2020 ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪ್ರಕಟ: ಕರ್ನಾಟಕದ ಇಬ್ಬರಿಗೆ ಪ್ರಶಸ್ತಿ.!

ದೆಹಲಿ: 201920 ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗಳ ಹೆಸರು ಇಂದು ಪ್ರಕಟವಾಗಿವೆ. ಪ್ರತಿ ವರ್ಷ ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ನೀಡಲಾಗುವ ಈ ಪದ್ಮ ಪ್ರಶಸ್ತಿಗಳಿಗೆ ಆಯ್ಕೆಯಾಗಿರುವವರ ಹೆಸರನ್ನು ಕೇಂದ್ರ ಸರ್ಕಾರ ಶನಿವಾರ ಬಿಡುಗಡೆ ಮಾಡಿದೆ. ಈ ಪದ್ಮಶ್ರೀ ಪ್ರಶಸ್ತಿಗೆ 21 ಜನರಿಗೆ ಭಾಜನರಾಗಿದ್ದು, ದೇಶದಲ್ಲಿ... Read more »

ಬೆಳ್ಳಿ ಕಿರೀಟ ತೊಡಿಸಿ, ತಾಯಿಯ ಶತಮಾನೋತ್ಸವ ಆಚರಿಸಿದ ಮಗ.!

ಧಾರವಾಡ: ಅಮ್ಮಾ ಎನ್ನೋ ದೇವರು, ಮಕ್ಕಳಿಗಾಗಿ ತನ್ನ ಜನುಮವನ್ನೇ ಮುಡಿಪಾಗಿ ಇಟ್ಟಿರುತ್ತಾಳೆ. ಹೀಗಾಗಿ ತನ್ನ ತಾಯಿಯ ನೂರನೇ ವರ್ಷಕ್ಕೆ ಕಾಲಿಟ್ಟಿದ್ದಕ್ಕೆ ಮಗ ವಿಶೇಷವಾಗಿ ಬರ್ತ್‌ಡೇಯನ್ನ ಆಚರಿಸಿದ್ದಾನೆ. ಹುಟ್ಟುತ್ತಲೇ ತಂದೆಯನ್ನ ಕಳೆದುಕೊಂಡಿದ್ದ ಮಹದೇವಪ್ಪ ಕೋರಿಯನ್ನ ತಾಯಿ ಮಲ್ಲಮ್ಮ, ದೇವರ ಹುಬ್ಬಳ್ಳಿ ಗ್ರಾಮದಿಂದ ಹೊಲ್ತಿಕೋಟಿಗೆ ಕರೆತಂದಿದ್ದರು. ಅಂದು... Read more »

ಬರೋರು ಬರ್ತಾರೆ, ಹೋಗೋರು ಹೋಗ್ತಾರೆ, ಬಂದು ಹೋಗುವರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ.!

ಬೆಂಗಳೂರು: ಮಧು ಬಂಗಾರಪ್ಪ ಜೆಡಿಎಸ್ ತೊರೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಬರುವವರು ಬರುತ್ತಾರೆ, ಹೋಗುವವರು ಹೋಗುತ್ತಾರೆ ಎಂದಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ಬಂದು ಹೋಗುವವರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಎಷ್ಟು ಬಾರಿ ಕರೆದು ಮಾತನಾಡಿದ್ದೇನೆ.... Read more »

ನಾವು ಭಿಕ್ಷೆ ಕೇಳುತ್ತಿಲ್ಲ, ಕೊಟ್ಟ ಮಾತು ಉಳಿಸಿಕೊಳ್ಳಿ ಎಂದಿದ್ದೇವೆ – ಹೆಚ್​. ವಿಶ್ವನಾಥ್​​

ಮೈಸೂರು: ನಾವು ಭಿಕ್ಷೆ ಕೇಳುತ್ತಿಲ್ಲ. ಕೊಟ್ಟ ಮಾತು ಉಳಿಸಿಕೊಳ್ಳಿ ಎಂದಿದ್ದೇನೆ ಎಂದು ಮಾಜಿ ಸಚಿವ ಹೆಚ್. ವಿಶ್ವನಾಥ್ ಅವರು ಪರೋಕ್ಷವಾಗಿ ಸಿಎಂ ಯಡಿಯೂರಪ್ಪಗೆ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿಂದು  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಾವಿಕ ನಾವಿಕನಾಗೆ ಇರುತ್ತೇನೆ ಹಿಂದೆ ಸರಿಯಲ್ಲ. ನನ್ನನ್ನು ಹಿಂದೆ ಹಾಕೋದಕ್ಕು ಸಾಧ್ಯವಿಲ್ಲ.... Read more »

