Top

'ಇಂದು, ನಾಳೆ ಕೊಡಗು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ' - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

ಇಂದು, ನಾಳೆ ಕೊಡಗು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್
X

ಬೆಂಗಳೂರು: ಇಂದು, ನಾಳೆ ಕೊಡಗು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸ್ಥಳೀಯ ಮಟ್ಟದಲ್ಲಿ ಮಾಹಿತಿ ಪಡೆಯುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಕಾವೇರಿ ಜಲ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಮುಖ್ಯಮಂತ್ರಿಗಳು ಆಸ್ಪತ್ರೆಯಲ್ಲಿ ಇದ್ದು ಪರಿಹಾರ ಘೋಷಣೆ ಮಾಡಿದ್ದಾರೆ. ಸಚಿವರಿಗೂ ನೆರೆ ಪೀಡಿತ ಪ್ರದೇಶಗಳಿಗೆ ಹೋಗುವಂತೆ ಹೇಳಿದ್ದಾರೆ. ಆದರೆ, ನೆರೆ ಬಿಟ್ಟು ಧರ್ಮದ ವಿಚಾರದಲ್ಲಿ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಸಚಿವರು ಜಿಲ್ಲೆಗಳಿಗೆ ಹೋಗಿ ಅವರು ಬೇರೆ ಕೆಲಸ ಮಾಡುತ್ತಿದ್ದಾರೆ. ಅವರು ನೆರೆಗಿಂತಲೂ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ ಎಂದು ಸಚಿವ ಈಶ್ವರಪ್ಪ ವಿರುದ್ಧ ಕಿಡಿಕಾರಿದ್ದಾರೆ.

ಸದ್ಯ ನಾವೇ ಸರ್ಕಾರ 5 ಲಕ್ಷ ನೀಡುತ್ತಿದೆ ಅಂತ ಹೇಳಿದ್ದೇನೆ. ನೆರೆ ಅಧ್ಯಯನ ಮಾಡಲು ಕೆಪಿಸಿಸಿ ಹಾಲಿ ಮಾಜಿ ಶಾಸರನ್ನು ಒಳಗೊಂಡ ನಾಲ್ಕು ತಂಡ ರಚನೆ ಮಾಡಲಾಗಿದೆ. ಸರ್ಕಾರ ನೆರೆಗೆ ಏನು ಮಾಡಿದೆ ಅದನ್ನೂ ನೋಡುತ್ತೇವೆ. ನಾವು ಏನು ಮಾಡಬೇಕು ಅನ್ನುವುದನ್ನು ಗಮನಿಸುತ್ತೇವೆ. ಕೆಲ ಸಚಿವರು ಇನ್ನೂ ಜಿಲ್ಲೆಗಳಿಗೆ ಹೋಗಿಲ್ಲ, ಅವರು ಬೆಂಗಳೂರಲ್ಲಿಯೇ ಮಲಗಲಿ ಬಿಡಿ ಎಂದು ಡಿ.ಕೆ ಶಿವಕುಮಾರ್ ಅವರು ಸಚಿವರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಾಯಕರು ನೆರೆ ಬಗ್ಗೆ ಮಾತನಾಡಿಲ್ಲ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಡಿಸಿಎಂ ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡ್ರು ಅನ್ನೋ ರೀತಿ ಮಾತನಾಡುತ್ತಿದ್ದಾರೆ. ಅವರೇ ಮೈಮೇಲೆ ವಿವಾದ ಎಳೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ಚೀಫ್ ಮಿನಿಸ್ಟರ್ ಅವರನ್ನೇ ಡಿಗ್ರೇಡ್ ಮಾಡೋಕೆ ಹೊರಟಿದ್ದಾರೆ. ಅವರು ಏನು ಮಾತನಾಡಿದ್ರು ಎಲ್ಲ ಮಾಹಿತಿ ನಮಗೆ ಸಿಗುತ್ತೆ. ನಾವ್ಯಾಕೆ ಅವರ ವಿರುದ್ಧ ಆರೋಪ ಮಾಡೋಣ. ನಮಗೆ ಯಾರು ಏನು ಮಾತನಾಡಿದ್ರು ಎಲ್ಲಾ ಗೊತ್ತಾಗುತ್ತೆ. ಬಿಜೆಪಿಯವರು ಏನು ಮಾತನಾಡಿದ್ರು, ನಮ್ಮವರು ಏನು ಮಾತನಾಡಿದ್ರು ಎಲ್ಲಾ ಗೊತ್ತಾಗುತ್ತೆ. ಅವರು ಏನೇನೋ ಮಾತನಾಡಿದ್ರೆ ಹೇಗೆ(?) ಎಂದು ಡಿಸಿಎಂ ಅಶ್ವಥ್​ ನಾರಾಯಣ್ ಅವರ ಹೇಳಿಕೆಗೆ ಟಾಂಗ್​ ನೀಡಿದ್ದಾರೆ.

Next Story

RELATED STORIES