Top

58 ಸಾವಿರ ನಕಲಿ ಐಡಿಗಳು; ಕೋಟ್ಯಾಂತರ ರೂಗಳ ವಂಚನೆ ಸಾಧ್ಯತೆ

ದುಡ್ಡು ಕೊಟ್ರೆ ವೋಟರ್ ಐಡಿ ,ಆಧಾರ್ ಕಾರ್ಡ್ ,ಪಾನ್ ಕಾರ್ಡ್ ನಿಮ್ಮ ಕೈಯಲ್ಲಿ!

58 ಸಾವಿರ ನಕಲಿ ಐಡಿಗಳು; ಕೋಟ್ಯಾಂತರ ರೂಗಳ ವಂಚನೆ ಸಾಧ್ಯತೆ
X

ಬೆಂಗಳೂರು: ದೇಶದ ವ್ಯವಸ್ಥೆಯನ್ನ ಬುಡಮೇಲು ಮಾಡಲು ಹೊರಟ ಪ್ರಕರಣವಿದು. ಒಬ್ಬ ಅಪರಿಚಿತ ವ್ಯಕ್ತಿಗೆ ಬೇಕಾದ ಎಲ್ಲಾ ದಾಖಲಾತಿಗಳನ್ನ ಒದಗಿಸಿಕೊಟ್ಟು ಹಣ ಮಾಡುವ ಬೃಹತ್ ಜಾಲ ಈಗ ಬಯಲಾಗಿದೆ. ಸಿಸಿಬಿಯ ಮಹತ್ತರ ಕಾರ್ಯಾಚರಣೆಯಲ್ಲಿ ಈ ಕೇಸು ಪ್ರಮುಖವಾದದ್ದು.

ಖಚಿತ ಮಾಹಿತಿ ಆಧಾರದ ಮೇರೆಗೆ ತಲಘಟ್ಟಪುರದ ಹೆರಿಟೇಜ್ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರಿಹೆ ನಿಜಕ್ಕೂ ಶಾಕ್ ಕಾದಿತ್ತು. ಒಬ್ಬ ಮನುಷ್ಯ ತನ್ನ ಐಡೆಂಟಿಯನ್ನ ಪಡೆಯಲು ಸರ್ಕಾರಿ ಕಛೇರಿಗೆ ನೂರಾರು ಬಾರಿ ಅಲೆದು ಹರಸಾಹಸ ಪಡೆಬೇಕು. ಆದರೆ, ಇಲ್ಲಿ ಒಂದಷ್ಟು ಹಣ ಚೆಲ್ಲಿದರೆ ಸಾಕು ನಿಮ್ಮ ಇರುವಿಕೆಯೆ ಎಲ್ಲಾ ದಾಖಲಾತಿಗಳು ಕಾಲು ಬುಡಕ್ಕೆ ಬಿದ್ದಿರುತ್ತೆ ಅಂತ ಐಡೆಂಟಿಗಳನ್ನ ಸೃಷ್ಟಿ ಮಾಡುತ್ತಿದ್ದ ರಾಜಸ್ಥಾನ ಮೂಲದ ಪ್ರಮುಖ ಆರೋಪಿ ಕಮಲೇಶ್ ಸೇರಿ ನಗರದ 9 ಮಂದಿಯನ್ನ ಬಂಧಿಸಿದ್ದಾರೆ.


