Top

ರಜಿನಿಯಿಸಂಗೆ 45 ವರ್ಷ ಜೋರಾಗಿದೆ ಫ್ಯಾನ್ಸ್​ ಸೆಲೆಬ್ರೇಷನ್

ರಜಿನಿಯಿಸಂಗೆ 45 ವರ್ಷ ಜೋರಾಗಿದೆ ಫ್ಯಾನ್ಸ್​ ಸೆಲೆಬ್ರೇಷನ್
X

ಚಿತ್ರರಂಗದಲ್ಲಿ ಸೂಪರ್​ ಸ್ಟಾರ್​ ರಜಿನಿಕಾಂತ್​ 45 ವರ್ಷ ಪೂರೈಸಿದ್ದಾರೆ. ಇವತ್ತಿಗೂ ಅದೇ ಸ್ಟೈಲ್​, ಅದೇ ಖದರ್​ ಉಳಿಸಿಕೊಂಡಿರೋ ತಲೈವಾ ಯಂಗ್​​ಸ್ಟರ್ಸ್​ಗೂ ಟಫ್​ ಕಾಂಪಿಟೇಷನ್ ಕೊಡುತ್ತಿದ್ದಾರೆ. ಜೀರೋ ಇಂದ ಹೀರೋ ಆದ ರಜಿನಿಕಾಂತ್​ ಸಕ್ಸಸ್​​​​​​ಫುಲ್ ಜರ್ನಿ ಹೇಗಿತ್ತು ಗೊತ್ತಾ(?)

ರಜಿನಿಕಾಂತ್​. ಈ ಹೆಸರಲ್ಲೇ ಏನೋ ಮ್ಯಾಜಿಕ್​ ಇದೆ. ಈ ಹೆಸರು ಕಿವಿ ಮೇಲೆ ಬಿದ್ರೆ, ಫ್ಯಾನ್ಸ್​ ಅಲರ್ಟ್​ ಆಗ್ತಾರೆ. ಯ್ಯೂನಿಕ್​​ ಸ್ಟೈಲ್​, ಮ್ಯಾನರಿಸಂ ಮತ್ತು ಡೈಲಾಗ್​ ಡೆಲಿವರಿಯಿಂದ ಅಭಿಮಾನಿಗಳ ಮನಗೆದ್ದ ಮಾಸ್​ ಮಹಾರಾಜ ರಜಿನಿಕಾಂತ್​. 1975 ಆಗಸ್ಟ್​ 15ರಂದು ತೆರೆಕಂಡ ಅಪೂರ್ವ ರಾಗಂಗಳ್​ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸೋ ಮೂಲಕ ಶಿವಾಜಿ ಗಾಯಕ್​ವಾಡ್​​ ಚಿತ್ರರಂಗ ಪ್ರವೇಶಿಸಿದರು. ಮೊದಲಿಗೆ ನೆಗೆಟೀವ್​ ಶೇಡ್​ ರೋಲ್​ಗಳನ್ನ ಮಾಡ್ತಿದ್ದ ರಜಿನಿ, ಹೀರೋ ಆಗ್ತಾರೆ, ಸೂಪರ್ ಸ್ಟಾರ್​ ಆಗ್ತಾರೆ ಅಂತ ಯಾರೂ ಊಹಿಸಿರಲಿಲ್ಲ.

ಬೆಂಗಳೂರಿನಲ್ಲಿ ಬಸ್ ಕಂಡೆಕ್ಟರ್ ಆಗಿದ್ದ ಶಿವಾಜಿರಾವ್ ಗಾಯಕ್​ವಾಡ್ ಸಿನಿಇಂಡಸ್ಟ್ರಿಯಲ್ಲಿ ಸೂಪರ್ ಸ್ಟಾರ್ ಪಟ್ಟಕ್ಕೇರಿದ ರೋಚಕ ಕಥೆ ಗೊತ್ತೇಯಿದೆ. ಆರಂಭದ ದಿನಗಳಲ್ಲಿ ಕನ್ನಡದ ಕೆಲ ಸಿನಿಮಾಗಳಲ್ಲಿ ನಟಿಸಿದ್ದ ರಜಿನಿಕಾಂತ್, ಮುಂದೆ ತಮಿಳು ಚಿತ್ರರಂಗದಲ್ಲಿ ಹೆಚ್ಚು ಬ್ಯುಸಿಯಾದರು. ಅಷ್ಟೇಅಲ್ಲ ತಮಿಳರೇ ಆಗಿಬಿಟ್ರು. ಆಗಸ್ಟ್​​ 15ಕ್ಕೆ ರಜಿನಿ ನಟಿಸಿದ ಅಪೂರ್ವ ರಾಗಂಗಳ್​ ಚಿತ್ರ 45 ಪೂರೈಸುತ್ತಿದೆ. ಅರ್ಥಾತ್​ ರಜಿನಿಕಾಂತ್​​ ಸಿನಿಜರ್ನಿಗೂ 45 ವರ್ಷಗಳ ಸಂಭ್ರಮ. ಇದನ್ನ 45 Years Of RAJINISM ಹೆಸರಿನಲ್ಲಿ ಫ್ಯಾನ್ಸ್ ಸೆಲೆಬ್ರೇಟ್​ ಮಾಡುತ್ತಿದ್ದಾರೆ.

