Top

ಮಹಾರಾಷ್ಟ್ರದ ಭಿವಂಡಿ ಕಟ್ಟಡ ಕುಸಿತ ಪ್ರಕರಣ: ಆರು ಮಂದಿ ವಿರುದ್ಧ ಎಫ್​ಐಆರ್​

ಈವರೆಗೆ ಯಾರನ್ನೂ ಬಂಧಿಸಿಲ್ಲ. ಪೊಲೀಸರು ಘಟನೆ ಸಂಬಂಧ ತನಿಖೆಯನ್ನು ನಡೆಸುತ್ತಿದ್ದಾರೆ

ಮಹಾರಾಷ್ಟ್ರದ ಭಿವಂಡಿ ಕಟ್ಟಡ ಕುಸಿತ ಪ್ರಕರಣ: ಆರು ಮಂದಿ ವಿರುದ್ಧ ಎಫ್​ಐಆರ್​
X

ಮಹಾರಾಷ್ಟ್ರ: ಭಿವಂಡಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ ಆದರೆ ಈವರೆಗೆ ಯಾರನ್ನೂ ಬಂಧಿಸಿಲ್ಲ. ಪೊಲೀಸರು ಘಟನೆ ಸಂಬಂಧ ತನಿಖೆಯನ್ನು ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಹಾರಾಷ್ಟ್ರ ಭಿವಂಡಿಯ ಹರಿಹಾರ್ ಕಾಂಪೌಂಡ್‌ನಲ್ಲಿ ಮೊದಲ ಅಂತಸ್ತಿನ ಕಟ್ಟಡದಲ್ಲಿದ್ದ ಆನ್‌ಲೈನ್ ಸರಕು ವಿತರಣಾ ಸಂಸ್ಥೆಯ ಗೋದಾಮು ನಿನ್ನೆ ಕುಸಿದಿತ್ತು. ಈ ಘಟನೆಯಲ್ಲಿ 35 ವರ್ಷದ ಭದ್ರತಾ ಸಿಬ್ಬಂದಿಯೊಬ್ಬರು ಪ್ರಾಣಕಳೆದುಕೊಂಡಿದ್ದು, 6 ಮಂದಿಗೆ ಗಾಯಗಳಾಗಿವೆ.

ಈ ವಿಷಯ ಸಂಬಂಧ ಗೋದಾಮಿನ ಮಾಲೀಕರಾದ ಸೂರ್ಯಕಾಂತ್‌ ಪಾಟೀಲ್‌, ರಾಮಚಂದ್ರ ಪಾಟೀಲ್‌ ಹಾಗೂ ಮಹಾನಂದಾ ಪಾಟೀಲ್‌ ಸೇರಿದಂತೆ ಕಟ್ಟಡದ ವಿನ್ಯಾಸವನ್ನು ಮಾಡಿದ್ದ ಸಂಸ್ಥೆಯ ಒಬ್ಬ ಸಿಬ್ಬಂದಿಯ ವಿರುದ್ಧ ನಾರ್ಪೋಲಿ ಪೊಲೀಸರು ಇಂದು ಎಫ್‌ಐಆರ್‌ ದಾಖಲಿಸಿದ್ದಾರೆ.

Next Story

RELATED STORIES