Top

2021ರ ಐಸಿಸಿ ಟಿ20 ವಲ್ಡ್​ಕಪ್​ಗೆ ಭಾರತ ಆತಿಥ್ಯ

2021ರ ಐಸಿಸಿ ಟಿ20 ವಲ್ಡ್​ಕಪ್​ಗೆ ಭಾರತ ಆತಿಥ್ಯ
X

ನವದೆಹಲಿ: 2021ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯನ್ನು ಭಾರತ ಆತಿಥ್ಯ ವಹಿಸುವುದು ಪಕ್ಕಾ ಆಗಿದೆ ಎಂದು ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ವರದಿಯಲ್ಲಿ ಹೇಳಿದೆ. 2022ರ ಟಿ20 ವಿಶ್ವಕಪ್‌ ಟೂರ್ನಿಯನ್ನು ಆಸ್ಟ್ರೇಲಿಯಾ ಆತಿಥ್ಯ ವಹಿಸಲಿದೆ.

ಈ ವರ್ಷ ಅಕ್ಟೋಬರ್‌-ನವೆಂಬರ್‌ನಲ್ಲಿ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯಬೇಕಾಗಿತ್ತು. ಆದರೆ, ಕೋವಿಡ್​ 19 ವಿಶ್ವವ್ಯಾಪಿ ಆವರಿಸಿರುವುದರಿಂದ, ಟೂರ್ನಿಯನ್ನು 2022ಕ್ಕೆ ಮುಂದೂಡಲಾಗಿದೆ.

2023ರಲ್ಲಿ ಭಾರತ ಏಕದಿನ ವಿಶ್ವಕಪ್‌ ಟೂರ್ನಿಗೆ ಆತಿಥ್ಯ ವಹಿಸುತ್ತಿದೆ. ಈ ಕಾರಣದಿಂದ 2022ರ ಆವೃತ್ತಿಯಲ್ಲಿ ಟಿ20 ವಿಶ್ವಕಪ್‌ ಆತಿಥ್ಯವನ್ನು ಆಸ್ಟ್ರೇಲಿಯಾಗೆ ನೀಡಲಾಗಿದೆ. ಆ ಮೂಲಕ ಭಾರತಕ್ಕೆ ಐಸಿಸಿ ಟೂರ್ನಿಗಳನ್ನು ಆಯೋಜಿಸಲು ಒಂದು ವರ್ಷ ಕಾಲವಕಾಶ ದೊರೆತಿದೆ.

2021ರ ಟಿ20 ವಿಶ್ವಕಪ್‌ ಏಳನೇ ಆವೃತ್ತಿಯಾಗಿದ್ದು, 2016ರ ಬಳಿಕ ಮೊದಲ ಚುಟುಕು ವಿಶ್ವಕಪ್‌ ಟೂರ್ನಿ ಆಗಲಿದೆ. ಕೊನೆಯ ಟಿ20 ವಿಶ್ವಕಪ್‌ ಟೂರ್ನಿಗೂ ಭಾರತವೇ ಆತಿಥ್ಯ ವಹಿಸಿತ್ತು. ಫೈನಲ್‌ ಹಣಾಹಣಿಯಲ್ಲಿ ಇಂಗ್ಲೆಂಡ್‌ ತಂಡವನ್ನು ಸೋಲಿಸಿ ವೆಸ್ಟ್ ಇಂಡೀಸ್‌ ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು.

Next Story

RELATED STORIES