Top

ನಯನತಾರ ಮಾಡಿದ್ದ ಪಾತ್ರದಲ್ಲಿ ಡಿಂಪಲ್ ಕ್ವೀನ್ ಕಮಾಲ್

ನಯನತಾರ ಮಾಡಿದ್ದ ಪಾತ್ರದಲ್ಲಿ ಡಿಂಪಲ್ ಕ್ವೀನ್ ಕಮಾಲ್
X

ಸ್ಯಾಂಡಲ್​ವುಡ್​​ನ ಬ್ಯುಸಿಯೆಸ್ಟ್​ ನಟಿ ರಚಿತಾ ರಾಮ್​. ಕೊರೊನಾ ಆತಂಕದ ನಡುವೆಯೂ ಇತ್ತೀಚೆಗೆ ತೆಲುಗು ಸಿನಿಮಾ ಶೂಟಿಂಗ್​ ಮುಗಿಸಿ ಬಂದಿದ್ದಾರೆ ಡಿಂಪಲ್​ ಕ್ವೀನ್. ಈಗಾಗಲೇ ಸಾಕಷ್ಟು ಸಿನಿಮಾಗಳು ಕೈಯಲ್ಲಿದ್ರು, ರೀಮೇಕ್​ ಸಿನಿಮಾವೊಂದರಲ್ಲಿ ನಟಿಸೋಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ.

ಒಂದ್ಕಡೆ ಗ್ಲಾಮರ್​ ಡಾಲ್​ ಆಗಿ ಮಿಂಚುತ್ತಾ ಮತ್ತೊಂದ್ಕಡೆ ಪರ್ಫಾರ್ಮೆನ್ಸ್​​ ಓರಿಯಂಟೆಡ್​​​ ಸ್ಕ್ರಿಪ್ಟ್​​ಗಳನ್ನ, ಪ್ರಯೋಗಾತ್ಮಕ ಪಾತ್ರಗಳನ್ನ ಆಯ್ಕೆ ಮಾಡಿಕೊಳ್ಳುತ್ತಾ ಕಮಾಲ್​ ಮಾಡ್ತಿರೋ ನಟಿ ರಚಿತಾ ರಾಮ್​. ಲಾಕ್​ಡೌನ್​ ಟೈಮಲ್ಲೂ ಹೊಸ ಹೊಸ ಕಥೆ ಕೇಳಿ, ವಿಭಿನ್ನ ಪಾತ್ರಗಳನ್ನ ಆಯ್ಕೆ ಮಾಡಿಕೊಳ್ತಿದ್ದಾರೆ. ಇದೀಗ ಬ್ಲಾಕ್​ ಕಾಮಿಡಿ ಕ್ರೈಂ ಸಿನಿಮಾದಲ್ಲಿ ನಟಿಸೋಕ್ಕೆ ಮುಂದಾಗಿದ್ದಾರೆ.

ಇತ್ತೀಚೆಗಷ್ಟೆ ರಚಿತಾ ರಾಮ್​ ಮತ್ತು ಡಾಲಿ ಧನಂಜಯ ನಟನೆಯ ಹೊಸ ಸಿನಿಮಾ ಅನೌನ್ಸ್​ ಆಗಿತ್ತು. ಸದ್ಯ ತಮಿಳಿನ ‘ಕೊಲಮಾವು ಕೋಕಿಲ’ ರೀಮೇಕ್​ನಲ್ಲಿ ನಟಿಸಲು ಡಿಂಪಲ್​ ಕ್ವೀನ್​ ಸೈ ಅಂದಿದ್ದಾರೆ. ಕಳೆದ ವರ್ಷ ‘ಕನ್ನಡ್​ ಗೊತ್ತಿಲ್ಲ’ ಸಿನಿಮಾ ಕಟ್ಟಿಕೊಟ್ಟಿದ್ದ ಮಯೂರ ರಾಘವೇಂದ್ರ, ಈಗ ತಮಿಳು ಸಿನಿಮಾವನ್ನ ಕನ್ನಡಕ್ಕೆ ತರ್ತಿದ್ದಾರೆ. ತಮಿಳಿನಲ್ಲಿ ನಯನತಾರಾ ಮಾಡಿದ್ದ ಪಾತ್ರವನ್ನ ಕನ್ನಡದಲ್ಲಿ ರಚಿತಾ ನಿಭಾಯಿಸಲಿದ್ದಾರೆ. ಈ ಬಗ್ಗೆ ಮಾತುಕತೆ ನಡೆದಿದ್ದು, ಶೀಘ್ರದಲ್ಲೇ ಸಿನಿಮಾ ಶುರುವಾಗಲಿದೆ.