ಕುಮಾರಸ್ವಾಮಿ ಮಾತಿಗೆ ಮಹತ್ವ ಕೊಡಬೇಕಿಲ್ಲ – ಬಿ ವೈ ವಿಜಯೇಂದ್ರ

ಚಿಕ್ಕೋಡಿ: ಅತಿ ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂಬ ವಿಶ್ವಾಸವಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ ವೈ ವಿಜಯೇಂದ್ರ ಅವರು ಅಭಿಪ್ರಾಯಪಟ್ಟರು. ಚಿಕ್ಕೋಡಿ ಸಮೀಪದ ಯಡೂರು ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ... Read more »

ಬಿಎಸವೈ ಸರ್ಕಾರ ಕಲ್ಲು ಬಂಡೆಯಂತೆ ಸುಭದ್ರವಾಗಿರಲಿದೆ – ಡಿಸಿಎಂ ಲಕ್ಷ್ಮಣ ಸವದಿ

ಬೆಳಗಾವಿ: ರಾಜ್ಯದಲ್ಲಿ, ಸಿಎಂ ಬಿಎಸ್​ ಯಡಿಯೂರಪ್ಪ ಅವರ ಸರ್ಕಾರ ಕಲ್ಲು ಬಂಡೆಯಂತೆ ಸುಭದ್ರವಾಗಿರಲಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಬಣ್ಣಿಸಿದರು. ನಗರದಲ್ಲಿಂದು ಸಾವಯವ ಸಿರಿಧಾನ್ಯ ಮೇಳಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಬರುವ ಬಜೆಟ್​​ನಲ್ಲಿ ಕೃಷಿ ಇಲಾಖೆಗೆ ಹೆಚ್ಚಿನ ಆದ್ಯತೆ... Read more »

ಕೈಲಾಗದಿದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಗೆ ಹೋಗಿ – ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದ ಖಜಾನೆ ಖಾಲಿಯಾಗುತ್ತಿದೆ. ಬಜೆಟ್ ಮಾಡೋದು ಹೇಗಪ್ಪಾ ಅಂತ ಅಧಿಕಾರಿಗಳು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ನಿಮ್ಮ ಕೈಲಾಗದಿದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ರಾಜ್ಯ ಸರ್ಕಾರದ... Read more »

‘ಗಾಂಧೀಜಿ’ಯ ಜೀವಹಾನಿ ಮಾಡಿದವರು, ಇನ್ನು ಮಾಜಿ ಸಿಎಂ ನ ಬೀಡ್ತಾರಾ.? – ಕುಮಾರಸ್ವಾಮಿ

ಬೆಂಗಳೂರು: ಮಹಾತ್ಮ ಗಾಂಧಿ ಅವರನ್ನೆ ಜೀವಹಾನಿ ಮಾಡಿದವರು, ಮಾಜಿ ಮುಖ್ಯಮಂತ್ರಿ ಆದ ನನ್ನನ್ನು ಬಿಡ್ತಾರಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ಡಿ. ಕುಮಾರಸ್ವಾಮಿ ಅವರು ತಮ್ಮ ಜೀವಹಾನಿ ಪತ್ರ ಬರೆದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಜನರ ಮಧ್ಯೆ ಇರುವವರನು, ಭದ್ರತೆಯನ್ನು... Read more »

ಪೊಲೀಸರು ಮಹಿಳೆಗೆ ಮೋಸ ಮಾಡಿದ ವಿಡಿಯೋ ವೈರಲ್

ಉಡುಪಿ: ಸೀಟು ಬೆಲ್ಟ್ ಹಾಕಿದ್ದರೂ ಸೀಟು ಬೆಲ್ಟ್ ಹಾಕಿಲ್ಲ ಅಂತಾ ಪೊಲೀಸರು 500 ರೂಪಾಯಿ ದಂಡ ಹಾಕಿದ ಘಟನೆ ಉಡುಪಿ ಜಿಲ್ಲೆಯ ಹೆಮ್ಮಾಡಿಯಲ್ಲಿ ನಡೆದಿದೆ. ಹೈವೇ ಪೆಟ್ರೋಲ್ ಪೊಲೀಸರು ಮಹಿಳೆಯ ಕಾರು ಬರುತ್ತಿದ್ದಂತೆ ದೂರದಲ್ಲೇ ನಿಲ್ಲಿಸುವಂತೆ ಸೂಚನೆ ನೀಡಿದರು. ಬಳಿಕ ಪೊಲೀಸರು ನೀವು ಸೀಟ್... Read more »

