ಸಿಎಂ ಬಿಎಸ್​ವೈ ಜೊತೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್​​ನಲ್ಲಿ ಸಂವಾದ

ಬೆಂಗಳೂರು: ದೇಶಾದ್ಯಂತ ಲಾಕ್​ಡೌನ್​ ಮತ್ತು ಕೊರೊನಾ ಭೀತಿ ಬಗ್ಗೆ ರಾಜ್ಯಗಳ ಸಿಎಂಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಗುರುವಾರ ಮಾತುಕತೆ ನಡೆಸಿದ್ದಾರೆ. ಪ್ರಧಾನಿ ಮೋದಿ ಅವರು, ಮೊದಲು ಹರಿಯಾಣ, ಕೇರಳ, ಆಂದ್ರಪ್ರದೇಶ, ತಮಿಳುನಾಡು, ಅಸ್ಸಾಂ ಹಾಗೂ ರಾಜಸ್ಥಾನ ರಾಜ್ಯಗಳ... Read more »

ಪ್ರಧಾನಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪತ್ರ..!

ನವದೆಹಲಿ: ಕೊರೊನಾದಿಂದಾಗಿ ಹಳ್ಳಿಗಳ ಜನರ ಕಷ್ಟ ಹೆಚ್ಚಾಗಿದೆ. ಲಾಕ್ ಡೌನ್ ನಿಂದಾಗಿ ಕೂಲಿಯನ್ನೂ ಮಾಡುವಂತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪತ್ರ ಬರೆದಿದ್ದಾರೆ. ಕೃಷಿ ಕೂಲಿಕಾರ್ಮಿಕರ ಪರ ಸರ್ಕಾರ ನಿಲ್ಲಬೇಕು. ನರೇಗಾ ಯೋಜನೆಯಡಿ ಕೃಷಿ ಕಾರ್ಮಿಕರು ಕೆಲಸ ನಿರ್ವಹಿಸಿದ್ದಾರೆ.... Read more »

ದೇಶದಲ್ಲಿ ಕೋವಿಡ್​​ 19 ಪ್ರಕರಣಗಳ ಸಂಖ್ಯೆ ಒಂದು ಸಾವಿರ ದಾಟಿದೆ

ಹೊಸದೆಹಲಿ: ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್​ ಪ್ರಕರಣಗಳ ಸಂಖ್ಯೆ 1024ಕ್ಕೆ ಏರಿಕೆಯಾಗಿದ್ದು,  ಕೋವಿಡ್​-19 ಸೋಂಕಿನಿಂದ ಈವರೆಗೆ 30 ಜನರು ಸಾವನ್ನಪ್ಪಿದ್ದಾರೆ. https://www.worldometers.info/coronavirus/country/india/ ಮಹಾರಾಷ್ಟ್ರದಲ್ಲಿ 12 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ಮೂಲಕ  ಆ ರಾಜ್ಯವೊಂದರಲ್ಲೇ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ 225ಕ್ಕೆ ತಲುಪಿದೆ.... Read more »

‘ಲಾಕ್‌ಡೌನ್ ಅವಧಿ ವಿಸ್ತರಿಸುವ ಯಾವುದೇ ಯೋಜನೆಗಳಿಲ್ಲ’ – ಕ್ಯಾಬಿನೆಟ್​ ಕಾರ್ಯದರ್ಶಿ

ನವದೆಹಲಿ: ದೇಶದಲ್ಲಿ 21 ದಿನಗಳ ಕಾಲ ಘೋಷಣೆ ಮಾಡಿರುವ ಲಾಕ್​ಡೌನ್​ಅನ್ನು ಮತ್ತೆ ಮುಂದುವರೆಸಲಾಗುವುದು ಎಂಬ ಸುಳ್ಳು ವಂದತಿ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು ಇದು ಆಧಾರರಹಿತವಾದುದ್ದು (Baseless) ಎಂದು ಕೇಂದ್ರ ಕ್ಯಾಬಿನೆಟ್​ ಕಾರ್ಯದರ್ಶಿ ರಾಜೀವ್ ಗೌಬಾ ಸ್ಪಷ್ಟನೆ ನೀಡಿದ್ದಾರೆ. ಲಾಕ್​ಡೌನ್ 21 ಅವಧಿ ಮುಗಿದಾಗ ಅದನ್ನು... Read more »

