Top

ಸಖತ್​ ವೈರಲ್​ ಆಗಿದೆ ರಮ್ಯಾ-ರಾಧಿಕಾ ಪಂಡಿತ್​ ಇನ್​ಸ್ಟಾ ಚಾಟ್

ಸಖತ್​ ವೈರಲ್​ ಆಗಿದೆ ರಮ್ಯಾ-ರಾಧಿಕಾ ಪಂಡಿತ್​ ಇನ್​ಸ್ಟಾ ಚಾಟ್
X

ಕಾರಣಾಂತರಗಳಿಂದ ರಮ್ಯಾ ಮತ್ತು ರಾಧಿಕಾ ಪಂಡಿತ್​ ಚಿತ್ರರಂಗದಲ್ಲಿ ಕೊಂಚ ದೂರಾಗಿದ್ದಾರೆ. ಇವತ್ತಿಗೂ ಅದೇ ಛಾರ್ಮ್​ ಉಳಿಸಿಕೊಂಡಿರೋ ಇವರಿಬ್ಬರು ಮತ್ತೆ ಇಂಡಸ್ಟ್ರಿಗೆ ಬಂದ್ರೆ, ರಾಣಿಯರಾಗಿ ಮೆರೆಯೋದು ಗ್ಯಾರೆಂಟಿ.

ಚಿತ್ರರಂಗಕ್ಕೆ ಪ್ರತಿದಿನ ಸಾಕಷ್ಟು ನಟನಟಿಯರು ಬರ್ತಿರ್ತಾರೆ, ಹೋಗ್ತಿರ್ತಾರೆ. ಆದರೆ, ಕೆಲವರು ಮಾತ್ರ ಪ್ರೇಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಗಿಟ್ಟಿಸಿಬಿಡುತ್ತಾರೆ. ಸ್ಯಾಂಡಲ್ವುಡ್​​​ ಕ್ವೀನ್​ ರಮ್ಯಾ ಮತ್ತು ಸ್ಯಾಂಡಲ್​ವುಡ್​ ಸಿಂಡ್ರೆಲಾ ರಾಧಿಕಾ ಪಂಡಿತ್​ ದಶಕಗಳ ಕಾಲ ಚಿತ್ರರಂಗದಲ್ಲಿ ಟಾಪ್​ ಹೀರೋಯಿನ್ಸ್​ ಆಗಿ ಮೆರೆದವರು. ಕಳೆದೆರಡು ದಶಕದಲ್ಲಿ ಸ್ಯಾಂಡಲ್​ವುಡ್​ನಲ್ಲಿ ಸಕ್ಸಸ್​ ಕಂಡ ಕೆಲವೇ ನಟಿಯರಲ್ಲಿ ಇವರನ್ನ ಮರೆಯುವಂತಿಲ್ಲ.

17 ವರ್ಷಗಳ ಹಿಂದೆ ಅಭಿ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ರಮ್ಯಾ, ಕನ್ನಡದ ಬಹುತೇಕ ಎಲ್ಲಾ ಸೂಪರ್​ ಸ್ಟಾರ್​ಗಳ ಜೋಡಿಯಾಗಿ ನಟಿಸಿ ಸೈ ಅನ್ನಿಸಿಕೊಂಡಿದ್ಧಾರೆ. ಬೆಡಗು ಬಿನ್ನಾಣದದ ಜೊತೆಗೆ ತಮ್ಮ ನೇರ ನಡೆ ನುಡಿಯಿಂದಲೂ ರಮ್ಯಾ ಸದ್ದು ಮಾಡಿದ್ದರು. ಅಭಿಮಾನಿಗಳು ಸ್ಯಾಂಡಲ್​​ವುಡ್​ ಕ್ವೀನ್ ಅಂತ್ಲೇ ಅವರನ್ನ ಮೆರೆಸಿದರು. ಸಿನಿಮಾರಂಗದಲ್ಲಿ ಸಿಕ್ಕ ಜನಪ್ರಿಯತೆ ಬಳಸಿಕೊಂಡು ರಾಜಕೀಯರಂಗ ಪ್ರವೇಶಿಸಿ, ಸಕ್ಸಸ್​ ಕಂಡ ರಮ್ಯಾ ಚಿತ್ರರಂಗದಲ್ಲಿ ದೂರಾಗಿದ್ದಾರೆ. ಸದ್ಯ ಮತ್ತೆ ರಮ್ಯಾ ಸಿನಿಮಾಗಳಲ್ಲಿ ನಟಿಸುವ ಸುಳಿವು ಸಿಕ್ತಿದೆ.

