Top

'ತನಿಖೆಯಲ್ಲಿ ನನ್ನ ಕೈವಾಡ ಇದೆ ಎಂದು ಸಾಬೀತಾದರೆ ನನ್ನ ಆಸ್ತಿ ಸರ್ಕಾರಕ್ಕೆ ಕೊಡಲು ಸಿದ್ಧ' - ಜಮೀರ್​ ಅಹಮದ್​

  • ಫಾಜಿಲ್ ನಾಲ್ಕು ವರ್ಷದ ಹಿಂದೆ ಪರಿಚಯ, ಈಗ ಇಲ್ಲ.
  • ಸಂಜನಾರನ್ನ ನಾನು ಬೆಂಗಳೂರಲ್ಲಿ ನೋಡಿಲ್ಲ.

ತನಿಖೆಯಲ್ಲಿ ನನ್ನ ಕೈವಾಡ ಇದೆ ಎಂದು ಸಾಬೀತಾದರೆ ನನ್ನ ಆಸ್ತಿ ಸರ್ಕಾರಕ್ಕೆ ಕೊಡಲು ಸಿದ್ಧ - ಜಮೀರ್​ ಅಹಮದ್​
X

ಬೆಂಗಳೂರು: ಫಾಜಿಲ್ ನಾಲ್ಕು ವರ್ಷದ ಹಿಂದೆ ಪರಿಚಯ, ಈಗ ಇಲ್ಲ. ಯಾರಾರೋ ಬರ್ತಿರ್ತಾರೆ ಅವರೆಲ್ಲ ಆಪ್ತರು ಅಂತ ಹೇಳೋಕ್ಕಾಗುತ್ತಾ(?) ಎಂದು ಮಾಜಿ ಸಚಿವ ಜಮೀರ್​ ಅಹಮದ್ ಖಾನ್ ಅವರು ಶುಕ್ರವಾರ ಹೇಳಿದರು.

ಮಾಜಿ ಸಚಿವ ಜಮೀರ್​ ಅಹಮದ್​ ಖಾನ್​ ಅವರ ಮೇಲೆ ಡ್ರಗ್ಸ್​ ಆರೋಪ ಕೇಳಿಬರುತ್ತಿರುವ ಹಿನ್ನೆಲೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಸರ್ಕಾರ ಯಾವುದಿದೆ(?) ಕಾಂಗ್ರೆಸ್ ಸರ್ಕಾರ ಇದೆಯಾ(?) ಬಿಜೆಪಿ ಸರ್ಕಾರ ಇದೆ. ಸಂಜನಾ ಎಲ್ಲಿದ್ದಾರೆ(?) ಪೊಲೀಸ್ ಕಸ್ಟಡಿಯಲ್ಲಿದ್ದಾರೆ ತಾನೇ. ತನಿಖೆ ಮಾಡಲಿ. ನಾನು ಪ್ರಕರಣದಲ್ಲಿ ಇದ್ದದ್ದು ಸಾಬೀತಾದರೆ ರಾಜ್ಯದಲ್ಲಿರೋ ನನ್ನ ಆಸ್ತಿ ಸರ್ಕಾರಕ್ಕೆ ಕೊಟ್ಟು ಬಿಡುತ್ತೇನೆ ಎಂದಿದ್ದಾರೆ.

ಇನ್ನು ಸಂಬರಗಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಸಂಬರಗಿ ಯಾರ್ರೀ ಕಾಂಜಿಪಿಂಜಿ ಅವನು ಹೇಳೋದು ಕೇಳೀದ್ಯಾಕೆ(?) ಸರ್ಕಾರದ ತನಿಖೆ ಮಾಡಲಿ. ನಾನು ಕಾನೂನು ಹೋರಾಟ ಮಾಡುತ್ತೇನೆ. ಸಂಜನಾರನ್ನ ನಾನು ಬೆಂಗಳೂರಲ್ಲಿ ನೋಡಿಲ್ಲ, ಶ್ರೀಲಂಕಾದಲ್ಲಿ ಯಾಕೆ ಇಲ್ಲೇ ನೋಡಿಲ್ಲ ಎಂದು ಜಮೀರ್​ ಅಹಮದ್​ ಖಾನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಸಿದ್ದರಾಮಯ್ಯ ಮುಂದೆ ಜಮೀರ್​ ಅಹಮದ್​ ಖಾನ್​ ವಿವರಣೆ

ಆ ಸಂಬರಗಿ ಯಾರು ಅಂತಾನೇ ಗೊತ್ತಿಲ್ಲ ಸಿದ್ದರಾಮಯ್ಯ ಸಾರ್. ಅವನೊಬ್ಬ ಬಿಜೆಪಿ ಏಜೆಂಟ್. ಸುಮ್ಮನೆ ನನ್ನ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಬಿಜೆಪಿಯವರೇ, ನನ್ನನ್ನ ಸಿಲುಕಿಸೋಕೆ ಅವನನ್ನ ಬಿಟ್ಟಿರಬಹುದು ಅದಕ್ಕೆ ಅವನ ಮೇಲೆ ದೂರು ನೀಡಿದ್ದೇನೆ ಎಂದು ಸಿದ್ದರಾಮಯ್ಯಗೆ ಜಮೀರ್​ ವಿವರಣೆ ನೀಡಿದ್ದಾರೆ.

ಇನ್ನು ಸಂಜನಾ ಕೂಡ ಎಲ್ಲೂ ನನ್ನ ಬಗ್ಗೆ ಹೇಳಿಲ್ಲ, ಸುಖಾಸುಮ್ಮನೆ ನನ್ನನ್ನ ಎಳೆದು ತರುವ ಕೆಲಸ ಮಾಡುತ್ತಿದ್ದಾರೆ. ನನಗೂ ಡ್ರಗ್ಸ್ ವಿಚಾರಕ್ಕೂ ಸಂಬಂಧವಿಲ್ಲ. ಹೋಗಿ ಬಂದು ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಬಳಿ ಹೇಳಿದ್ದಾರೆ.

ಸದ್ಯ ಸದನ ಹತ್ತಿರ ಬರ್ತಿದೆ ನಾನು ನೋಡಿಕೊಳ್ಳುತ್ತೇನೆ. ಏನಾದರೂ ನಿಜ ಇದ್ದರೆ ಹೇಳಿಬಿಡು. ಸದನದಲ್ಲಿ ಇದರ ಬಗ್ಗೆ ನಾನೇ ಜೋರು ಮಾಡುತ್ತೇನೆ ಎಂದು ಜಮೀರ್​ ಅಹಮದ್​ ಖಾನ್​ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅಭಯ ನೀಡಿದ್ದಾರೆ.

Next Story

RELATED STORIES