ಪಿಎಂ–ಕೇರ್ಸ್‌ ನಿಧಿಗೆ ಬಾಲಿವುಡ್​ ನಟ ಅಕ್ಷಯ್​ ಕುಮಾರ್ 25 ಕೋಟಿ ರೂ. ದೇಣಿಗೆ

ಮಹಾರಾಷ್ಟ್ರ, ಮುಂಬೈ: ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಹೋರಾಡುತ್ತಿರುವ ಸರ್ಕಾರಕ್ಕೆ ಕೈಜೋಡಿಸಿರುವ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌, ಪ್ರಧಾನಿ ನರೇಂದ್ರ ಮೋದಿ ಅವರ ‘ಪಿಎಂ–ಕೇರ್ಸ್‌’ ನಿಧಿಗೆ ₹25 ಕೋಟಿ ನೀಡುವುದಾಗಿ ಶನಿವಾರ ಘೋಷಿಸಿದ್ದಾರೆ. ಮಹಾಮಾರಿ ಕೊರೊನಾ ವೈರಸ್​ ಸೋಂಕು ವ್ಯಾಪಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನ... Read more »

ಕೋವಿಡ್​ 19: ಪರಿಹಾರ ನಿಧಿಗೆ ಸುರೇಶ್ ರೈನಾ 52 ಲಕ್ಷ ರೂ. ದೇಣಿಗೆ

ಹೊಸದೆಹಲಿ: ವಿಶ್ವದ್ಯಾದಂತ ಮಹಾಮಾರಿ ಕೊರೊನಾ ವೈರಸ್​​ ಸೋಂಕು ಹರಡಿಕೊಂಡು ಜನರಿಗೆ ಸಂಕಷ್ಟ ತಂದಿಟ್ಟಿದ್ದು ಇದನ್ನು ತಡೆಯಲು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಕಾಲ ದೇಶವನ್ನು ಲಾಕ್​ಡೌನ್​ ಮಾಡುವಂತೆ ಸೂಚಿಸಿದ್ದಾರೆ. ಸದ್ಯ ಕೋವಿಡ್​ 19ಗೆ ದೇಶದಲ್ಲಿ ಈವರೆಗೆ 933 ಮಂದಿ ಸೋಂಕಿತ... Read more »

ದೇಶದಲ್ಲಿ ಸೋಂಕಿತರ ಸಂಖ್ಯೆ 933ಕ್ಕೆ ಏರಿಕೆ, ಅಮೆರಿಕಾದಲ್ಲಿ 1 ಲಕ್ಷಕ್ಕೂ ಹೆಚ್ಚು​

ಹೊಸದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಶನಿವಾರದ ವರೆಗೆ 933 ತಲುಪಿದ್ದು, 84 ಮಂದಿ ಚೇತರಿಕೆ ಕಂಡಿದ್ದಾರೆ. ಮುಂದುವರೆದ ರಾಷ್ಟ್ರ ಅಮೆರಿಕದಲ್ಲಿ 1 ಲಕ್ಷ ದಾಟಿ ವಿಶ್ವದಲ್ಲಿಯೇ ಅತೀ ಹೆಚ್ಚು ಕೋವಿಡ್​ 19 ಸೋಂಕಿತ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸದ್ಯ ಭಾರತದಲ್ಲಿ ಈವರೆಗೆ ಈ... Read more »

‘ಪ್ರಧಾನ ಮಂತ್ರಿ ಗರೀಬ್​ ಕಲ್ಯಾಣ್​ ಯೋಜನೆ’ ಘೋಷಣೆಗೆ ರಾಹುಲ್​ ಗಾಂಧಿ ಶ್ಲಾಘನೀಯ

ನವದೆಹಲಿ: ಕೊರೊನಾ ವೈರಸ್‌ ಸೋಂಕು ತಡೆಗೆ ನಿರ್ಬಂಧ ಹೇರಿರುವುದರಿಂದ ಬಡವರಿಗೆ ಆಗುವ ಅನಾನುಕೂಲ ಕಡಿಮೆ ಮಾಡಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿರುವ ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್’ ಯೋಜನೆಯನ್ನು ಕಾಂಗ್ರೆಸ್​​ ಮುಖಂಡ ರಾಹುಲ್ ಗಾಂಧಿ ಅವರು ಸ್ವಾಗತಿಸಿದ್ದಾರೆ. ಗುರುವಾರ ತಮ್ಮ ಅಧಿಕೃತ... Read more »

