Top

ಟಾಲಿವುಡ್​​ಗೆ ‘ಭರ್ಜರಿ’ಯಾಗಿ ಎಂಟ್ರಿಕೊಟ್ಟ ಆ್ಯಕ್ಷನ್​ ಪ್ರಿನ್ಸ್​

ಟಾಲಿವುಡ್​​ಗೆ ‘ಭರ್ಜರಿ’ಯಾಗಿ ಎಂಟ್ರಿಕೊಟ್ಟ ಆ್ಯಕ್ಷನ್​ ಪ್ರಿನ್ಸ್​
X

ಸ್ಯಾಂಡಲ್​ವುಡ್​ನಲ್ಲಿ ರೆಕಾರ್ಡ್​ ಬ್ರೇಕ್​ ಮಾಡಿದ,ಖರಾಬು ಸಾಂಗ್​, ಇದೀಗ ತೆಲುಗಿನಲ್ಲೂ ಧೂಳೆಬ್ಬಿಸ್ತಾ ಇದೆ. ರಿಲೀಸ್​ ಆದ ಒಂದೇ ದಿನಕ್ಕೆ ಟಿಟೌನ್​ನಲ್ಲಿ ಸಖತ್​ ಸೌಂಡ್​ ಮಾಡ್ತಿದ್ದು, ನಂಬರ್​ ಒನ್​ ಟ್ರೆಂಡಿಂಗ್​ನಲ್ಲಿದೆ.

ಖರಾಬು..ಬಾಸು..ಖರಾಬು..ಸ್ಯಾಂಡಲ್​​ವುಡ್​ನಲ್ಲಿ​ ಸೆನ್ಸೇಷನ್ ಕ್ರಿಯೆಟ್​ ಮಾಡಿದ ಸಾಂಗ್​ ಇದು. ಈ ಸಾಂಗ್​​​ನಲ್ಲಿ ಅದೇನೋ ಮ್ಯಾಜಿಕ್​ ಇದೆ. ಸಾಂಗ್​​​ ಕೇಳಿದ ತಕ್ಷಣ ಕಾಲು ಸ್ಪೆಪ್​​​ ಹಾಕೋಕೆ ಶುರು ಮಾಡುತ್ತೆ. ತಲೆ ಅಲ್ಲಾಡುತ್ತೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಈ ಹಾಡು ಫೇವರೆಟ್​. ಗಾಂಧಿನಗರದ ಗಲ್ಲಿ ಗಲ್ಲಿಯಲ್ಲೂ ಈ ಹಾಡಿದನ್ನದ್ದೇ ಕಾರು ಬಾರು. ಇದೇ ಕಾರಣಕ್ಕಾಗಿ ಈ ಸಾಂಗ್​​​ ಎಲ್ಲಾ ರೆಕಾರ್ಡ್​​ಗಳನ್ನು ಚಿಂದಿ ಮಾಡಿದೆ. ಖರಾಬು ಆರ್ಭಟಕ್ಕೆ ಎಲ್ಲಾ ದಾಖಲೆಗಳು ಧೂಳಿಪಟವಾಗಿದೆ.