ಬಂಧಿತರ ಪೈಕಿ ಕಮಲೇಶ್ ಬಾಂಬೆಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ದರ್ಶನ್ ಎಂಬ ಆರೋಪಿ ಖಾಸಗಿ ಚಾನಲ್ ನಲ್ಲಿ ಕೆಲಸ ಮಾಡಿಕೊಂಡಿದ್ದವನು. ಇನ್ನು ಪ್ರಮುಖ ಆರೋಪಿ ಕಮಲೇಷ್ ಆಗಾಗ ಬೆಂಗಳೂರಿಗೆ ಬರ್ತಿದ್ದ ಆರೋಪಿ ಕಮಲೇಶ್​ಗೆ ನಗರದ ಪುಟ್ಟೇನಹಳ್ಳಿ ನಿವಾಸಿಯಾಗಿರೋ ಮತ್ತೊಬ್ಬ ಆರೋಪಿ ಲೋಕೇಶ್ ಪರಿಚಯವಾಗಿದೆ. ಲೋಕೇಶ್ ಸರ್ಕಾರದ ಐಡಿ ಕಾರ್ಡ್ ಗಳನ್ನ ತಯಾರಿಸಲು ಗುತ್ತಿಗೆ ನೀಡುವ ರೋಸ್ ಮಾರ್ಟ್ ಕಂಪನಿಯಲ್ಲಿ ಕೆಲ್ಸ ಮಾಡ್ತಿದ್ದ. ಈ ವೇಳೆ ರೋಸ್ ಮಾರ್ಟ್ ಕಂಪನಿಯಿಂದ ಡೇಟಾ ಕಳವು ಮಾಡುತ್ತಿದ್ದ ಲೋಕೇಶ್, ತಲಘಟ್ಟಪುರ ಬಳಿಯ ಕಮಲೇಶ್ ಅಪಾರ್ಟ್ಮೆಂಟ್ ಗೆ ಡೇಟಾ ನೀಡುತ್ತಿದ್ದ. ಕಮಲೇಶ್ ಲೋಕೇಶ್ ಸೇರಿ ಇತರೆ 8 ಆರೋಪಿಗಳು ಅಪಾರ್ಟ್ಮೆಂಟ್​ನ್ನೇ ನಕಲಿ ಐಡಿ ಕ್ರಿಯೇಟ್ ಮಾಡೊ ಅಡ್ಡ ಮಾಡಿಕೊಂಡಿದರು. 9 ಸಾವಿರ ಹೆಸರು ವಿಳಾಸವಿಲ್ಲದ ಪಾನ್ ಕಾರ್ಡ್, ಆಧಾರ್ ಕಾರ್ಡ್, ಎರಡು ಸಾವಿರದ ಇನ್ನೂರು ಹೆಸರು ವಿಳಾಸವಿಲ್ಲದ ಆರ್.ಸಿ ಕಾರ್ಡ್, ಇಪ್ಪತ್ತೆಂಟು ಸಾವಿರ ಹೆಸರು ವಿಳಾಸವಿಲ್ಲದ ನಕಲಿ ವೋಟರ್ ಐಡಿ ಕಾರ್ಡ್ ಪ್ರಿಂಟ್ ಮಾಡಿದ್ದಾರೆ. ಕಳೆದ ಎರಡು ವರ್ಷ ಗಳಿಂದ ಇದೇ ಬಿಜಿನೆಸ್ ಮಾಡ್ತಿದ್ದ ಆರೋಪಿಗಳು, ಕದ್ದ ವಾಹನಗಳಿಗೂ ನಕಲಿ ಡಾಕ್ಯುಮೆಂಟ್ಸ್ ಕ್ರಿಯೇಟ್ ಮಾಡಿ ಕೊಟ್ಟಿರೋದಲ್ಲದೇ, ಬ್ಯಾಂಕ್ ಲೋನ್ ಪಡೆಯಲಿಕ್ಕೂ ನಕಲಿ ಐಡಿ ಕಾರ್ಡ್ ಗಳನ್ನ ಮಾಡಿ ಮಾರಾಟ ಮಾಡಿದ್ದಾರೆ.

ಸದ್ಯ ಬಂಧಿತರ ವಿರುದ್ದ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ 468, 471, ಹಾಗೂ 468 ಅಡಿಯಲ್ಲಿ ದೂರು ದಾಖಲಾಗಿದೆ. ಆರೋಪಿಗಳಿಂದ ಒಟ್ಟು 58 ಸಾವಿರ ನಕಲಿ ಐಡಿ ಕಾರ್ಡ್, ಮೂರು ಲ್ಯಾಪ್ ಟಾಪ್ ಒಂದು ಸಿಪಿಯು ಮೂರು ಪ್ರಿಂಟರ್ ಹಾಗೂ 67 ಸಾವಿರ ನಗದನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Next Story

RELATED STORIES