Top

'ಕೋವಿಡ್​​ 19 ವಿರುದ್ಧ ಸ್ಥಿರವಾಗಿ ಹೋರಾಟ ನಡೆಸಬಲ್ಲ ಲಸಿಕೆ ಅಭಿವೃದ್ಧಿಪಡಿಸಿದ ರಷ್ಯಾ'

ಕೋವಿಡ್​​ 19 ವಿರುದ್ಧ ಸ್ಥಿರವಾಗಿ ಹೋರಾಟ ನಡೆಸಬಲ್ಲ ಲಸಿಕೆ ಅಭಿವೃದ್ಧಿಪಡಿಸಿದ ರಷ್ಯಾ
X

ಮಾಸ್ಕೋ: ಕೋವಿಡ್​ 19 ವಿರುದ್ಧ ಸ್ಥಿರವಾಗಿ ಹೋರಾಟ ನಡೆಸಬಲ್ಲ ವಿಶ್ವದ ಮೊದಲ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದೇವೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮಂಗಳವಾರ ಪ್ರಕಟಿಸಿದ್ದಾರೆ.

ಇಂದು ಬೆಳಿಗ್ಗೆ, ವಿಶ್ವದಲ್ಲೇ ಮೊದಲ ಬಾರಿಗೆ ರಷ್ಯಾದಲ್ಲಿ ಹೊಸ ಕೊರೊನಾ ವೈರಸ್ ವಿರುದ್ಧ ಹೋರಾಡಬಲ್ಲ ಲಸಿಕೆ ನೋಂದಾಯಿಸಲಾಗಿದೆ ಎಂದು ಅವರು ಸರ್ಕಾರಿ ಮಂತ್ರಿಗಳೊಂದಿಗೆ ದೂರದರ್ಶನದ ವಿಡಿಯೋ ಕಾನ್ಫರೆನ್ಸ್​ನಲ್ಲಿ ಹೇಳಿದ್ದಾರೆ.

ನನ್ನ ಹೆಣ್ಣುಮಕ್ಕಳಲ್ಲಿ ಒಬ್ಬರಿಗೆ ಈ ಲಸಿಕೆ ಹಾಕಲಾಗಿದೆ. ಪ್ರಯೋಗದ ವೇಳೆಯೇ ಅವಳು ಪಾಲ್ಗೊಂಡಿದ್ದಳು ಎಂದು ನಾನು ಭಾವಿಸುತ್ತೇನೆ ಎಂದು ಪುಟಿನ್ ಅವರು ತಿಳಿಸಿದ್ದಾರೆ.

ಕೊರೊನಾ ವೈರಸ್ ಲಸಿಕೆಯನ್ನು ತ್ವರಿತವಾಗಿ ಅಭಿವೃದ್ಧಿಪಡಿಸಲು ರಷ್ಯಾ ತೀವ್ರವಾಗಿ ಮುಂದಾಗಿತ್ತು. ಈ ತಿಂಗಳ ಮೊದಲ ವಾರದಲ್ಲಿ ಬೃಹತ್ ಉತ್ಪಾದನೆಯನ್ನು ಪ್ರಾರಂಭಿಸಿ, ಮುಂದಿನ ವರ್ಷದ ವೇಳೆಗೆ ಮಿಲಿಯನ್​ ಪ್ರಮಾಣದಲ್ಲಿ ಲಸಿಕೆ ತಯಾರಿಸುವ ಉದ್ದೇಶವನ್ನು ಹೊಂದಿದ್ದೇವೆ ಎಂದರು.

ವಿಶ್ವ ಆರೋಗ್ಯ ಸಂಸ್ಥೆ ಕಳೆದ ವಾರ ರಷ್ಯಾ ಸ್ಥಾಪಿಸಿದ ಮಾರ್ಗಸೂಚಿಗಳನ್ನು ಅನುಸರಿಸಿ, ಸುರಕ್ಷಿತ ಲಸಿಕೆ ಅಭಿವೃದ್ಧಿಪಡಿಸಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಅನುಸರಿಸಬೇಕು ಎಂದು ಒತ್ತಾಯ ಮಾಡಿತ್ತು.

Next Story

RELATED STORIES