Top

ಕೋವಿಡ್ 19 ಪೀಡಿತರಿಗೆ ಬ್ರೈನ್ ಸ್ಟ್ರೋಕ್ ಆಗುವ ಸಾಧ್ಯತೆ

ಮೆದುಳಿಗೆ ರಕ್ತ ಸರಾಗವಾಗಿ ಹೋಗಲು ಅಡೆತಡೆ ಉಂಟಾದಾಗ ಪಾಶ್ವಾವಾಯು ತಗುಲುವ ಸಾಧ್ಯಾತೆಗಳಿವೆ.

ಕೋವಿಡ್ 19 ಪೀಡಿತರಿಗೆ ಬ್ರೈನ್ ಸ್ಟ್ರೋಕ್ ಆಗುವ ಸಾಧ್ಯತೆ
X

ಬೆಂಗಳೂರು: ಕೊರೋನಾ ದೇಶಕ್ಕೆ ಕಾಲಿಟ್ಟು ಬರೋಬ್ಬರಿ 8 ತಿಂಗಳು ಕಳೆದಿದೆ. ಶೀತ ಕೆಮ್ಮು ನೆಗಡಿಯಿಂದ ಆರಂಭವಾದ ಕೊರೋನಾ ಲಕ್ಷಣ ಸದ್ಯ ದಿನಕ್ಕೊಂದು ರೂಪ ಪಡೆದುಕೊಳ್ತಿದೆ. ಕೊರೊನಾದಿಂದ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ತಿರೋ ಬೆನ್ನಲ್ಲೇ ಇದೀಗ ಮೆದುಳಿಗೂ ಹಾನಿಯಾಗುವ ಆಘಾತಕಾರಿ ಮಾಹಿತಿ ಹೊರಬದ್ದಿದೆ.

ರಾಜ್ಯ ಹಾಗೂ ದೇಶದಲ್ಲಿ ರಣಕೇಕೆ ಹಾಕುತ್ತಿದ್ದ ಕ್ರೂರಿ ಕೊರೊನಾ ಸೋಂಕಿತರ ಸಂಖ್ಯೆ ಸದ್ಯ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಸೋಂಕಿತರು ಕಡಿಮೆ ಆಗುತ್ತಿದ್ದಾರೆ ಅಂದುಕೊಳ್ಳುವ ಹೊತ್ತಿಗೆ ಭಯ ಹುಟ್ಟಿಸುವ ಮತ್ತೊಂದು ಅಂಶ ಹೊರಬಿದ್ದಿದೆ. ಜ್ವರ, ಕೆಮ್ಮು, ಶೀತ, ಉಸಿರಾಟದ ಸಮಸ್ಯೆಗಳನ್ನ ಒಳಗೊಂಡಿದ್ದ ಕೊರೋನಾ ಮತ್ತೊಂದು ಲಕ್ಷಣ ಅಧ್ಯಾಯನದಲ್ಲಿ ಹೊರಬಿದ್ದಿದೆ.

ಸದ್ಯ ಇಷ್ಟು ದಿನಗಳ ಕಾಲ ಕಿಡ್ನಿ, ಹೃದಯಕ್ಕೆ ಸಂಬಂಧಿಸಿದ ಹಾಗೂ ಉಸಿರಾಟದ ತೊಂದರೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕರೋನಾ ಇದೀಗ ಮೆದುಳಿಗೆ ಸಂಭಂದಿಸಿದ ಕಾಯಿಲೆಗೂ ಕಾರಣವಾಗುತ್ತಿದೆ. ಮೆದುಮೇಹ, ಅಧಿಕ ರಕ್ತದ ಒತ್ತಡ ಇರುವಂತಹ ವ್ಯಕ್ತಿಗೆ ಕೊರೋನಾ ಬಂದಲ್ಲಿ ನರಮಂಡಲಕ್ಕೆ ಸಂಭಂಧಿಸಿದ ಸಮಸ್ಯೆಯಾಗುತ್ತಿದೆ. ಬ್ರೈನ್ ಸ್ಟ್ರೋಕ್ ಸಮಸ್ಯೆಗಳು ಎದುರಾಗುತ್ತಿವೆ.

ಮಧುಮೇಹ, ಮೆದುಳಿಗೆ ಸಂಭಂಧಿಸಿದ ಕಾಯಿಲೆಗಳಿದ್ದ ವ್ಯಕ್ತಿಗೆ ಕೊರೊನಾ ಬಂದಂತಹ ಸಂದರ್ಭದಲ್ಲಿ ರಕ್ತ ಹೆಪ್ಪುಗೆಡುವಂತಹ ಚಾನ್ಸಸ್​ಗಳು ತುಂಬಾ ಹೆಚ್ಚು. ಒಂದು ವೇಳೆ ಹೆಮ್ಮಗಟ್ಟಿರುವ ರಕ್ತ ಮೆದುಳುಗೆ ಹೋಗಿದ್ದೇ ಆದಲ್ಲಿ ಬ್ರೈನ್ ಸ್ಟ್ರೋಕ್ ಆಗುತ್ತದೆ. ಈ ಕುರಿತಾಗಿ ಹಿರಿಯ ನರರೋಗ ತಜ್ನರುಗಳು 600 ಜನ ಕೊವೀಡ್ ಪೆಶೆಂಟ್​​ಗಳನ್ನ ಅಧ್ಯಯನ ನಡೆಸಿದ್ದಾರೆ. ಅವರಲ್ಲಿ ಮರೆಯುವಿಕೆ, ಅತಿಯಾದ ತಲೆನೋವು ಬರುವುದು ರೋಗ ನಿರೋಧಕ ಶಕ್ತಿ ಕುಂದುವುದು ಗೊತ್ತಾಗಿದೆ. ಈ ವೇಳೆ ಮೆದುಳಿಗೆ ರಕ್ತ ಸರಾಗವಾಗಿ ಹೋಗಲು ಅಡೆತಡೆ ಉಂಟಾದಾಗ ಪಾಶ್ವಾವಾಯು ತಗುಲುವ ಸಾಧ್ಯಾತೆಗಳಿವೆ. ಹೀಗಾಗಿ ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ ವೈದ್ಯರು.

ಒಂದು ಕಡೆ ಕೊರೊನಾಗೆ ಇನ್ನೂ ವಾಕ್ಸಿನ್ ಸಿಕ್ತಿಲ್ಲಾ. ಇನ್ನೊಂದು ಕಡೆ ತಜ್ಞರು ಎರಡನೇ ಅಲೆ ಆರಂಭವಾಗಲಿದೆ ಅಂತಿದಾರೆ. ಅದೆಲ್ಲದರ ಮಧ್ಯೆ ಕೊರೊನಾ ಮೆದುಳಿಗೂ ಹಾನಿ ಮಾಡುತ್ತಿರೋದು ಆತಂಕಕ್ಕೆ ಕಾರಣವಾಗಿದೆ.

Next Story

RELATED STORIES