ಸೋಷಿಯಲ್​ ಡಿಸ್ಟೆನ್ಸ್​​​ ಬಗ್ಗೆ ಅರಿವು ಮೂಡಿಸಲು ರಸ್ತೆಗಿಳಿದ ಪಶ್ಚಿಮ ಬಂಗಾಳ ಸಿಎಂ

ಪಶ್ಚಿಮ ಬಂಗಾಳ: ಕೊರೊನಾ ವೈರಸ್​ ಸೋಂಕು ತಡೆಗಟ್ಟಲು ಇಡೀ ದೇಶದಲ್ಲೆ 21 ದಿನಗಳ ಕಾಲ ಲಾಕ್​ಡೌನ್​ ಘೋಷಣೆ ಮಾಡಿ ಜನರು ಗುಂಪಾಗಿ ಸೇರುವುದನ್ನು ತಪ್ಪಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಧರಿಸಿದರು. ಸದ್ಯ ಈಗ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೊಲ್ಕತ್ತಾದಲ್ಲಿರುವ... Read more »

ಕೊರೊನಾ ಭೀತಿ ಹಿನ್ನೆಲೆ: ಪ್ರಧಾನಿ ಮೋದಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪತ್ರ

ನವದೆಹಲಿ: ಎಐಸಿಸಿ (ಆಲ್​ ಇಂಡಿಯಾ ಕಾಂಗ್ರೆಸ್​​ ಸಮಿತಿ) ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ದೇಶದಲ್ಲಿ 21 ದಿನಗಳ ವರೆಗೆ ಲಾಕ್‌ಡೌನ್‌ ಮಾಡಿರುವ ನಿರ್ಧಾರವನ್ನು ಬೆಂಬಲಿಸಿದ್ದು, ಕೊರಿನಾ ವೈರಸ್‌ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಮೋದಿ ಅವರ... Read more »

ಕೋವಿಡ್​ 19 ಪ್ರಕರಣಗಳ ಸಂಖ್ಯೆ 667ಕ್ಕೆ ಏರಿಕೆ: ದೇಶದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 16

ಹೊಸದೆಹಲಿ: ಪ್ರತಿನಿತ್ಯ ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಈವರೆಗೆ ದೇಶದಲ್ಲಿ ಒಟ್ಟು 667 ಪ್ರಕರಣಗಳು ಬೆಳಕಿಗೆ ಬಂದಿರುವುದು ವರದಿಯಾಗಿದೆ ಹಾಗೂ ಈ ಸೋಂಕಿಗೆ ಬಲಿಯಾದವರ ಸಂಖ್ಯೆ 16ಕ್ಕೆ ಏರಿಕೆ ಆಗಿದೆ. ಇಂದು ರಾಜಸ್ಥಾನದ ಭಿಲ್ವಾರದಲ್ಲಿ 73ರ ಹರೆಯದ ವ್ಯಕ್ತಿಯೊಬ್ಬರು ಕೋವಿಡ್-19 ಸೋಂಕಿನಿಂದ... Read more »

ಕೊರೊನಾಗೆ ದೇಶ ಲಾಕ್​ಡೌನ್​: ಕೇಂದ್ರ ಸರ್ಕಾರದಿಂದ ವಿಶೇಷ ಪ್ಯಾಕೇಜ್​ನ ಹೈಲೆಟ್ಸ್ ಇಲ್ಲಿದೆ​​​​​

ಹೊಸದೆಹಲಿ: ಮಹಾಮಾರಿ ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ದೇಶದಲ್ಲಿ ಹೇರಲಾಗಿರುವ ಲಾಕ್ ಡೌನ್ ಹಿನ್ನೆಲೆಯಲ್ಲಿ ದೇಶದ ನಾಗರಿಕರಿಗೆ ಕೇಂದ್ರ ಸರ್ಕಾರ 1.7 ಲಕ್ಷ ಕೋಟಿ ರೂ. ಮೌಲ್ಯದ ವಿಶೇಷ ಆಹಾರ ಪ್ಯಾಕೇಜ್ ಘೋಷಣೆ ಮಾಡಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್... Read more »

