರಣೆ ಬಳಿಕ ತೆರಳಿದ್ದರು. ಈ ಸಂಧರ್ಭದಲ್ಲಿ ಮಾತನಾಡಿದ ರಮೇಶ್ ಪರ ವಕೀಲ ಎಸ್​ಐಟಿ ಯಾವುದೇ ತಾರತಮ್ಯ ಮಾಡುತ್ತಿಲ್ಲ ಕಾನೂನು ಪ್ರೊಸೀಝರ್ ಯಾವ ರೀತಿ ಇದ್ಯೋ ಅದನ್ನೆ ಫಾಲೋ ಮಾಡುತ್ತಿದ್ದಾರೆ ಎಂದು ಹೇಳುದ್ದಾರೆ. ಅದೇ ರೀತಿ ರಮೇಶ್ ಜಾರಕಿಹೋಳಿ ಅವರಿಗೂ ಯಾವುದೆ ಸಾಕ್ಷಿ ನಾಶ ಮಾಡುವ ಕೆಲಸಗಳಾಗಲಿ ಮತ್ತೊಂದಾಗಲಿ ಮಾಡದೆ ಎಸ್​ಐಟಿ ಅಧಿಕಾರಿಗಳಿಗೆ ಸಹಕಾರ ನೀಡಲು ಸೂಚನೆ ನೀಡಿದ್ದೇನೆ ಎಂದರು.

ಇನ್ನು ಆಡುಗೋಡಿ ಟೆಕ್ನಿಕಲ್ ಸೆಲ್ನಲ್ಲಿ ಸಾಕಷ್ಟು ಭದ್ರತೆಯನ್ನ ಆಯೋಜನೆ ಮಾಡಿದ್ದು,ಬೆಳಗಾವಿಯಲ್ಲಿ ಡಿ.ಕೆ ಅವರ ಮೇಲೆ ನಡೆದ ಘಟನೆಯ ರಿವೆಂಜ್​ಗೆ ಕೆಲ ಕಿಡಿಗೇಡಿಗಳು ಪ್ಲಾನ್ ಮಾಡಿದ್ದರು ಎನ್ನಲಾದ ಹಿನ್ನೆಲೆ ಖಾಕಿ ಅಲರ್ಟ್ ಆಗಿತ್ತು. ಹೀಗಾಗಿ ಹಿಂಬದಿ ಗೇಟ್ ನಿಂದ ಮಾಜಿ ಸಚಿವರನ್ನ ಕಳಿಸಿಕೊಡಲಾಗಿದೆ.

Next Story

RELATED STORIES