Top

ದುಡ್ಡಿದೆ ಅಂತ ಗೊತ್ತಾದ್ರೆ ಸ್ವಾಮಿ ಮೈಂಡ್ ವಾಶ್​ಗೆ ಸಿದ್ಧ..!

ವಕೀಲರಿಂದ ಮತ್ತೊಂದು ದೂರು ಮತ್ತು ಮನವಿ.

ದುಡ್ಡಿದೆ ಅಂತ ಗೊತ್ತಾದ್ರೆ ಸ್ವಾಮಿ ಮೈಂಡ್ ವಾಶ್​ಗೆ ಸಿದ್ಧ..!
X

ಬೆಂಗಳೂರು: ಯುವರಾಜ್ ಸ್ವಾಮಿ ಎಂಬ ಆರೋಪಿ ಅದ್ಯಾವ ಪರಿ ಟೋಪಿವಾಲ ಅನ್ನೊದಕ್ಕೆ ಮತ್ತೊಂದು ಪ್ರಕರಣವೇ ಸಾಕ್ಷಿ. ಪ್ರತಿಷ್ಟಿತ ಹುದ್ದೆಯಲ್ಲಿದ್ದವರನ್ನು ತನ್ನ ವಂಚನೆ ಜಾಲಕ್ಕೆ ಹೇಗೆ ಸಿಲುಕಿಸುತಿದ್ದ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ. ಇಂದು ಕೂಡ ಆತನ ಕರ್ಮಕಾಂಡದ ಬಗ್ಗೆ ದೂರು ದಾಖಲಾಗಿದೆ.

ಉದ್ಯಮಿಗಳಾಯ್ತು, ಸಿನಿಮಾ ರಂಗದವರಿಗೂ ಮಸಿ ಬಳಿದಿದ್ದಾಯ್ತು ಈಗ ಜ್ಯೂಡಿಷಿಯಲ್ ಕ್ಷೇತ್ರಕ್ಕೂ ವಂಚಕ ಕಾಲಿಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ನಿವೃತ್ತ ನ್ಯಾಯಮೂರ್ತಿಗಳಿಗೂ ಮೂರು ನಾಮ ಹಾಕಿರುವ ವಿಚಾರ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಯುವರಾಜ್ ಸ್ವಾಮಿಯನ್ನ ಸಿಸಿಬಿ ಅಧಿಕಾರಿಗಳು ಬಂಧಿಸಿ ಒಂದಷ್ಟು ವಿಚಾರಗಳ್ಳನ್ನ ಕಕ್ಕಿಸಿದ ಬಳಿಕ ಆತನ ಆಸ್ತಿಪಾಸ್ತಿಗಳನ್ನೂ ಕೂಡ ಜಪ್ತಿ ಮಾಡಲು ಸಿಸಿಬಿ ಪತ್ರ ಬರೆದಿತ್ತು. ಈತನ ಕರ್ಮಾಕಾಂಡ ಬಯಲಾಗುತ್ತಿದ್ದಾಗುತ್ತಿದ್ದಂತೆ ನಿವೃತ್ತ ನ್ಯಾಯಮೂರ್ತಿಯವರು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ತನಗೂ ಕೂಡ ಯುವರಾಜ್ ಸ್ವಾಮಿ ಕೋಟ್ಯಾಂತರ ರೂಪಾಯಿ ವಂಚಿಸಿದ್ದಾನೆ. ತಾನು ಆತನಿಗೆ ಸಾಲ ಕೊಟ್ಟಿದ್ದೆ ಎಂದು ದೂರು ದಾಖಲಿಸಿದ್ದರು. ಆದ್ರೆ ಇಂದು ಅದೇ ವಿಚಾರವಾಗಿ ಮತ್ತೊಮ್ಮೆ ಮನವಿ ಮತ್ತು ದೂರನ್ನ ನೀಡಲು ವಕೀಲ ಅಮೃತೇಶ್ ಅವರು ಸಿಸಿಬಿಗೆ ಆಗಮಿಸಿದರು. ಈಗಾಗಲೇ ದಾಖಲಾದ ದೂರನ್ನ ಭ್ರಷ್ಟಾಚಾರ ಕಾಯ್ದೆಯಡಿ ತನಿಖೆ ನಡೆಸಬೇಕೆಂದು ಸಿಸಿಬಿಗೆ ಮನವಿ ಸಲ್ಲಿಸಿದರು. ವಕೀಲ ಅಮೃತೇಶ್ ಪ್ರಕಾರ ನಿವೃತ್ತ ನ್ಯಾಯಮೂರ್ತಿಯವರಿಗೆ ಬಂಧಿತ ಯುವರಾಜ್ ಸ್ವಾಮಿ ರಾಜ್ಯಪಾಲರ ಹುದ್ದೆಯನ್ನ ಕೊಡುಸ್ತೀನಿ ಎಂದು ಆಮೀಷ ಒಡ್ಡಿದ್ದನಂತೆ. ಸ್ವಾಮಿ ಯಸ್ ಅಂದವನೇ ನಿವೃತ್ತ ನ್ಯಾಯಮೂರ್ತಿಗಳ ಬಳಿ ಕೋಟ್ಯಾಂತರ ಹಣ ಪಡೆದಿದ್ದನಂತೆ. ಈ ಆರೋಪ ಮಾಡಿರುವ ವಕೀಲ ಅಮೃತೇಶ್ ಅವರು ಭ್ರಷ್ಟಾಚಾರದ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಇನ್ನು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಯುವರಾಜ ಸ್ವಾಮಿ ವಿರುದ್ಧ ಮತ್ತೊಂದು ದೂರು ದಾಖಲಾಗಿದ್ದು, ಮುಂದೆ ಕಾಯ್ದೆಯಡಿ ತನಿಖೇ ನಡೆಯುತ್ತೆ ಮತ್ತು ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಾಕ್ಷಿ ಸಿಕ್ಕಿದರೆ ಮುಂದಿನ ಬೆಳವಣಿಗೆ ಏನು ಅನ್ನೋದು ಕಾದು ನೋಡಬೇಕಿದೆ.

Next Story

RELATED STORIES