ನಂಜನಗೂಡಿನ ದೇವಾಲಯದಲ್ಲಿ ಲಕ್ಷ ಲಕ್ಷ ಹಣ ದೋಚಿದ ದೇಗುಲದ ಸಿಬ್ಬಂದಿಗಳು.! ಅವರ ಹಿಂದಿರುವ ಪ್ರಭಾವಿಗಳು ಯಾರು…?

ಮೈಸೂರು: ನಂಜನಗೂಡಿನ ನಂಜುಂಡೇಶ್ವರ ದೇವಾಲಯದಲ್ಲಿ ಭಕ್ತರು ನೀಡಿದ್ದ ತುಲಭಾರ ಸೇವೆಯ ಹಣಕ್ಕೆ ಕನ್ನ ಹಾಕಲಾಗಿದ್ದು, ದೇಗುಲದ ಮೂವರು ಸಿಬ್ಬಂದಿಗಳಿಂದಲೇ ದೇವರ ಹಣವನ್ನು ಹೊಡೆದಿದ್ದಾರೆ. ನಂಜನಗೂಡಿನ ಶ್ರೀಕಂಠೇಶ್ವರ ದೇಗುಲದಲ್ಲಿ 17,44,350 ಹಣವನ್ನು ದುರುಪಯೋಗ ಮಾಡಿಕೊಂಡ ಆರೋಪ ಕೇಳಿ ಬಂದಿತ್ತು. 2017/18ನೇ ಸಾಲಿನ ಲೆಕ್ಕಪತ್ರ ಪರಿಶೀಲನೆ ವೇಳೆಯಲ್ಲಿ... Read more »

ಶನಿ ಸಂಚಾರದಲ್ಲಿ ಬದಲಾವಣೆ, ಅನುಗ್ರಹಕ್ಕಾಗಿ ಭಕ್ತರು ಮಾಡಿದ್ದು ಯಾವ ಪೂಜೆ ಗೊತ್ತಾ..?

ಉಡುಪಿ:  ಶನಿ ಮಹಾತ್ಮ ಧನುಸ್ಸು ರಾಶಿಯಲ್ಲಿ ಅಸ್ತವಾಗಿ ಮಕರ ರಾಶಿಯಲ್ಲಿ ಇಂದು ಉದಯವಾಗುತ್ತಿದ್ದಾನೆ. 30 ವರ್ಷಗಳ ಬಳಿಕ ಈ ವಿದ್ಯಮಾನ ನಡೆಯುತ್ತಿದೆ. ಶನಿ ತನ್ನ ಸ್ವಂತ ಮನೆ ಮಕರಕ್ಕೆ ಪ್ರವೇಶ ಮಾಡುತ್ತಿದ್ದು ಎಲ್ಲೆಡೆ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿದೆ. ಉಡುಪಿ ಜಿಲ್ಲೆ ಬನ್ನಂಜೆಯ ಶನೀಶ್ವರ... Read more »

ಸೋತವರಿಗೂ ಸಚಿವ ಸ್ಥಾನ ನೀಡಲೇಬೇಕು – ಹೆಚ್​. ವಿಶ್ವನಾಥ್​​

ಮೈಸೂರು: ಉಪ ಚುನಾವಣೆಯಲ್ಲಿ ಸೋತವರಿಗೂ ಸಚಿವ ಸ್ಥಾನ ಕೊಡಲೇ ಬೇಕು ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಹೆಚ್​. ವಿಶ್ವನಾಥ್​ ಅವರು ಸಿಎಂ ಯಡಿಯೂರಪ್ಪ ಅವರಿಗೆ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಎಂ ಬಿಎಸ್​ ಯಡಿಯೂರಪ್ಪ ಅವರು ಏನು ಹೇಳಿದ್ದಾರೆಂಬುದು ನನಗೆ... Read more »

ಸರ್ಕಾರಿ ಶಾಲೆ ದತ್ತು ಪಡೆದು, ಅಭಿವೃದ್ಧಿಯತ್ತ ಕೊಂಡೊಯ್ದ ಪೊಲೀಸ್ ಅಧಿಕಾರಿಗಳು.!