ಮೊಗ್ಗಿನ ಮನಸು ಸಿನಿಮಾದಲ್ಲಿ ನಟಿಸಿ, ಕನ್ನಡ ಸಿನಿರಸಿಕರಿಗೆ ಪರಿಚಿತರಾದ ನಟಿ ರಾಧಿಕಾ ಪಂಡಿತ್​. ಇದೇ ಸಿನಿಮಾ ರಾಕಿಂಗ್​ ಸ್ಟಾರ್​ಗೂ ಮೊದಲ ಪ್ರಯತ್ನ. ತಮ್ಮ ಸ್ನಿಗ್ಧ ಸೌಂದರ್ಯ ಮತ್ತು ಅಭಿನಯದಿಂದ ರಾಧಿಕಾ ಮನೆಮಾತಾದರು. ಸ್ಯಾಂಡಲ್​ವುಡ್ ಸಿಂಡ್ರೆಲಾ ಅನ್ನೋ ಬಿರುದು ಸಿಕ್ತು. ಸೂಪರ್​ ಹಿಟ್​ ಸಿನಿಮಾಗಳಲ್ಲಿ ನಟಿಸಿ, ಕಮಾಲ್​ ಮಾಡಿದರು. ಯಶ್​- ರಾಧಿಕಾ ಪರಸ್ಪರ ಪ್ರೀತಿಸಿ, ಹಸೆಮಣೆ ಏರಿದ್ರು. ಮದುವೆಯ ನಂತರವೂ ಆದಿ ಲಕ್ಷ್ಮಿ ಪುರಾಣ ಸಿನಿಮಾದಲ್ಲಿ ರಾಧಿಕಾ ನಟಿಸಿ, ಗೆದ್ರು.

ಇವರಿಬ್ಬರ ಸೌಂದರ್ಯದ ಬಗ್ಗೆ ಮಾತನಾಡೋದಕ್ಕೆ ಕಾರಣ. ಇನ್​ಸ್ಟ್ರಾಗ್ರಾಂನಲ್ಲಿ ಇಬ್ಬರು ನಡೆಸಿದ ಸಂಭಾಷಣೆ. ರಾಧಿಕಾ ಪಂಡಿತ್ ಇತ್ತೀಚೆಗೆ ಇನ್​​ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಹಂಚಿಕೊಂಡು, 'ನೀವು ನೀವಾಗಿರಿ' ಎಂದು ಬರೆದುಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಟಿ ರಮ್ಯಾ, ‘ತುಂಬ ಮುದ್ದಾಗಿದ್ದೀರಾ' ಅಂದಿದರು. ಈ ಕಾಮೆಂಟ್‌ಗೆ ಉತ್ತರ ನೀಡಿರುವ ರಾಧಿಕಾ, ‘ನಿಮ್ಮಷ್ಟು ಮುದ್ದಾಗಿ ನಾನಿಲ್ಲ. ನೀವು ಯಾವತ್ತೂ ಸುಂದರ' ಎಂದು ರಿಪ್ಲೇ ಮಾಡಿದ್ದಾರೆ. ಈ ಸಂಭಾಷಣೆ ಈಗ ಸೋಷಿಯಲ್​ ಮೀಡಿಯಾದಲ್ಲಿ ಹಾಟ್​ ಟಾಪಿಕ್​ ಆಗಿದೆ.