ಸ್ಯಾಂಡಲ್​​​​​​​​​​​​​​​​​​ವುಡ್​ನಲ್ಲಿ ಹೊಸ ಟ್ರೆಂಡ್ ಸೆಟ್​ ಮಾಡಿದ ಪೊಗರು ಚಿತ್ರದ ಖರಾಬು ಸಾಂಗ್​,ಇದೀಗ ಟಾಲಿವುಡ್​ನಲ್ಲಿ ಸಖತ್​ ಸೌಂಡ್ ಮಾಡ್ತಿದೆ. ಸ್ಯಾಂಡಲ್​​​​​ವುಡ್​​ನಲ್ಲಿ ಖರಾಬು ಹಾಡು ರಣವೇಗದಲ್ಲಿ ಸಾಗಿದ್ರೆ, ಟಾಲಿವುಡ್​ನಲ್ಲಿ ಮಿಂಚಿನ ವೇಗದಲ್ಲಿ ಸಾಗ್ತಿದೆ. ಖರಾಬು ಸೌಂಡ್​​ಗೆ ಟಾಲಿವುಡ್​ ಶೇಕ್ ಆಗ್ತಿದೆ. ಈ ಮೂಲಕ ಆ್ಯಕ್ಷನ್ ಪ್ರಿನ್ಸ್​ ಧ್ರುವ ಸರ್ಜಾ ಟಾಲಿವುಡ್​​ಗೆ ಭರ್ಜರಿಯಾಗಿ ಎಂಟ್ರಿಕೊಟ್ಟಿದ್ದಾರೆ. ತೆಲುಗಿನಲ್ಲಿ ಮಾಸ್​​​ ಖರಾಬು ವೈಬ್ರೇಷನ್ ಕ್ರಿಯೆಟ್​ ಮಾಡಿದೆ.

ತೆಲುಗಿನಲ್ಲಿ ಬಿಡುಗಡೆಯಾಗಿ ಕೇವಲ 24 ಗಂಟೆಯಲ್ಲೇ ಖರಾಬು ಸಾಂಗ್​​​ ರೆಕಾರ್ಡ್​​ಗಳ ಮೇಲೆ ರೆಕಾರ್ಡ್​ ಬರೆದಿದೆ. ಆಗಸ್ಟ್ 6ರಂದು ಮಧ್ಯಾಹ್ನ 12.12 ಗಂಟೆಗೆ ಸರಿಯಾಗಿ ರಿಲೀಸ್​ ಆದ ಈ ಸಾಂಗ್​​ ಟಾಲಿವುಡ್​​ನಲ್ಲಿ ಬಿರುಗಾಳಿಯನ್ನೇ ಸೃಷ್ಟಿ ಮಾಡಿದೆ. ಸಾಂಗ್​​ ಯೂಟ್ಯೂಬ್​​ನಲ್ಲಿ ಕಾಣಿಸಿಕೊಂಡ 24 ಗಂಟೆ ಕಳೆಯುವಷ್ಟರಲ್ಲೆ ಖರಾಬು ಸಾಂಗ್ ಇತಿಹಾಸ ಬರೆದಿದೆ. ಅಬ್ಬರಿಸಿ ಬೊಬ್ಬರಿದಿದೆ.

ಎಲ್ಲೆಡೆ ಟ್ರೆಂಡಿಂಗ್​. ನಂಬರ್​ ಒನ್​ ಟ್ರೆಂಡಿಂಗ್​. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣದಲ್ಲೂ ಆರ್ಭಟ. ಈ ಖರಬು ಸಾಂಗ್ ಸತತ ಎರಡನೇ ದಿನದಲ್ಲೂ ನಂಬರ್​ ಒನ್​ ಟ್ರೆಂಡಿಂಗ್​​ನಲ್ಲಿದೆ. ಖರಾಬು ಸಾಂಗ್​​​ಗೆ ಟಾಲಿವುಡ್​ ಪ್ರೇಕ್ಷಕರು ಫಿದಾ ಆಗಿದ್ದಾರೆ. 5 ಮಿಲಿಯನ್ಸ್​ಗಿಂತಲೂ ಹೆಚ್ಚು ವೀವ್ಸ್​ ಪಡೆದುಕೊಂಡ ತೆಲುಗು ವರ್ಷನ್ ಸಾಂಗ್​​ 10 ಮಿಲಿಯನ್​​ ನತ್ತ ಮುನ್ನುಗ್ಗುತ್ತಿದೆ. 77 ಸಾವಿರಕ್ಕೂ ಹೆಚ್ಚು ಮಂದಿ ಈ ಸಾಂಗ್​​ಗೆ ಲೈಕ್​ ಬಟನ್​ ಒತ್ತಿದ್ದಾರೆ. ಟಾಲಿವುಡ್​​​​​​​​​​​ಗೆ ಮಿಂಚಿನಂತೆ ಹೋದ ಧ್ರುವ ಸರ್ಜಾ ಆರಂಭದಲ್ಲೇ ಗುಡಿಗಿದ್ದಾರೆ.

