Top

ಕೇರಳ ವಿಮಾನ ದುರಂತ: ಇಬ್ಬರು ಪೈಲಟ್​ ಸೇರಿ 18 ಮಂದಿ ಸಾವು

ಕೇರಳ ವಿಮಾನ ದುರಂತ: ಇಬ್ಬರು ಪೈಲಟ್​ ಸೇರಿ 18 ಮಂದಿ ಸಾವು
X

ಕೇರಳ, ಕೋಯಿಕ್ಕೋಡ್‌‌: ದುಬೈಯಿಂದ ಬಂದ ಐಎಕ್ಸ್‌ 1344 ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವು ಕೋಯಿಕ್ಕೋಡ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯಿಂದ ಜಾರಿ ಪಕ್ಕದಲ್ಲಿದ್ದ ಕಣಿವೆಗೆ ಬಿದ್ದು ಎರಡು ಭಾಗವಾಗಿದೆ. ಶುಕ್ರವಾರ ಸಂಜೆ 7.41ಕ್ಕೆ ಈ ಅವಘಡ ನಡೆದಿದ್ದು, 18 ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿರುದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ವಿಮಾನವು ರನ್‌ವೇಯಲ್ಲಿ ಇಳಿಯುವ ವೇಳೆಗೆ ಜಾರಿತು. ಈ ವೇಳೆ ಬೆಂಕಿ ಕಾಣಿಸಿಕೊಂಡಿಲ್ಲ. ಕೋವಿಡ್‌ ಪಿಡುಗಿನಿಂದಾಗಿ ಹೊರದೇಶದಲ್ಲಿ ಸಿಲುಕಿರುವವರನ್ನು ಕರೆತರಲು ಆರಂಭಿಸಲಾದ ವಂದೇ ಭಾರತ್‌ ಮಿಷನ್‌ ಅಡಿಯಲ್ಲಿ ಈ ವಿಮಾನ ಕಾರ್ಯ ನಿರ್ವಹಿಸಿತ್ತು.

ಸದ್ಯ ವಿಮಾನದಲ್ಲಿ 184 ವಯಸ್ಕರು ಸೇರಿದಂತೆ 10 ಸಣ್ಣ ಮಕ್ಕಳಿದ್ದರು. ಐವರು ಸಿಬ್ಬಂದಿ ಮತ್ತು ಇಬ್ಬರು ಪೈಲಟ್‌ಗಳಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು ಹಲವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Next Story

RELATED STORIES