ಮೊದಲೇ ಹೇಳಿದಂತೆ ರಮ್ಯಾ, ರಾಧಿಕಾ ಇಬ್ಬರಲ್ಲಿ ಯಾರಿಗೆ ಯಾರು ಕಮ್ಮಿಯಿಲ್ಲ. 38 ವರ್ಷ ವಯಸ್ಸಾದ್ರು, ರಮ್ಯಾ ಅದೇ ಚಾರ್ಮ್​ ಕಾಪಾಡಿಕೊಂಡಿದ್ದಾರೆ. ಮತ್ತೆ ಇಂಡಸ್ಟ್ರಿಗೆ ವಾಪಸ್​ ಬಂದ್ರೆ, ನಂಬರ್​ ವನ್​ ನಟಿಯಾಗಿ ಮಿಂಚೋದ್ರಲ್ಲಿ ದೂಸ್ರಾ ಮಾತಿಲ್ಲ.

ಇನ್ನು ಮದುವೆಯಾಗಿ ಎರಡು ಮಕ್ಕಳ ತಾಯಿಯಾದ್ರು, ರಾಧಿಕಾ ಪಂಡಿತ್​ ಚೆಲುವಿಗೂ ಸಾಟಿಯಿಲ್ಲ. ಇವತ್ತಿನ ಯಂಗ್ ಹೀರೋಯಿನ್ಸ್​​ಗೂ ಪೈಪೋಟಿ ಕೊಡ್ತಾರಾ ಮಿಸ್ಸೆಸ್​​ ಯಶ್​. ಹಾಗಾಗಿ ಇನ್​ಸ್ಟ್ರಾಗ್ರಾಂನಲ್ಲಿ ಒಬ್ಬರಿಗೊಬ್ಬರು ಕಾಂಪ್ಲಿಮೆಂಟ್ಸ್​ ಕೊಟ್ಟುಕೊಂಡಿರೋದ್ರಲ್ಲಿ ಅತಿಶಯೋಕ್ತಿ ಏನಿಲ್ಲ. ಇದೇ ಮಾತನ್ನ ಅಭಿಮಾನಿಗಳು ಕಾಮೆಂಟ್​ ಬಾಕ್ಸ್​ನಲ್ಲಿ ಹೇಳ್ತಿದ್ದಾರೆ.

ನಟಿಯರು ಸಾರ್ವಜನಿಕವಾಗಿ ಬೇರೆಯವರನ್ನು ಹೊಗಳುವುದು ವಿರಳ. ಹಾಗಾಗಿ ರಮ್ಯಾ ಮತ್ತು ರಾಧಿಕಾ ಪಂಡಿತ್​ ಇನ್​ಸ್ಟ್ರಾಂ ಸಂಭಾಷಣೆ ಸಖತ್​ ವೈರಲ್ಲಾಗಿದೆ. ಅಂದ ಹಾಗೆ ರಮ್ಯಾ ಮತ್ತು ರಾಧಿಕಾ ನಡುವೆ ಆತ್ಮೀಯ ಸ್ನೇಹವಿದೆ. ಯಶ್​ ನಟನೆಯ ಲಕ್ಕಿ ಸಿನಿಮಾದಲ್ಲಿ ರಮ್ಯಾ ನಾಯಕಿಯಾಗಿ ಮಿಂಚಿದರು. ಸದ್ಯ ರಮ್ಯಾ ಮತ್ತೆ ಸೋಷಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದು, ಮತ್ತೆ ಚಿತ್ರರಂಗಕ್ಕೆ ಬರುವ ಸುಳಿವು ಕೊಡ್ತಿದ್ರೆ, ಮಕ್ಕಳ ಜೊತೆ ಪೋಷಣೆಯಲ್ಲಿ ಕಾಲ ಕಳೀತಿರೋ ರಾಧಿಕಾ ಶೀಘ್ರದಲ್ಲೇ ಹೊಸ ಚಿತ್ರದಲ್ಲಿ ನಟಿಸಿದರು, ಅಚ್ಚರಿ ಪಡಬೇಕಿಲ್ಲ.

Next Story

RELATED STORIES