Top

ಸ್ವಾತಂತ್ರ್ಯ ದಿನಾಚರಣೆಗೆ ಸ್ಯಾಂಡಲ್​ವುಡ್​ನಿಂದ ವಿಶೇಷ ಉಡುಗೊರೆ

ಸ್ವಾತಂತ್ರ್ಯ ದಿನಾಚರಣೆಗೆ ಸ್ಯಾಂಡಲ್​ವುಡ್​ನಿಂದ ವಿಶೇಷ ಉಡುಗೊರೆ
X

ಆಗಸ್ಟ್ 15, ಇಡೀ ದೇಶವೇ ಸಂಭ್ರಮಿಸುವ ದಿನ. ನಮ್ಮ ಭಾರತ ದೇಶದ 74ನೇ ಸ್ವಾತಂತ್ರೋತ್ಸವದ ದಿನ. ಈ ಸಂಭ್ರಮವನ್ನ ದುಪ್ಪಟ್ಟು ಮಾಡಲು ನಮ್ಮ ಸ್ಯಾಂಡಲ್​ವುಡ್​ ಸೆಲೆಬ್ರೆಟಿಗಳು ವಿಶೇಷವಾದ ಉಡುಗೊರೆಯೊಂದನ್ನ ಕೊಡ್ತಿದ್ದಾರೆ. ಈ ಸ್ವತಂತ್ರ್ಯ ಹಬ್ಬಕ್ಕೆ ಸಿನಿಮಾ ಸ್ಟಾರ್​ಗಳು ಒಟ್ಟಾಗಿ ಕಾಣಿಸಿಕೊಳ್ತಿದ್ದಾರೆ.

ಜಾತಿ, ಧರ್ಮ ಇದೆಲ್ಲವನ್ನ ಮೀರಿ ಎಲ್ರೂ ಒಟ್ಟಾಗಿ ಆಚರಿಸೋ ಹಬ್ಬ ನಮ್ಮ ಸ್ವತಂತ್ರ್ಯ ದಿನಾಚರಣೆ. ಇಡೀ ದೇಶವೇ ಆ ದಿನ ಕೇಸರಿ ಬಿಳಿ ಹಸಿರಿನ ಬಾವುಟ ಹಿಡಿದು ಏಕತೆಯನ್ನ ಸಾರುತ್ತಾ, ಸಂಭ್ರಮಾಚರಣೆ ಮಾಡ್ತಾರೆ. ಈ ವರ್ಷದ ಇಂಡಿಪೆಂಡನ್ಸ್​ ಡೇ ಸಂಭ್ರಮವನ್ನ ಡಬಲ್​ ಮಾಡೋಕ್ಕೆ ನಮ್ಮ ಸ್ಯಾಂಡಲ್​ವುಡ್​ ಸ್ಟಾರ್ಸ್​ ಒಟ್ಟಾಗಿದ್ದಾರೆ.

74 ನೇ ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ವರುಣ್​ ಸ್ಟುಡಿಯೋಸ್​ ವತಿಯಿಂದ ನಮ್ಮ ಭಾರತ ಎಂಬ ಟೈಟಲ್​ನಲ್ಲಿ ಆಲ್ಬಂ ಸಾಂಗೊಂದು ಬಿಡುಗಡೆಯಾಗಿದೆ. ನಿರ್ಮಾಪಕ ವರುಣ್​ ಚಿತ್ರರಂಗದ ಸಾಕಷ್ಟು ಸೆಲೆಬ್ರೆಟಿಗಳನ್ನ ಒಟ್ಟಾಗಿ ಸೇರಿಸಿ, ಈ ಹಾಡನ್ನ ರೆಡಿಮಾಡಿದ್ದಾರೆ. ಎಲ್ಲಾ ಸೆಲೆಬ್ರೆಟಿಗಳು ಕೈಯ್ಯಲ್ಲಿ ಭಾವುಟ ಹಿಡಿದು, ನಮ್ಮ ಭಾರತ ಅಂತ ಎದೆ ತಟ್ಟಿಕೊಂಡು ಹಾಡಿದ್ದಾರೆ.

ಅಂದ್ಹಾಗೇ ಈಗಾಗಲೇ ನಮ್ಮ ಭಾರತ ಸಾಂಗ್​ ಝಲಕ್ ಎಕ್ಸ್​​ಕ್ಲೂಸಿವ್​ ಆಗಿ ಟಿವಿ5ಗೆ ಸಿಕ್ಕಿದ್ದು, ಕಂಪ್ಲೀಟ್ ಹಾಡನ್ನ ಆಗಸ್ಟ್ 15 ರಂದು ಬೆಳಿಗ್ಗೆ 7.30ಕ್ಕೆ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್ ಬಿಡುಗಡೆಮಾಡಲಿದ್ದಾರೆ ಹಾಗೂ ಶಿವಣ್ಣ ಸೇರಿದಂತೆ ಪುನೀತ್ ರಾಜ್​ಕುಮಾರ್, ಶ್ರೀಮುರಳಿ, ರಕ್ಷಿತಾ ಪ್ರೇಮ್, ರಚಿತಾರಾಮ್, ಧನಂಜಯ ಹೀಗೆ ಅನೇಕ ಸೆಲೆಬ್ರೆಟಿಗಳು ಈ ಹಾಡಿನಲ್ಲಿ ಭಾಗಿಯಾಗಿದ್ದಾರೆ.

ಇನ್ನು ಈ ಹಾಡಿಗೆ , ನಿನ್ನ ಗುಂಗಲ್ಲಿ ಖ್ಯಾತಿಯ ಅದ್ವಿಕ್​ ಮ್ಯೂಸಿಕ್​ ಮಾಡಿದ್ದಾರೆ. ಭಜರಂಗಿ ಮೋಹನ್ ಸಾಹಿತ್ಯ ಮತ್ತು ಕೊರಿಯೊಗ್ರಫೀ ಮಾಡಿದ್ದು, ಅನಿರುದ್​ ಶಾಸ್ತ್ರಿ ದನಿಯಾಗಿದ್ದಾರೆ. ಸದ್ಯ ಸ್ವತಂತ್ರ್ಯ ದಿನಾಚರಣೆಗೆ ಸ್ಯಾಂಡಲ್​ವುಡ್​ನಿಂದ ಸಿಗ್ತಿರೋ ಈ ವಿಶೇಷ ಉಡುಗೊರೆಗೆ ಸಿನಿಪ್ರಿಯರು ಬಹುಪರಾಕ್​ ಹೇಳುತ್ತಿದ್ದಾರೆ.

Next Story

RELATED STORIES