ಏಪ್ರಿಲ್ 2ರಂದು ಪೊಗರು ಚಿತ್ರದ 'ಖರಾಬು' ಹಾಡು ಯೂ ಟ್ಯೂಬ್‌ನಲ್ಲಿ ರಿಲೀಸ್ ಆಗಿತ್ತು. ಈ ಸಾಂಗ್​​​ ರಿಲೀಸ್ ಆಗುತ್ತಿದ್ದಂತೆ ಕನ್ನಡಿಗರು ಈ ಹಾಡನ್ನು ಬಿಗಿದಪ್ಪಿಕೊಂಡಿದ್ರು. ಬಿಡುಗಡೆಯಾದ ದಿನದಿಂದಲೇ ರೆಕಾರ್ಡ್​ ಮೇಲೆ ರೆಕಾರ್ಡ್ ಬರೆದಿತ್ತು. ಕನ್ನಡದ ಖರಾಬು ಸಾಂಗ್ 100 ಮಿಲಿಯನ್​​ ವಿವ್ಸ್ ಪಡೆದುಕೊಂಡಿದೆ. ಅಂದ್ರೆ ಬರೋಬ್ಬರಿ 10 ಕೋಟಿ ಜನ ಈ ಹಾಡನ್ನು ಯೂಟ್ಯೂಬ್​​ನಲ್ಲಿ ವೀಕ್ಷಣೆ ಮಾಡಿದ್ದಾರೆ. ಕನ್ನಡದಲ್ಲಿ ಇಷ್ಟು ಕಡಿಮೆ ಅವಧಿಯಲ್ಲಿ 100 ಮಿಲಿಯನ್ ವೀಕ್ಷಣೆ ಕಂಡ ಮೊದಲು ಹಾಡು ಇದಾಗಿದೆ. ಈ ಮೂಲಕ ಖರಾಬು ಸಾಂಗ್​ ಕನ್ನಡದಲ್ಲೂ ಹೊಸ ದಾಖಲೆ ಬರೆದಿದೆ.

ಖರಾಬು. ಹಾಡಿನ ತೆಲುಗು ವರ್ಷನ್‌ಗೆ ಚಂದನ್ ಶೆಟ್ಟಿ ಹಾಡಿಲ್ಲ ಅವರ ಬದಲಿಗೆ, ಅಲಾ ವೈಕುಂಠಪುರಮುಲೋ ಚಿತ್ರದ ರಾಮುಲೋ ರಾಮುಲಾ. ಹಾಡು ಸೇರಿದಂತೆ ಅನೇಕ ಹಿಟ್ ಗೀತೆಗಳನ್ನು ಹಾಡಿರುವ ಗಾಯಕ ಅನುರಾಗ್ ಕುಲಕರ್ಣಿ ಹಾಡಿದ್ದಾರೆ.

ಕೊರೊನಾ ಕಿರಿಕಿರಿ ಇಲ್ಲದೇ ಹೋಗಿದ್ದರೆ, ಇಷ್ಟೊತ್ತಿಗೆ ಈ ಸಿನಿಮಾ ತೆರೆಗೆ ಬರಬೇಕಿತ್ತು. ಸದ್ಯ ಒಂದಷ್ಟು ಚಿತ್ರೀಕರಣ ಬಾಕಿ ಉಳಿದಿದ್ದು, ಆದಷ್ಟು ಬೇಗ ಸಿನಿಮಾ ತೆರೆಗೆ ಬರಲಿದೆ. ಧ್ರುವ ಸರ್ಜಾಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದು, 'ಡಾಲಿ' ಧನಂಜಯ, ರಾಘವೇಂದ್ರ ರಾಜ್‌ಕುಮಾರ್ ಹಲವು ಸ್ಟಾರ್ ನಟರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಪೊಗರು ದರ್ಶನಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.

Next Story

RELATED STORIES