ಬಸ್ ಗಳನ್ನ ಬಂದ್ ಮಾಡಿದರೂ ಕಷ್ಟ ಪಟ್ಟು ಇನ್ಯಾವ್ದೋ ರೀತಿಯಲ್ಲಿ ಮನೆ ಸೇರುವ ಅವಿವೇಕ ತೋರಬೇಡಿ

ಇಟಲಿ: ಕನ್ನಡತಿ ಪ್ರತಿಭಾ ಹೆಗಡೆ ರಾಜ್ಯದ ಜನರಿಗೆ ಸಾಮಾಜಿಕ ಜಾಲತಾಣದ ಮೂಲಕ ಇಟಲಿಯಿಂದ ಬುಧವಾರ ವಿಡಿಯೋ ಮನವಿ ಮಾಡಿದ್ದಾರೆ. ದಯವಿಟ್ಟು ಸರ್ಕಾರ ಹೇಳಿದ ಮಾತುಗಳನ್ನು ಕೇಳಿ.  ಎಲ್ಲಾ ಮನೆಯಲ್ಲೇ ಇರಿ. ಯಾರು ಮನೆಯಿಂದ ಹೊರಗಡೆ ಬರಬೇಡಿ ಎಂದು ಜನರಿಗೆ ಮನವಿ ಮಾಡಿಕೊಂಡಿದ್ದಾರೆ. ಪ್ರತಿಭಾ ಹೆಗಡೆ... Read more »

ಮಧ್ಯರಾತ್ರಿಯಿಂದಲೇ 21 ದಿನಗಳ ಕಾಲ ಇಡೀ ಭಾರತವೇ ಲಾಕ್​ಡೌನ್ ​- ಪಿಎಂ ಮೋದಿ

ನವದೆಹಲಿ: ಇಂದು ಮಧ್ಯರಾತ್ರಿಯಿಂದಲೇ ಇಡೀ ಭಾರತ ಲಾಕ್​ಡೌನ್​ ಆಗಿ ಇರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಘೋಷಣೆ ಮಾಡಿದ್ದಾರೆ. ದೇಶಾದ್ಯಂತ ಬಹಳ ವೇಗವಾಗಿ ಮಹಾಮಾರಿ ಕೊರೊನಾ ವೈರಸ್ ಸೋಂಕು​​ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು,... Read more »

ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ: ಇಂದು ರಾತ್ರಿ ಶಿವರಾಜ್‌ ಸಿಂಗ್ ಚೌಹಾಣ್ ಸಿಎಂ ಆಗಿ​ ಪ್ರಮಾಣವಚನ?

ಮಧ್ಯಪ್ರದೇಶ: ಈ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಗೆ ಕ್ಷಣಗಣನೆ ಶುರುವಾಗಿದ್ದು, ರಾಜ್ಯದ ಮುಖ್ಯಮಂತ್ರಿಯಾಗಿ ಇಂದು ರಾತ್ರಿ ಶಿವರಾಜ್‌ ಸಿಂಗ್ ಚೌಹಾಣ್ ಅವರು ಅಧಿಕಾರ ಸ್ವೀಕರಿಸುವ ಸಾಧ್ಯತೆಯಿದೆ ಎಂದು ವರದಿ ಹೇಳುತ್ತಿವೆ. ಒಟ್ಟು 22 ಶಾಸಕರ ರಾಜೀನಾಮೆಯಿಂದಾಗಿ ಕಾಂಗ್ರೆಸ್‌ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದರಿಂದ ಮುಖ್ಯಮಂತ್ರಿ... Read more »

ದೇಶದ್ಯಾಂತ ಮಾರ್ಚ್​ 22 ರಂದು ಜನತಾ ಕರ್ಫ್ಯೂ – ಪ್ರಧಾನಿ ಮೋದಿ ಘೋಷಣೆ

ನವದೆಹಲಿ: ಜಗತ್ತು ಇಂದು ಅತಿದೊಡ್ಡ ವಿಪತ್ತು ಎದುರಿಸುತ್ತಿದೆ. ನೈಸರ್ಗಿಕ ವಿಕೋಪಗಳಾದರೆ ಅದು ಕೆಲ ದೇಶಗಳಿಗಷ್ಟೇ ಸೀಮಿತವಾಗಿರುತ್ತದೆ. ಆದರೆ, ಈ ಬಾರಿ ಇಡೀ ಮಾನವ ಕುಲವನ್ನೇ ಈ ಕೊರೊನಾ ವೈರಸ್‌ ಸೋಂಕು ಎಂಬ ಮಹಾಮಾರಿ ಅಪಾಯದೆಡೆಗೆ ಕೊಂಡೊಯ್ಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.... Read more »