Top

ರಾಜ್ಯದಲ್ಲಿ ಅತ್ಯಂತ ವಿವಾದವಾದ ವ್ಯಕ್ತಿ ನಾನೇ - ಸಚಿವ ಜೆ.ಸಿ ಮಾಧುಸ್ವಾಮಿ

ರಾಜ್ಯದಲ್ಲಿ ಅತ್ಯಂತ ವಿವಾದವಾದ ವ್ಯಕ್ತಿ ನಾನೇ - ಸಚಿವ ಜೆ.ಸಿ ಮಾಧುಸ್ವಾಮಿ
X

ತುಮಕೂರು: ರಾಜ್ಯದಲ್ಲಿ ಅತ್ಯಂತ ವಿವಾದವಾದ ವ್ಯಕ್ತಿ ನಾನೇ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಅವರು ಮತದಾರರ ಮುಂದೆ ಮನದಾಳದ ಮಾತು ಬಿಚ್ಚಿಟ್ಟಿದ್ದಾರೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಭದ್ರಮೇಲ್ದಂಡೆ ಯೋಜನೆಯ 108ನೇ ಸರಪಳಿ ಭೂಮಿ ಪೂಜೆ ವೇಳೆ ಮಾತನಾಡಿದ ಅವರು, ನಾನು ಯಾರನ್ನೂ ಅಷ್ಟೊಂದು ಚೆನ್ನಾಗೂ ಇಟ್ಟುಕೊಂಡಿರಲ್ಲ, ಯಾರನ್ನೂ ದೂರನೂ ಮಾಡೋ ಮನುಷ್ಯ ಅಲ್ಲ ಎಂದು ಹೇಳಿದ್ದಾರೆ.

ಇನ್ನು ನಾನು ಎಲ್ಲರಿಗೂ ಬೇಕಾದೋನೆ, ಯಾರಿಗೂ ಬೇಡವಾದೋನೆ. ನನ್ನನ್ನ ಎಲ್ಲರೂ ಟೀಕೆ ಮಾಡ್ತಾರೆ, ನಮ್ಮತ್ರ ಇರೋರು ನಾನೇನು ತಲೆ ಕಡೆಸಿಕೊಳ್ಳಲ್ಲ ಎಂದರು.

ಅಲ್ಲದೇ, ನಮ್ಮನ್ನ ಸುಮಾರು ಜನ ಹೊಗಳುತ್ತಿರ, ಇಡೀ ರಾಜ್ಯದಲ್ಲಿ ಅತ್ಯಂತ ವಿವಾದವಾದ ವ್ಯಕ್ತಿ ಅಂದ್ರೆ ನಾನೇ. ನಾನು ತಲೆಕಡೆಸಿಕೊಳ್ಳಲ್ಲ. ನಾನು ಏನ್ ಮಾಡಬೇಕು ಅಷ್ಟೇ ಮಾಡ್ತೀನಿ. ನಾನು ಏನು ಹೇಳಬೇಕೋ ಅದು ಹೇಳೇ ಹೇಳ್ತೀನಿ ಎಂದು ಜೆ.ಸಿ ಮಾಧುಸ್ವಾಮಿ ಅವರು ಮಾತನಾಡಿದ್ದಾರೆ.

Next Story

RELATED STORIES