Top

ಆ್ಯಕ್ಷನ್​ ಅಲ್ಲ ಮತ್ತೆ ಕಾಮಿಡಿ ಪಂಚ್​ ಕೊಡಲು ಕೋಮಲ್​ ರೆಡಿ

ಆ್ಯಕ್ಷನ್​ ಅಲ್ಲ ಮತ್ತೆ ಕಾಮಿಡಿ ಪಂಚ್​ ಕೊಡಲು ಕೋಮಲ್​ ರೆಡಿ
X

ಸೆನ್ಸೇಷನಲ್​ ಸ್ಟಾರ್​ ಕೋಮಲ್​ ಯಾಕೋ ಇದ್ದಕ್ಕಿದಂತೆ ಸೈಲೆಂಟಾಗ್ಬಿಟ್ಟಿದರು. ಕೆಂಪೇಗೌಡ-2 ಸಿನಿಮಾನೇ ಕೊನೆ. ಆ ನಂತರ ಅವರ ಹೊಸ ಸಿನಿಮಾ ಕಥೆಯೂ ಇಲ್ಲ. ಅವರು ಎಲ್ಲೂ ಹೆಚ್ಚು ಕಾಣಿಸಿಕೊಳ್ಳಲೂ ಇಲ್ಲ. ಇದೀಗ ಕೋಮಲ್​ ಹೊಸ ಸಿನಿಮಾ ಅನೌನ್ಸ್​ ಆಗಿದೆ. ಅಭಿಮಾನಿಗಳು ಅವ್ರನ್ನ ಹೇಗೆ ನೋಡ್ಬೇಕು ಅಂದುಕೊಂಡಿದ್ರೋ ಅದೇ ರೀತಿ ರಂಜಿಸೋಕ್ಕೆ ಬರ್ತಿದ್ದಾರೆ.

ಕೋಮಲ್​​ ಅಂದ್ರೆ, ಕಾಮಿಡಿ. ಕಾಮಿಡಿ ಅಂದ್ರೆ ಕೋಮಲ್. ಜಗ್ಗೇಶ್​ ಸಹೋದರ ತೆರೆಮೇಲೆ ಬಂದ್ರೆ, ಪ್ರೇಕ್ಷಕರು ಬಿದ್ದು ಬಿದ್ದು ನಗ್ತಾರೆ. ಪ್ರೇಕ್ಷಕರನ್ನ ಹೊಟ್ಟೆ ಹುಣ್ಣಗಿಸುವಂತೆ ನಗಿಸುವ ತಾಕತ್ತು ಕೋಮಲ್​​ಗಿದೆ. ಅದು ಸಾಕಷ್ಟು ಸಿನಿಮಾಗಳಲ್ಲಿ ಸಾಬೀತಾಗಿದೆ.

ಕಾಮಿಡಿ ಟೈಮಿಂಗ್​ನಿಂದ ಪ್ರೇಕ್ಷಕರ ಹೊಟ್ಟೆ ಹುಟ್ಟಾಗುವಂತೆ ನಗಿಸ್ತಿದ್ದ ನಟ ಕೋಮಲ್​. ಅದ್ಯಾಕೋ ಕೆಂಪೇಗೌಡ -2 ಸಿನಿಮಾ ಮಾಡೋಕ್ಕೆ ಹೋಗಿ ಕೋಮಲ್​ ಕಳೆದೇ ಹೋಗಿ ಬಿಟ್ಟಿದ್ದರು. ಇದೀಗ ಮತ್ತೆ ಹಳೇ ಖದರ್​ನಲ್ಲೇ ಪ್ರೇಕ್ಷಕರ ಮನ ಗೆಲ್ಲೋಕ್ಕೆ ಕೋಮಲ್​ ಬರ್ತಿದ್ದಾರೆ.

