Top

ಕಾಟನ್​ಪೇಟೆಯಲ್ಲಿ ನಡೆದ ಎಫ್​ಐಆರ್ ಪ್ರಕಾರ ಇಬ್ಬರನ್ನ ಬಂಧಿಸಿದ್ದೇವೆ - ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್​

ಕಾಟನ್​ಪೇಟೆಯಲ್ಲಿ ನಡೆದ ಎಫ್​ಐಆರ್ ಪ್ರಕಾರ ಇಬ್ಬರನ್ನ ಬಂಧಿಸಿದ್ದೇವೆ - ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್​
X

ಬೆಂಗಳೂರು: ಸಿಸಿಬಿ ಕಳೆದ ಒಂದು ತಿಂಗಳಿನಿಂದ ಡ್ರಗ್ಸ್​ ಇಶ್ಯೂ ಬಗ್ಗೆ ಕೆಲಸ ಮಾಡುತ್ತಿದ್ದರು ಆಗ ಮಾಹಿತಿ ಬಂದಿತ್ತು ಸರ್ಕಾರಿ ಕೆಲಸ ಮಾಡುತ್ತಿದ್ದವನು ಪಾರ್ಟಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು ಎಂದು ಬೆಂಗಳೂರು ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್​ ಅವರು ಶುಕ್ರವಾರ ಹೇಳಿದ್ದಾರೆ.

ನಗರದಲ್ಲಿಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ವೇಳೆ ಮಾತನಾಡಿದ ಕಮಲ್​ ಪಂತ್ ಅವರು, ಆತ ಚಿತ್ರನಟಿಯ ಜೊತೆ ಕೂಡ ಸಂಪರ್ಕವನ್ನು ಹೊಂದಿದ್ದ. ಜಯನಗರ ಆರ್​ಟಿಓನಲ್ಲಿ ಕೆಲಸ ಮಾಡುತ್ತಿದ್ದ. ಪಾರ್ಟಿಯಲ್ಲಿ ಡ್ರಗ್ಸ್ ಬಳಸೋ ಬಗ್ಗೆ ಮಾಹಿತಿ ಗೊತ್ತಾಯ್ತು. ಅವರ ಮೊಬೈಲ್ ಚೆಕ್ ಮಾಡಿದಾಗ ಸುಮಾರು ಮಾಹಿತಿ ಸಿಕ್ಕಿದೆ ಎಂದರು.

ಸದ್ಯ ಸುಧಿರ್ಘವಾಗಿ ವಿಚಾರಣೆ ನಡೆಸಿದಾಗ ಹಲವು ಕಡೆಯಿಂದ ಪಾರ್ಟಿಗೆ ಹೋಗುತ್ತಿದ್ದರು. ಬೇರೆ ಕಡೆಯಿಂದ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ. ಸಿಸಿಬಿ ಈಗಾಗಲೇ ಮಾಹಿತಿ ಪಡೆದಿರುವ ಪ್ರಕಾರ; ಇನ್ವೆಷ್ಟಿಗೇಷನ್ ನಡೀತಿದೆ, ಮುಂದಿನ ಹಂತದಲ್ಲಿ ಹೋಗುತ್ತಿದೆ. ಯಾರ ಜೊತೆ ಪಾರ್ಟಿ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ ಎಂದರು.

ಇನ್ನು ಮತ್ತೊಬ್ಬ ವ್ಯಕ್ತಿ ರಾಹುಲ್ ರಿಯಲ್ ಎಸ್ಟೇಟ್ ಎಂದು ಹೇಳಿಕೊಳ್ತಾರೆ. ಅವರು ಕೂಡ ರೆಗ್ಯೂಲರ್ ಆಗಿ ಶಾಮೀಲಾಗುತ್ತಿದ್ದಾರೆ. ಅವರನ್ನೂ ಕೂಡ ಬಂಧಿಸಿದ್ದೀವಿ. ನಟಿಯ ಮನೆ ರೈಡ್ ಮಾಡಿದ್ದೀವಿ. ರಾಗಿಣಿಯ ತನಿಖೆ ನಡೀತಿದೆ ಈಗ ಏನೂ ಹೇಳೊಕಾಗಲ್ಲ. ಈಗ ಕಾಟನ್​ಪೇಟೆಯಲ್ಲಿ ನಡೆದ ಎಫ್​ಐಆರ್ ಪ್ರಕಾರ ಇಬ್ಬರನ್ನ ಬಂಧಿಸಿದ್ದೇವೆ. ಬಂಧಿತ ಆರೋಪಿಗಳು ವಿದೇಶದಿಂದ ಡ್ರಗ್ ತರಿಸಿಕೊಳ್ಳುತ್ತಿದರು. ರಾಹುಲ್ ತಮ್ಮ ನೆರೆ ರಾಷ್ಟ್ರದಲ್ಲಿ ಪಾರ್ಟಿಗಳನ್ನು ಮಾಡಿದ್ದ ಎಂದು ಪೊಲೀಸ್​ ಆಯುಕ್ತ ಕಮಲ್​ ಪಂತ್ ಅವರು ವಿವರಣೆ ನೀಡಿದ್ದಾರೆ.

Next Story

RELATED STORIES