Top

ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಬ್ಯೂಟಿ ಸೀಕ್ರೆಟ್ ರಿವೀಲ್​

ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಬ್ಯೂಟಿ ಸೀಕ್ರೆಟ್ ರಿವೀಲ್​
X

ಹೊಸ ಸಿನಿಮಾ ಶೂಟಿಂಗ್, ರಿಲೀಸ್ ಇಲ್ಲದೇ ಸೆಲೆಬ್ರೆಟಿಗಳು ಮನೆಯಲ್ಲಿಯೇ ಕಾಲ ಕಳಿತಾ ಇರೋದ್ರಿಂದ, ಸೋಶಿಯಲ್​ ಮೀಡಿಯಾದಲ್ಲಿ ಕೊಂಚ ಜಾಸ್ತಿನೇ ಆ್ಯಕ್ಟಿವ್​ ಆಗಿದ್ದಾರೆ. ಅದರಲ್ಲೂ ಬ್ಯುಸಿಯೆಸ್ಟ್ ಹಿರೋಯಿನ್ ರಶ್ಮಿಕಾ ಮಂದಣ್ಣ ಅಭಿಮಾನಿಗಳ ಜೊತೆ ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಕನೆಕ್ಟ್ ಆಗಿದ್ದಾರೆ. ಸದ್ಯ ರಶ್ಮಿಕಾ ತಮ್ಮ ಬ್ಯೂಟಿ ಸೀಕ್ರೆಟ್​ನ್ನ ಫ್ಯಾನ್ಸ್​ ಜೊತೆ ಶೇರ್ ಮಾಡಿದ್ದಾರೆ.

ನೆಚ್ಚಿನ ಸ್ಟಾರ್​ಗಳ ಬಗ್ಗೆ ಏನೇ ವಿಷಯಗಳಿದ್ರೂ,ತಿಳ್ಕೋಳ್ಳೋ ಕುತೂಹಲ ಅಭಿಮಾನಿಗಳಿಗೆ. ಅದರಲ್ಲೂ ಇತ್ತೀಚೆಗೆ ಶೂಟಿಂಗ್ ಇಲ್ದೆ, ಥಿಯೇಟರ್​ ಲಾಕ್​ಡೌನ್​ ಆಗಿರೋದ್ರಿಂದ, ಸ್ಟಾರ್​ಗಳು ಅಭೀಮಾನಿಗಳನ್ನ, ಅಭಿಮಾನಿಗಳು ತಮ್ಮ ನೆಚ್ಚಿನ ಕಲಾವಿದರನ್ನ ಮಿಸ್ ಮಾಡಿಕೊಳ್ತಿದ್ದಾರೆ, ಹಾಗಾಗಿ ಅವರಿಬ್ಬರೂ ಕನೆಕ್ಟ್ ಆಗೋಕ್ಕೆ ಇರೋ ಒಂದೇ ವೇದಿಕೆ ಅಂದ್ರೆ ಅದು ಸೋಶಿಯಲ್​ ಮೀಡಿಯಾ.

ಸ್ಯಾಂಡಲ್​ವುಡ್​ ಮಾತ್ರವಲ್ದೆ, ಟಾಲಿವುಡ್​ ಬಿಗ್​ ಫ್ಯಾನ್​ ಫಾಲೋವರ್ಸ್ ಇರೋ ನಾಯಕಿ ರಶ್ಮಿಕಾ ಮಂದಣ್ಣ, ಮೊದಲಿಗಿಂತಲೂ ಇತ್ತೀಚೆಗೆ ಹೆಚ್ಚು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್​ ಆಗಿದ್ದಾರೆ. ಅಭಿಮಾನಿಗಳ ಜೊತೆ ಹೆಚ್ಚೆಚ್ಚು ಕಾನ್ವರ್ಸೇಶನ್​ ನಡೆಸ್ತಾ ಇದ್ದಾರೆ. ಇದೀಗ ರಶ್ಮಿಕಾ ತಮ್ಮ ಫ್ಯಾನ್ಸ್​​ಗೋಸ್ಕರ ತಮ್ಮ ಬ್ಯೂಟಿ ಸೀಕ್ರೆಟ್​ನ್ನ ರಿವೀಲ್​ ಮಾಡಿದ್ದಾರೆ.

