Top

ಕೋವಿಡ್​-19 : ವಿಶ್ವದಾದ್ಯಂತ 1.92 ಕೋಟಿ ಮಂದಿಗೆ ಸೋಂಕು, 7.17 ಲಕ್ಷ ಮಂದಿ ಸಾವು

ಕೋವಿಡ್​-19 : ವಿಶ್ವದಾದ್ಯಂತ 1.92 ಕೋಟಿ ಮಂದಿಗೆ ಸೋಂಕು, 7.17 ಲಕ್ಷ ಮಂದಿ ಸಾವು
X

ಅಮೆರಿಕಾ, ವಾಷಿಂಗ್ಟನ್: ಪ್ರಪಂಚದಲ್ಲಿ ಕೋವಿಡ್​ 19 ಸೋಂಕಿತರ ಸಂಖ್ಯೆ 19,260,188ಕ್ಕೆ ಬಂದು ನಿಂತಿದ್ದು, 717,704 ಮಂದಿ ಸಾವನ್ನಪ್ಪಿದ್ದಾರೆ. 6,182,060 ಸಕ್ರಿಯ ಪ್ರಕರಣಗಳಿವೆ. ಒಟ್ಟು 12,360,424 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ವಿಶ್ವಮಾಪಕ ವೆಬ್​ಸೈಟ್​‌ ಮಾಹಿತಿ ನೀಡಿದೆ.

ಅಮೆರಿಕಾ 5,032,179 ಸೋಂಕಿತರೊಂದಿಗೆ ಅಗ್ರ ಸ್ಥಾನದಲ್ಲಿದೆ. 2,292,707 ಸಕ್ರಿಯ ಪ್ರಕರಣಗಳಿವೆ. ಅಲ್ಲಿ 162,804 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. 2,576,668 ಮಂದಿ ಈವರೆಗೆ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಅತಿಹೆಚ್ಚು ಪ್ರಕರಣಗಳು ವರದಿಯಾದ ರಾಷ್ಟ್ರಗಳ ಸಾಲಿನಲ್ಲಿ ಬ್ರೆಜಿಲ್‌ ಇದ್ದು, ಈ ದೇಶದಲ್ಲಿ 2,917,562 ಪ್ರಕರಣಗಳು ಪತ್ತೆಯಾಗಿವೆ. 2,047,660 ಸೋಂಕಿತರು ಗುಣಮುಖರಾಗಿದ್ದು, 771,258 ಸಕ್ರಿಯ ಪ್ರಕರಣಗಳಿವೆ. 98,644 ಮಂದಿ ಮೃತಪಟ್ಟಿದ್ದಾರೆ.

ಕೊರೊನಾ ವೈರಸ್ ಸೋಂಕಿತರ ಪೈಕಿ ಮೂರನೇ ಸ್ಥಾನದಲ್ಲಿರುವ ಭಾರತದಲ್ಲಿ 2,027,074 ಪ್ರಕರಣಗಳು ದೃಢಪಟ್ಟಿದ್ದು, 1,378,105 ಮಂದಿ ಗುಣಮುಖರಾಗಿದ್ದಾರೆ. 607,331 ಸಕ್ರಿಯ ಪ್ರಕರಣಗಳಿವೆ. ಈವರೆಗೂ 41,638 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ.

ನಾಲ್ಕನೇ ಸ್ಥಾನದಲ್ಲಿರುವ ಭಾರತದಲ್ಲಿ 871,894 ಪ್ರಕರಣಗಳು ದೃಢಪಟ್ಟಿದ್ದು, 676,357 ಮಂದಿ ಗುಣಮುಖರಾಗಿದ್ದಾರೆ. 180,931 ಸಕ್ರಿಯ ಪ್ರಕರಣಗಳಿವೆ. ಈವರೆಗೂ 14,606 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ.

Next Story

RELATED STORIES