Top

'ರೈತರು ಮಳೆಯಿಂದ ಬೆಳೆ ಹಾನಿಯಾದ್ರೆ ಚಿಂತೆ ಮಾಡಲ್ಲ ಆದರೆ ಬರಗಾಲ ಬೀಳಬಾರದು ಅಂತ ಬಯಸುತ್ತಾರೆ'

ರೈತರು ಮಳೆಯಿಂದ ಬೆಳೆ ಹಾನಿಯಾದ್ರೆ ಚಿಂತೆ ಮಾಡಲ್ಲ ಆದರೆ ಬರಗಾಲ ಬೀಳಬಾರದು ಅಂತ ಬಯಸುತ್ತಾರೆ
X

ಬೆಳಗಾವಿ: ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ ಹೀಗೆ ಮಳೆ ಮುಂದುವರೆದರೆ ಸಮಸ್ಯೆ ಎದುರಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಶುಕ್ರವಾರ ಹೇಳಿದರು.

ಬೆಳಗಾವಿಯಲ್ಲಿ ಪ್ರವಾಹ ಮತ್ತು ಕೋವಿಡ್ 19 ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮದ ಮಾತನಾಡಿದ ಅವರು, ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ 1 ಲಕ್ಷ 50 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಪ್ರವಾಹದಿಂದ ಅವಾಂತರ ಆಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದರು.

ಇನ್ನು ಕೊಯಿನಾ ಡ್ಯಾಮ್​ ನೀರಿನ ಮಟ್ಟದ ಮೇಲೆ ನಿಗಾವಹಿಸಲಾಗಿದೆ. ರಾಜ್ಯದ ಅಧಿಕಾರಿಯನ್ನು ಡ್ಯಾಮ್​ನಲ್ಲಿ ಅಧಿಕಾರಿಯನ್ನು ನೇಮಿಸಲಾಗಿದ್ದು, 1 ಲಕ್ಷ 80 ಸಾವಿರದಿಂದ 2 ಲಕ್ಷದ ವರೆಗೂ ಕೃಷ್ಣಾ ನದಿಗೆ ನೀರು ಹರಿದು ಬಂದ್ರೆ ಅಪಾಯ ಎದುರಾಗಲಿದೆ. ಯಾವುದೇ ರೀತಿಯ ಪ್ರವಾಹ ಸ್ಥಿತಿ ಎದುರಾಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚಿಸಿರುವೆ ಎಂದು ಅವರು ತಿಳಿಸಿದರು.

ಇನ್ನು ಕಳೆದ ಬಾರಿ ಬಳ್ಳಾರಿ ನಾಲೆಯಿಂದ ಬೆಳಗಾವಿ, ಗೋಕಾಕ್​ನಲ್ಲಿ ಪ್ರವಾಹ ಬಂದಿತ್ತು. ಈಗ ಬಳ್ಳಾರಿ ನಾಲಾ ಓಪನ್ ಮಾಡಲಾಗಿದೆ. ಇದರಿಂದ ಅಂಕಲಗಿ ಸೇತುವೆ ಬಂದ್ ಆಗಿದೆ. ನಾಳೆ ನಾನೇ ಚಿಕ್ಕೋಡಿ ವಿಭಾಗದ ಕೃಷ್ಣಾ ನದಿ ತೀರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವೆ. ಗಂಜಿ ಕೇಂದ್ರ ತೆರೆಯಲು ಸಕಲ ಸಿದ್ಧತೆ ಮಾಡಿಕೊಳ್ಳಲು ಸೂಚಿಸಿರುವೆ. ಮಳೆಯಿಂದ ಆಗುವ ಬೆಳೆ ಹಾನಿ, ಮನೆ ಹಾನಿ ಬಗ್ಗೆ ಸರ್ವೇ ಮಾಡಿಸಿ ಪರಿಹಾರ ಕೊಡಲಾಗುವುದು ಎಂದು ಹೇಳಿದರು.

ಕಳೆದ ಬಾರಿ ಪ್ರವಾಹದಿಂದ ಮನೆ ಕಳೆದುಕೊಂಡು, ಈಗ ಅರ್ಧ ಮನೆ ಕಟ್ಟಿಕೊಂಡವರ ಮನೆಗೆ ಮತ್ತೆ ಹಾನಿ ಆಯ್ತು. ಮಾನವೀಯತೆ ಆಧಾರದ ಮೇಲೆ ಕ್ರಮಕೈಗೊಳ್ಳಲಾಗುವುದು. ನಮ್ಮ ರೈತರಿಗೆ ಮಳೆಯಿಂದ ಬೆಳೆ ಹಾನಿಯಾದ್ರೆ ಚಿಂತೆ ಮಾಡಲ್ಲ ಆದರೆ ನಮ್ಮ ರೈತರು ಬರಗಾಲ ಬಿಳಬಾರದು ಅಂತಾ ಬಯಸುತ್ತಾರೆ ಎಂದು ನುಡಿದರು.

ಸದ್ಯ ಕೊರೊನಾ ನಿಯಂತ್ರಣಕ್ಕೆ ಎಲ್ಲಾ ಕ್ರಮಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರಿಗೆ ಚಿಕಿತ್ಸೆಗೆ ತೊಂದರೆ ಆಗದಂತೆ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿರುವೆ. ಕೊರೊನಾ, ಪ್ರವಾಹವನ್ನು ನಾನು ಡಿಸಿಎಂ ಸವದಿ, ಸಚಿವೆ ಜೋಲ್ಲೆ ಹಾಗೂ ಇತರೆ ಜನಪ್ರತಿನಿಧಿಗಳು ಸೇರಿ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಸಚಿವ ರಮೇಶ್ ಜಾರಕಿಹೊಳಿ ಅವರು ಭವರಸೆ ನೀಡಿದರು.

Next Story

RELATED STORIES