Top

ಸದ್ಯಕ್ಕೆ ಬೇಡ ಅಂತಿದ್ದ ಚಿತ್ರವನ್ನ ಕೈಗೆತ್ತಿಕೊಂಡ ಕಿಚ್ಚ

ಸದ್ಯಕ್ಕೆ ಬೇಡ ಅಂತಿದ್ದ ಚಿತ್ರವನ್ನ ಕೈಗೆತ್ತಿಕೊಂಡ ಕಿಚ್ಚ
X

ಬಾದ್​ಶಾ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ರಿಲೀಸ್​ಗೆ ರೆಡಿಯಿದೆ. ಫ್ಯಾಂಟಂ ಸಿನಿಮಾ ಶೂಟಿಂಗ್​ ನಡೀತಿದೆ. ಈ ಗ್ಯಾಪ್​ನಲ್ಲೇ ಕಿಚ್ಚ ಅಭಿಮಾನಿಗಳಿಗೆ ಮತ್ತೊಂದು ಸ್ವೀಟ್ ನ್ಯೂಸ್ ಸಿಕ್ತಾ ಇದೆ. ಸದ್ಯಕ್ಕೆ ಬೇಡ ಅಂತ ಪಕ್ಕಕ್ಕಿಟ್ಟಿದ್ದ ಬಹುನಿರೀಕ್ಷಿತ ಬಿಲ್ಲಾ ರಂಗ ಬಾಷಾ ಪ್ರಾಜೆಕ್ಟ್​ನ್ನ ಮತ್ತೆ ಕೈಗೆತ್ತಿಕೊಳ್ಳುತ್ತಿದ್ದಾರೆ ಕಿಚ್ಚ.

ಸ್ಯಾಂಡಲ್​ವುಡ್​ ಬಾದ್ಶಾ ಕಿಚ್ಚ ಸುದೀಪ್ ಸದ್ಯ ಫ್ಯಾಂಟಮ್​ ಶೂಟಿಂಗ್​ನಲ್ಲಿ ಬ್ಯುಸಿಯಾಗಿರೋದು ಗೊತ್ತೇಯಿದೆ. ಈಗಾಗಲೇ ಫ್ಯಾಂಟಂ ಶೂಟಿಂಗ್​ ಝಲಕ್​ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ. ಕಿಚ್ಚನ ಸ್ಟೈಲಿಶ್​ ಲುಕ್​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ.

ಫ್ಯಾಂಟಂಗೂ ಮೊದಲು ಕೋಟಿಗೊಬ್ಬ 3 ಸಿನಿಮಾ ಕಣ್ತುಂಬಿಕೊಳ್ಳೋಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಕೋಟಿಗೊಬ್ಬ 3 ನಂತರ ಫ್ಯಾಂಟಂ ರಿಲೀಸ್ ಆಗೋದು ಪಕ್ಕಾ. ಆದರೆ, ಫ್ಯಾಂಟಂ ನಂತರ ಕಿಚ್ಚ ಮತ್ಯಾವ ಸಿನಿಮಾಗೂ ಗ್ರೀನ್​ ಸಿಗ್ನಲ್ ಕೊಟ್ಟಿಲ್ಲ. ಆದರೆ, ಇಷ್ಟು ದಿನ ಪಕ್ಕಕ್ಕಿಟ್ಟಿದ್ದ ಬಿಲ್ಲಾ ರಂಗ ಬಾಷಾ ಚಿತ್ರವನ್ನ ಕೈಗೆತ್ತಿಕೊಳ್ಳೋ ಯೋಚನೆಯಲ್ಲಿದ್ದಾರೆ ನಿರ್ದೇಶಕ ಅನೂಪ್​ ಭಂಡಾರಿ ಅಂಡ್ ಕಿಚ್ಚ ಸುದೀಪ್.