ಈ ನಲವತ್ತು ವರ್ಷಗಳಲ್ಲಿ ತಮಿಳು ಚಿತ್ರರಂಗಕ್ಕೆ ಎಷ್ಟೆ ಜನ ಹೀರೋಗಳು ಬಂದ್ರು, ಹೋದ್ರು, ಎಲ್ಲರೂ ತಲೈವಾ ನಂತರದ ಸ್ಥಾನದಲ್ಲೇ ನಿಂತಿದ್ದಾರೆ. ಅಷ್ಟೆಲ್ಲ ಯಾಕೆ ಕಮಲ್​ ಹಾಸನ್​ ಕೂಡ ಎರಡನೇ ಸ್ಥಾನದಲ್ಲೇ ನಿಂತುಬಿಟ್ರು. ರಜಿನಿಕಾಂತ್​ ಮಾತ್ರ ಇವತ್ತಿಗೂ ಸೂಪರ್​ ಸ್ಟಾರ್. ದೇಶ ವಿದೇಶದಲ್ಲಿ ರಜಿನಿಕಾಂತ್​ ಅಭಿಮಾನಿಗಳಿದ್ದಾರೆ. ತಮಿಳರು ತಲೈವಾ ಅಂತ್ಲೇ ಗೌರವಿಸ್ತಾರೆ. ಬರೀ ಕಾಲಿವುಡ್​, ಸೌತ್​ ಸಿನಿ ಇಂಡಸ್ಟ್ರಿ ಅಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೇ ನಂಬರ್​ವನ್ ಸೂಪರ್​ ಸ್ಟಾರ್​ ಆಗಿ ಮೆರೆತ್ತಿದ್ಧಾರೆ ರಜಿನಿಕಾಂತ್.

ಸ್ಟಾರ್​ಗಳಿಗೆ ಸೂಪರ್​ ಸ್ಟಾರ್​ಗಳಿಗೆ ಅಭಿಮಾನಿಗಳಿರ್ತಾರೆ. ಆದರೆ, ಅಂತ ಸ್ಟಾರ್​ಗಳೇ ರಜಿನಿಕಾಂತ್​ಗೆ ಅಭಿಮಾನಿಗಳಾಗಿ ಬಿಟ್ಟಿದ್ದಾರೆ. ಕೆ. ಬಾಲಚಂದರ್​​​​​​ ಗರಡಿಯಲ್ಲಿ ಪಳಗಿ, ಸಣ್ಣ ಪುಟ್ಟ ಪಾತ್ರಗಳಿಂದ ಶುರು ಮಾಡಿ ಮುಂದೆ ಸೂಪರ್​ ಸ್ಟಾರ್​​​​​ ಆಗಿ ವಿಶ್ವಮಟ್ಟದಲ್ಲಿ ಜನಪ್ರಿಯತೆ ಗಳಿಸಿದ್ದಾರೆ. 45 ವರ್ಷಗಳ ಸಿನಿಕರಿಯರ್​ನ ಕಂಪ್ಲೀಟ್​ ಮಾಡಿದ ಸಂಭ್ರಮದಲ್ಲಿ ಫ್ಯಾನ್ಸ್​ ಕಾಮನ್​ ಡಿಪಿ ಡಿಸೈನ್​ ಮಾಡಿ ವೈರಲ್​ ಮಾಡಿದ್ದಾರೆ. ಸಂಗೀತ ನಿರ್ದೇಶಕ ಎ. ಆರ್​ ರೆಹಮಾನ್​ ರಿವೀಲ್​ ಮಾಡಿದ ಡಿಪಿ ಟ್ವಿಟ್ಟರ್​ನಲ್ಲಿ ಸೌಂಡ್​ ಮಾಡ್ತಿದೆ.

ಬಾಷಾ, ಶಿವಾಜಿ, ರೋಬೊ, ಕಬಾಲಿ ಸಿನಿಮಾಗಳ ಫೋಟೋಗಳನ್ನ ಹೈಲೆಟ್​ ಮಾಡಿ ಈ ಕಾಮನ್​ ಡಿಪಿ ರೆಡಿ ಮಾಡಿದ್ಧಾರೆ. ಸದ್ಯ ಈ ಡಿಪಿ ಟ್ರೆಂಡಿಂಗ್​ನಲ್ಲಿರುವಂತೆ ಫ್ಯಾನ್ಸ್​ ನೋಡಿಕೊಂಡಿದ್ದು, ಹಲ್​ಚಲ್​ ಎಬ್ಬಿಸಿದೆ. ಸಂಕ್ರಾಂತಿ ಸಂಭ್ರಮದಲ್ಲಿ ದರ್ಬಾರ್​ ಸಿನಿಮಾ ಮೂಲಕ ಅಬ್ಬರಿಸಿದ ರಜಿನಿಕಾಂತ್​ ಅಣ್ಣಾತೆ ಅವತಾರದಲ್ಲಿ ಪ್ರೇಕ್ಷಕರನ್ನ ರಂಜಿಸಲು ಕಾಯುತ್ತಿದ್ದಾರೆ.

Next Story

RELATED STORIES