ಕೊಪ್ಪಳ:  ಪೊಲೀಸ್ ಅಧಿಕಾರಿಗಳೇ ತಮ್ಮ ಎರಡ್ಮೂರು ತಿಂಗಳ ಸಂಬಳ ನೀಡಿ ಸರ್ಕಾರಿ ಶಾಲೆಯನ್ನೆ ದತ್ತು ಪಡೆದ ಘಟನೆ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದೆ. ಸ್ಲಂ ನಂತಿದ್ದ ಆ ಶಾಲೆ ಇದೀಗ ಖಾಸಗಿ ಶಾಲೆಯನ್ನೇ ಮೀರಿಸುವಂತಿದೆ. ಕಲರ್ಫುಲ್ ಚಿತ್ರಗಳ ಮೂಲಕ ಕಂಗೋಳಿಸುತ್ತಿರುವ ಈ ಸರ್ಕಾರಿ ಶಾಲೆಗೆ ಪೊಲೀಸ್... Read more »

ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಬಗ್ಗೆ ಬಿ.ಎಲ್.​ಸಂತೋಷ್ ಹೇಳಿದ್ದೇನು ಗೊತ್ತಾ?​

ಮೈಸೂರು: ಯಾರನ್ನು ಕೇಳಿ ಸಿಎಎ ಕಾಯ್ದೆ ತರುವುದಲ್ಲ, ಇದು ಕೇಂದ್ರ ಸರ್ಕಾರದ ಅಧಿಕಾರ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್​.ಸಂತೋಷ್​ ಅವರು ಶುಕ್ರವಾರ ಹೇಳಿದರು. ಮೈಸೂರಿನ ಸಿಎಎ ಪರವಾದ ಕಾರ್ಯಕ್ರಮದಲ್ಲಿಂದು ಮಾತನಾಡಿದ ಅವರು, ನಮ್ಮಲ್ಲಿ ‘ಒಂದು ಗಾದೆ ಇದೆ, ಕೋಳಿ ಕೇಳಿ... Read more »

ಈ ತಿಂಗಳ ಕೊನೆಯಲ್ಲಿ ಸಂಪುಟ ವಿಸ್ತರಣೆ – ಬಿ.ಸಿ ಪಾಟೀಲ್

ಬೆಂಗಳೂರು: ಈ ತಿಂಗಳ ಕೊನೆಯಲ್ಲಿ ಸಂಪುಟ ವಿಸ್ತರಣೆ ಮಾಡೋದಾಗಿ ಸಿಎಂ ಬಿಎಸ್​ ಯಡಿಯೂರಪ್ಪ ಅವರು ಹೇಳಿದ್ದಾರೆ ಎಂದು ಹಿರೇಕೆರೂರು ಬಿಜೆಪಿ ಶಾಸಕ ಬಿ.ಸಿ ಪಾಟೀಲ್ ಅವರು ಹೇಳಿದರು. ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ತಿಂಗಳು ಸಂಪುಟ ವಿಸ್ತರಣೆ ಮಾಡುತ್ತಿನಿ ಎಂದಿದ್ದು,... Read more »

ಸರ್ಕಾರ ಬಂದು ಇಷ್ಟುದಿನ ಕಳೆದ್ರೂ ನಿಮ್ಮ ಸಾಧನೆ ಏನು – ಸಿದ್ದರಾಮಯ್ಯ.?

ಬೆಂಗಳೂರು: ಬಿಎಸ್​ ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರು ತಮ್ಮ ಉತ್ಸಾಹ ತಮ್ಮ ಏಳ್ಗೆಗಾಗಿ ಶ್ರಮಿಸುತ್ತಿದ್ದಾರೆ. ಇವರಿಂದ ಜನರ ಏಳ್ಗೆಗಾಗಿ ಹಾಗೂ ರಾಜ್ಯದ ಅಭಿವೃದ್ಧಿಗೆ ಏನು ಉಪಯೋಗವಾಗಿಲ್ಲ ಎಂದು  ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಟ್ವೀಟರ್​ನಲ್ಲಿ ರಾಜ್ಯ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಅಂತೆಯೇ, ಆಪರೇಷನ್​ ಕಮಲ... Read more »