ರಶ್ಮಿಕಾ ಮಂದಣ್ಣ, ಈ ಹಿಂದಿಗಿಂತಲೂ ಲಾಕ್​ಡೌನ್​ನಲ್ಲಿ ಹೆಚ್ಚು ಸುಂದರವಾಗಿ ಕಾಣ್ತಾ ಇದ್ದಾರೆ..ಮುಖದ ಕಾಂತಿ ಕೂಡ ಹೆಚ್ಚಾಗಿದೆ. ಇದ್ರಿಂದ ರಶ್ಮಿಕಾ ಬ್ಯೂಟಿ ಸೀಕ್ರೆಟ್ ತಿಳ್ಕೊಳ್ಳೋಕ್ಕೆ ಅಭಿಮಾನಿಗಳಲ್ಲಿ ಕ್ಯೂರಿಯಾಸಿಟಿ ಅಂತೂ ಇದ್ದೇ ಇತ್ತು. ಸದ್ಯ ಸ್ವತಃ ರಶ್ಮಿಕಾನೇ ತಮ್ಮ ತ್ವಚೆಯ ಕಾಂತಿಯ ಹಿಂದಿನ ರಹಸ್ಯವನ್ನ ಬಿಚ್ಚಿಟ್ಟಿದ್ದಾರೆ.

ರಶ್ಮಿಕಾ ಈ ಮೊದಲು ತಮ್ಮ ದೇಹಕ್ಕೆ ಸೂಕ್ತವಲ್ಲದ ಆಹಾರವನ್ನ ಸೇವಿಸ್ತಾ ಇದ್ದಾರೆ. ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸ್ತಾ ಇರಲಿಲ್ಲವಂತೆ. ಆದರೆ, ಇದೀಗ ತಮ್ಮ ದೇಹಕ್ಕೆ ಹೊಂದಿಕೊಳ್ಳುವ ಆಹಾರವನ್ನ ಮಾತ್ರ ಸೇವಿಸ್ತಾರಂತೆ. ಪ್ರತಿದಿನ 2 ಲೀಟರ್ ನೀರು ಕುಡಿತಾರಂತೆ ಹಾಗೂ ಸನ್​ ಸ್ಕ್ರೀನ್​ ಲೋಶನ್​ ಹಚ್ಚದೇ ಮನೆಯಿಂದ ಹೊರಗೆ ಹೋಗೋದಿಲ್ಲವಂತೆ. ಹಾಗೂ ಪ್ರತಿನಿತ್ಯ ಕ್ಲೆನ್​ಸರ್, ವಿಟಮಿನ್ ಸಿ ಸಿರಮ್, ಮಾಯಿಶ್ಚರೈಸರ್ ಬಳಸುತ್ತಾರಂತೆ. ಅಪರೂಪಕ್ಕೆ ಲಿಪ್ ಸ್ಕ್ರಬ್, ಸೂದಿಂಗ್​ ಲೋಷನ್, ಫೇಸ್ ಎಕ್ಸ್​​ಪೋಲಿಯೇಟರ್​ ಬಳಸ್ತಾರಂತೆ.

ಸಾಮಾನ್ಯವಾಗಿ ನಟಿಯರು ತಮ್ಮ ಬ್ಯೂಟಿ ಸೀಕ್ರೇಟ್​ನ್ನ ರಿವೀಲ್ ಮಾಡೋದೇ ಕಡಿಮೆ. ಆದರೆ, ರಶ್ಮಿಕಾ ಇಷ್ಟು ಡೀಟೇಲ್​ ಆಗಿ ಬ್ಯೂಟಿ ಟಿಪ್ಸ್​ ಶೇರ್ ಮಾಡಿರೋದಕ್ಕೆ ಫ್ಯಾನ್ಸ್​ ಖುಷಿ ಪಟ್ಟಿದ್ದಾರೆ.

Next Story

RELATED STORIES