Top

ಕೋವಿಡ್​-19 : ವಿಶ್ವದಾದ್ಯಂತ 1.95 ಕೋಟಿ ಮಂದಿಗೆ ಸೋಂಕು, 7.24 ಲಕ್ಷ ಮಂದಿ ಸಾವು

ಕೋವಿಡ್​-19 : ವಿಶ್ವದಾದ್ಯಂತ 1.95 ಕೋಟಿ ಮಂದಿಗೆ ಸೋಂಕು, 7.24 ಲಕ್ಷ ಮಂದಿ ಸಾವು
X

ಅಮೆರಿಕಾ, ವಾಷಿಂಗ್ಟನ್: ಪ್ರಪಂಚದಲ್ಲಿ ಕೋವಿಡ್​ 19 ಸೋಂಕಿತರ ಸಂಖ್ಯೆ 19,548,144ಕ್ಕೆ ಬಂದು ನಿಂತಿದ್ದು, 724,149 ಮಂದಿ ಸಾವನ್ನಪ್ಪಿದ್ದಾರೆ. 6,274,797 ಸಕ್ರಿಯ ಪ್ರಕರಣಗಳಿವೆ. ಒಟ್ಟು 12,549,198 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ವಿಶ್ವಮಾಪಕ ವೆಬ್​ಸೈಟ್​‌ ಮಾಹಿತಿ ನೀಡಿದೆ.

ಅಮೆರಿಕಾ 5,095,524 ಸೋಂಕಿತರೊಂದಿಗೆ ಅಗ್ರ ಸ್ಥಾನದಲ್ಲಿದೆ. 2,314,463 ಸಕ್ರಿಯ ಪ್ರಕರಣಗಳಿವೆ. ಅಲ್ಲಿ 164,094 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. 2,616,967 ಮಂದಿ ಈವರೆಗೆ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಅತಿಹೆಚ್ಚು ಪ್ರಕರಣಗಳು ವರದಿಯಾದ ರಾಷ್ಟ್ರಗಳ ಸಾಲಿನಲ್ಲಿ ಬ್ರೆಜಿಲ್‌ ಇದ್ದು, ಈ ದೇಶದಲ್ಲಿ 2,967,064 ಪ್ರಕರಣಗಳು ಪತ್ತೆಯಾಗಿವೆ. 2,068,394 ಸೋಂಕಿತರು ಗುಣಮುಖರಾಗಿದ್ದು, 798,968 ಸಕ್ರಿಯ ಪ್ರಕರಣಗಳಿವೆ. 99,702 ಮಂದಿ ಮೃತಪಟ್ಟಿದ್ದಾರೆ.

ಕೊರೊನಾ ವೈರಸ್ ಸೋಂಕಿತರ ಪೈಕಿ ಮೂರನೇ ಸ್ಥಾನದಲ್ಲಿರುವ ಭಾರತದಲ್ಲಿ 2,089,773 ಪ್ರಕರಣಗಳು ದೃಢಪಟ್ಟಿದ್ದು, 1,429,100 ಮಂದಿ ಗುಣಮುಖರಾಗಿದ್ದಾರೆ. 618,071 ಸಕ್ರಿಯ ಪ್ರಕರಣಗಳಿವೆ. ಈವರೆಗೂ 42,602 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ.

ನಾಲ್ಕನೇ ಸ್ಥಾನದಲ್ಲಿರುವ ಭಾರತದಲ್ಲಿ 877,135 ಪ್ರಕರಣಗಳು ದೃಢಪಟ್ಟಿದ್ದು, 683,592 ಮಂದಿ ಗುಣಮುಖರಾಗಿದ್ದಾರೆ. 178,818 ಸಕ್ರಿಯ ಪ್ರಕರಣಗಳಿವೆ. ಈವರೆಗೂ 14,725 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ.

Next Story

RELATED STORIES