‘ಕೊಲಮಾವು ಕೋಕಿಲ’ ಕನ್ನಡ ರೀಮೇಕ್​ಗೆ ಪಂಕಜ ಕಸ್ತೂರಿ ಅನ್ನೋ ಟೈಟಲ್​ ಇಡುವ ಬಗ್ಗೆ ಚರ್ಚೆ ನಡೀತಿದೆ. ಚಿತ್ರದಲ್ಲಿ ಮಧ್ಯತರಗತಿಯ ಮುಗ್ಧ​ ಹುಡುಗಿ ಪಾತ್ರದಲ್ಲಿ ರಚಿತಾ ರಾಮ್​ ಬಣ್ಣ ಹಚ್ಚಲಿದ್ದಾರೆ. ಮುಗ್ಧ ಹುಡುಗಿ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಡ್ರಗ್​ ಪೆಡ್ಲರ್​ ಆಗುವ ಕಥೆಯಿದು. ತಮಿಳಿನಲ್ಲಿ ನಯನತಾರಾ, ಕೋಕಿಲ ಪಾತ್ರವನ್ನ ಸೊಗಸಾಗಿ ನಿಭಾಯಿಸಿ ಗೆದ್ದಿದ್ದರು. ಕೋ ಕೋ ಕೋಕಿಲ ಹೆಸರಿನಲ್ಲಿ ಸಿನಿಮಾ ತೆಲುಗಿಗೂ ಡಬ್​ ಆಗಿ ಪ್ರೇಕ್ಷಕರ ಮನಗೆಲ್ಲವಲ್ಲಿ ಸಕ್ಸಸ್​ ಕಂಡಿತ್ತು.

ಇಡೀ ಸಿನಿಮಾ ಕಥೆ ನಾಯಕಿಯ ಸುತ್ತಾ ಸುತ್ತುತ್ತೆ. ಮುಗ್ಧ ಹುಡುಗಿಯನ್ನ ಪ್ರೀತಿಸುವ ಪ್ರಿಯಕರನಾಗಿ ಹಾಸ್ಯ ನಟ ಯೋಗಿ ಬಾಬು ಪ್ರೇಕ್ಷಕರನ್ನ ನಗೆಗಡಲಲ್ಲಿ ತೇಲಿಸಿದ್ದರು. ನಾಯಕಿ ಬಿಟ್ರೆ, ಈ ಪಾತ್ರವೇ ಚಿತ್ರದ ಹೈಲೆಟ್. ಸದ್ಯ ನಾಯಕಿ ಪಾತ್ರಕ್ಕೆ ರಚ್ಚು ಆಯ್ಕೆಯಾಗಿದ್ದು, ಯೋಗಿ ಬಾಬು ಮಾಡಿದ್ದ ಪಾತ್ರವನ್ನ ಯಾರಿಂದ ಮಾಡಿಸೋದು ಅನ್ನೋ ಗೊಂದಲದಲ್ಲಿದ್ದಾರೆ ನಿರ್ದೇಶಕರು. ಯಾರು ಸಿಗದೇ ಇದ್ರೆ, ಯೋಗಿ ಬಾಬು ಅವ್ರೇ ಕನ್ನಡ ಸಿನಿಮಾದಲ್ಲಿ ರಚಿತಾ ರಾಮ್ ಹಿಂದೆ ಬಿದ್ರೆ, ಅಚ್ಚರಿಪಡ್ಬೇಕಿಲ್ಲ.

‘ಕೊಲಮಾವು ಕೋಕಿಲ’ ಸಿನಿಮಾ ರಿಲೀಸ್​ ಆಗಿ ಸಕ್ಸಸ್​​ ಕಂಡಾಗ್ಲೇ ಕನ್ನಡಕ್ಕೆ ರೀಮೇಕ್​ ಮಾಡುವ ಬಗ್ಗೆ ಮಾತುಗಳು ಕೇಳಿಬಂದಿತ್ತು. ಇದೀಗ ಲಾಕ್ಡೌನ್​ ಟೈಮಲ್ಲಿ ಸಿನಿಮಾ ರೀಮೇಕ್​ ಬಗ್ಗೆ ಖಚಿತ ಮಾಹಿತಿ ಸಿಕ್ತಿದೆ. ಶೀಘ್ರದಲ್ಲೇ ‘ಕೊಲಮಾವು ಕೋಕಿಲ’ ಕನ್ನಡ ರೀಮೇಕ್​ ಸೆಟ್ಟೇರಲಿದೆ.

Next Story

RELATED STORIES