ಫ್ಯಾಂಟಂಗೂ ಮೊದಲು ಅನೂಪ್​ ಭಂಡಾರಿ ಮತ್ತು ಕಿಚ್ಚ ಸುದೀಪ್​ ಕಾಂಬಿನೇಶನ್​ನಲ್ಲಿ ಬಿಲ್ಲ ರಂಗ ಬಾಷಾ ಸಿನಿಮಾ ಸೆಟ್ಟೇರಿದ್ದು ಗೊತ್ತೇಯಿದೆ. ಈ ಸಿನಿಮಾ ಟೈಟಲ್​​ನಿಂದ್ಲೇ ಸಾಕಷ್ಟು ಕುತೂಹಲ ಹುಟ್ಟಿಸಿತ್ತು. 3 ಶೇಡ್​ಗಳಲ್ಲಿ ಅಥವಾ ತ್ರಿಬಲ್​ ಆ್ಯಕ್ಟಿಂಗ್​ನಲ್ಲಿ ಕಿಚ್ಚ ಸುದೀಪ್​ ಮಿಂಚಲಿದ್ದಾರೆ ಅಂತ ಅಭಿಮಾನಿಗಳು ಕಾಯ್ತಿದರು. ಬಹುಭಾಷೆಯಲ್ಲಿ ಸಿನಿಮಾ ತೆರೆಕಾಣುವ ಪ್ಲಾನ್​ ಕೂಡ ಇತ್ತು. ಅಷ್ಟೇ ಅಲ್ಲಾ ಚಿತ್ರದ ಕಥೆ ಕೂಡ ಬಹಳ ವಿಭೀನ್ನವಾಗಿದ್ದು, 2209ರಲ್ಲಿ ನಡೆಯೋ ಕಥೆಯಾಗಿದ್ದು, ಅಂದ್ರೆ ಮುಂದಿನ 190 ವರ್ಷದಲ್ಲಿ ಪ್ರಪಂಚ ಹೇಗಿರುತ್ತೆ ಅನ್ನೋದು ಚಿತ್ರದ ಒನ್​ ಲೈನ್​ ಸ್ಟೋರಿ ಹಾಗೂ ಸುಮಾರು 70 ಕೋಟಿಗಿಂತಲೂ ಹೆಚ್ಚು ಬಜೆಟ್​ನಲ್ಲಿ ಚಿತ್ರವನ್ನ ಪ್ಲಾನ್​ ಮಾಡಲಾಗಿತ್ತು.

ಆದರೆ, ಅದ್ಯಾಕೋ ಈ ಚಿತ್ರವನ್ನ ಪಕ್ಕಕ್ಕಿಟ್ಟು, ಮತ್ತೊಂದು ಸಿನಿಮಾ ಫ್ಯಾಂಟಂ ಶೂಟಿಂಗ್​ ಶುರುಮಾಡಿದ್ರು. ನಂತರ ಬಿಲ್ಲ ರಂಗ ಬಾಷಾ ಸಿನಿಮಾ ನಿಂತೇ ಹೋಯ್ತು ಅಂತ ಸುದ್ದಿಯಾಯ್ತು. ಆದರೆ, ಇದೀಗ ಫ್ಯಾಂಟಂ ನಂತ್ರ ಮತ್ತೆ ಅನೂಪ್​ ಮತ್ತು ಕಿಚ್ಚ ಸುದೀಪ್​ ಬಿಲ್ಲ ರಂಗ ಬಾಷಾ ಸಿನಿಮಾ ಟೇಕಾಫ್​ ಆಗಲಿದೆ ಅನ್ನೋ ಮಾಹಿತಿ ಸಿಕ್ಕಿದೆ.

ಸ್ವತಃ ಈ ವಿಚಾರವನ್ನ ನಿರ್ದೇಶಕ ಅನೂಪ್​ ಭಂಡಾರಿ, ಆಪ್ತರ ಜೊತೆ ಹೇಳಿಕೊಂಡಿದ್ದಾರೆ. ಫ್ಯಾಂಟಂ ರಿಲೀಸ್​ ನಂತರ ಬಿಲ್ಲ ರಂಗ ಬಾಷಾ ಸಿನಿಮಾ ಸೆಟ್ಟೇರೋದು ಪಕ್ಕಾ ಅಂತೆ. ಎಲ್ಲಾ ಅಂದುಕೊಂಡಂತೆ ಆದರೆ, ಬಿಲ್ಲ ರಂಗ ಬಾಷಾ ಸಿನಿಮಾ ಟೇಕಾಫ್​ ಆಗಿ, ಬಹುಭಾಷೆಗಳಲ್ಲಿ ಸಿನಿಮಾ ತೆರೆಕಂಡಿದ್ದೇ ಆದರೆ ದೊಡ್ಡ ದಾಖಲೆ ಬರೆಯೋದು ಪಕ್ಕಾ ಅಂತಿದ್ದಾರೆ ಕಿಚ್ಚ ಫ್ಯಾನ್ಸ್.

Next Story

RELATED STORIES