Top

'ಆನೆಗಳನ್ನು ಸಂರಕ್ಷಿಸಲು ಮತ್ತು ಸಹಾಯ ಮಾಡುವುದಾಗಿ ನಾವೆಲ್ಲರೂ ಪ್ರತಿಜ್ಞೆ ಮಾಡೋಣ'

ಆನೆಗಳನ್ನು ಸಂರಕ್ಷಿಸಲು ಮತ್ತು ಸಹಾಯ ಮಾಡುವುದಾಗಿ ನಾವೆಲ್ಲರೂ ಪ್ರತಿಜ್ಞೆ ಮಾಡೋಣ
X

ಬೆಂಗಳೂರು: ಇಂದು ಆಗಸ್ಟ್ 12 ವಿಶ್ವ ಆನೆ ದಿನ. ಈ ಸಂದರ್ಭದಲ್ಲಿ ಆನೆಗಳು ಎದುರಿಸುತ್ತಿರುವ ಹಲವಾರು ಬೆದರಿಕೆಗಳಿಂದ ಅವುಗಳನ್ನು ಸಂರಕ್ಷಿಸಲು ಮತ್ತು ಸಹಾಯ ಮಾಡುವುದಾಗಿ ನಾವೆಲ್ಲರೂ ಪ್ರತಿಜ್ಞೆ ಮಾಡೋಣ ಎಂದು ಚಂದನವನದ ಸ್ಟಾರ್​ ನಟ ದರ್ಶನ್​ ಅವರು ಟ್ವಿಟ್​ ಮೂಲಕ ಕರೆ ನೀಡಿದ್ದಾರೆ.

ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಅವರು ಪ್ರಾಣಿ ಪ್ರಿಯರು. ಈಗಾಗಲೇ ಇವರು ಹಲವು ಕಡೆ ಹೋಗಿ ವೈಲ್ಡ್​​ ಪೋಟೋಗ್ರಾಫಿಗಳನ್ನು ಮಾಡಿಕೊಂಡು ಬಂದಿದ್ದಾರೆ. ಅದುವಲ್ಲದೇ ಇವರ ಫಾರ್ಮ್​ ಹೌಸ್​​ನಲ್ಲಿ ಕೂಡ ಸಾಕಷ್ಟು ಪ್ರಾಣಿ-ಪಕ್ಷಿಗಳನ್ನು ಸಾಕುತ್ತಿದ್ದಾರೆ. ಇವರು ಪ್ರಾಣಿಗಳ ಮೇಲೆ ಇಟ್ಟಿರುವ ಕಾಳಜಿ-ಪ್ರೀತಿ ನಿಜಕ್ಕೂ ಮೆಚ್ಚುವಂತದ್ದು, ಇದೇ ರೀತಿಯಾಗಿ ಸಾರ್ವಜನಿಕರು ಕೂಡ ವನ್ಯಜೀವಗಳ ಬಗ್ಗೆ ಅರಿವು ಮೂಡಿಸಿಕೊಂಡರೆ ,ಅರಣ್ಯ ಸಂಪತ್ತು ವೃದ್ದಿಯಾಗಲಿದೆ.

2012ರ ಆನೆ ಗಣತಿಯ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ 27 ಸಾವಿರ ಆನೆಗಳಿದ್ದರೆ, ರಾಜ್ಯದಲ್ಲಿ ಅವುಗಳ ಸಂಖ್ಯೆ 6,049. ರಾಜ್ಯದಲ್ಲಿ ಎಂಟು ಆನೆ ಶಿಬಿರಗಳಿದ್ದು, ಸುಮಾರು 100 ಆನೆಗಳು ಇವೆ.

Next Story

RELATED STORIES