ಕೆಂಪೇಗೌಡ-2 ಸಿನಿಮಾದಲ್ಲಿ ಪೊಲೀಸ್​ ಆಫಿಸರ್​ ಪಾತ್ರದಲ್ಲಿ ಕೋಮಲ್​ ಕಮಾಲ್​ ಮಾಡಿದರು. ಆದರೆ, ಸಿನಿಮಾ ಸಕ್ಸಸ್​ ಆಗ್ಲಿಲ್ಲ. 'ಕೊಂಗ್ಕಾ ಪಾಸ್'​ ಅನ್ನೋ ಹೊಸ ಸಿನಿಮಾದಲ್ಲಿ ಕೋಮಲ್​​ ಆರ್ಮಿ ಆಫೀಸರ್​ ರೋಲ್​ನಲ್ಲಿ ಬಣ್ಣ ಹಚ್ಚಿದ್ದಾರೆ. ಮಿರೋಷ್​ ಮೋಹನ್​​ ನಿರ್ದೇಶನದ ಈ ಚಿತ್ರಕ್ಕೆ ಸ್ವತಃ ಕೋಮಲ್​ ಕತೆ ಬರೆದಿದ್ದಾರೆ. ಆದರೆ, ಇದೀಗ ಹೊಸ ಚಿತ್ರವೊಂದಕ್ಕೆ ಕೋಮಲ್​ ಗ್ರೀನ್​ ಸಿಗ್ನಲ್​ ಕೊಟ್ಟಿದ್ದು, ಇದು ಕಾಮಿಡಿ ಸಿನಿಮಾ ಅನ್ನೋದು ವಿಶೇಷ.

ಕೋಮಲ್​ ಇನ್ಮುಂದೆ ಕಾಮಿಡಿ ಸಿನಿಮಾಗಳಲ್ಲಿ ನಟಿಸೋದೇ ಇಲ್ವೇನೋ ಅಂದುಕೊಂಡಿದ್ದ ಪ್ರೇಕ್ಷಕರಿಗೆ ಈ ಸುದ್ದಿ ಸಂತಸ ತಂದಿದೆ. ಚಮಕ್', 'ಅಯೋಗ್ಯ' ಸೇರಿದಂತೆ ಸಾಲು ಸಾಲು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ಟಿ.ಆರ್. ಚಂದ್ರಶೇಖರ್‌ ನಿರ್ಮಾಣದ ಹೊಸ ಚಿತ್ರದಲ್ಲಿ ಕೋಮಲ್​ ಹೀರೋ ಆಗಿ ನಟಿಸುತ್ತಿದ್ದಾರೆ. ನಿಮಾಗಳಿಗೆ ಸಂಭಾಷಣೆ ಬರೆದಿರುವ ಕೆ.ಎಲ್​ ರಾಜಶೇಖರ್​ ಈ ಚಿತ್ರಕ್ಕೆ ಆ್ಯಕ್ಷನ್ ಕಟ್​ ಹೇಳಿಕೊಳ್ಳುತ್ತಿದ್ದಾರೆ.

ಸೋಷಿಯಲ್​ ಮೀಡಿಯಾದಲ್ಲಿ ಸದಾ ಆಕ್ಟೀವ್​ ಆಗಿರೋ ಜಗ್ಗೇಶ್​, ಕೋಮಲ್​ ಹೊಸ ಸಿನಿಮಾ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಪ್ರೇಕ್ಷಕರು ಕೋಮನ್​ ಅವ್ರನ್ನ ಹೇಗೆ ನೋಡ್ಬೇಕು ಅಂದುಕೊಂಡಿದ್ರೋ ಅದೇ ರೀತಿಯಲ್ಲಿ ಈ ಸಿನಿಮಾ ಬರುತ್ತೆ. ಅದ್ಭುತ ಕಾಮಿಡಿ ಚಿತ್ರವಾಗುತ್ತೆ, ಅಂತ ಟ್ವೀಟ್​ ಮಾಡಿದ್ದಾರೆ.

ಕ್ರಿಸ್ಟಲ್​ ಪಾರ್ಕ್​ ಸಿನಿಮಾಸ್​ ಬ್ಯಾನರ್​ನ ಎಂಟನೇ ಸಿನಿಮಾ ಇದಾಗಲಿದೆ. ಕೆ.ಎಲ್​ ರಾಜಶೇಖರ್ ಹೇಳಿದ ಕಥೆ ಕೇಳಿ ಚಂದ್ರಶೇಖರ್​ ಸಿನಿಮಾ ನಿರ್ಮಾಣಕ್ಕೆ ಒಪ್ಪಿದ್ದಾರೆ. ಕೋಮಲ್​ ಕೂಡ ಕಥೆ ಕೇಳಿ ನಟಿಸೋಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ಧಾರೆ. ಶೀಘ್ರದಲ್ಲೇ ಈ ಸಿನಿಮಾ ಸೆಟ್ಟೇರಲಿದೆ. ಒಟ್ನಲ್ಲಿ ಕೋಮಲ್​ ಮತ್ತೆ ಕಾಮಿಡಿ ಸಿನಿಮಾಗಳತ್ತ ಹೊರಳಿರೋದು ಅಭಿಮಾನಿಗಳಿಗೆ ಸಂತಸ ತಂದಿದೆ.

Next Story

RELATED STORIES