Top

'ಚಿಕ್ಕಮಗಳೂರಿನಲ್ಲಿ ನಿಯಂತ್ರಣ ಮೀರಿ ಮಳೆಗೆ ಯಾವುದೇ ಜೀವಹಾನಿಯಾಗಿಲ್ಲ'

ಚಿಕ್ಕಮಗಳೂರಿನಲ್ಲಿ ನಿಯಂತ್ರಣ ಮೀರಿ ಮಳೆಗೆ ಯಾವುದೇ ಜೀವಹಾನಿಯಾಗಿಲ್ಲ
X

ಬೆಂಗಳೂರು: ಜಿಲ್ಲಾಧಿಕಾರಿಯವರ ಜೊತೆ ನಾನು ಸಂಪರ್ಕದಲ್ಲಿದ್ದೇನೆ ನಮ್ಮ ನಿಯಂತ್ರಣ ಮೀರಿ ಚಿಕ್ಕಮಗಳೂರಿನಲ್ಲಿ ಮಳೆಗೆ ಯಾವುದೇ ಜೀವಹಾನಿಯಾಗಿಲ್ಲ ಎಂದು ಸಚಿವ ಸಿ.ಟಿ ರವಿ ಅವರು ಶುಕ್ರವಾರ ಹೇಳಿದರು.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಇಬ್ಬರು ಅನುಮಾನಾಸ್ಪದ ಸಾವಿನ ಬಗ್ಗೆ ಮಾಹಿತಿ ತರಿಸಿಕೊಳ್ಳುತ್ತಿದ್ದೇನೆ. ಕಳೆದ ವರ್ಷ ಭೂಕುಸಿತ ಆಗಿತ್ತು. ಈ ಬಾರಿ ಭೂಕುಸಿತ ನಮ್ಮ ಜಿಲ್ಲೆಯಲ್ಲಿ ಆಗಿಲ್ಲ, ಎಲ್ಲವೂ ನಿಯಂತ್ರಣದಲ್ಲಿದೆ ಎಂದು ಅವರು ತಿಳಿಸಿದರು.

ಸಿಎಂ ಹೇಳಿದ್ದರು ಚಿಕ್ಕಮಗಳೂರಿಗೆ ಇನ್ನೂ ಭೇಟಿ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇವತ್ತು ಬೆಂಗಳೂರಿನಲ್ಲಿ ಪ್ರವಾಸೋದ್ಯಮ ನೀತಿ ಸಂಬಂಧ ಪೂರ್ವಯೋಜಿತ ಸಭೆ ಇತ್ತು. ಹೀಗಾಗಿ ಚಿಕ್ಕಮಗಳೂರಿಗೆ ಹೋಗಲಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಸದ್ಯ ಚಿಕ್ಕಮಗಳೂರಿನಲ್ಲಿ ನಿಯಂತ್ರಣ ಮೀರಿದೆ, ನಾನೇ ಹೋಗಬೇಕು ಅಂತಿದ್ದಿದ್ರೆ ನಿನ್ನೆನೇ ಹೋಗುತ್ತಿದ್ದೆ. ನಿನ್ನೆ ಮಳೆ ಪ್ರಮಾಣವೂ ಕಡಿಮೆಯಾಯ್ತು. ನಿಯಂತ್ರಣ ಮೀರಿದ ಪರಿಸ್ಥಿತಿಯೂ ಜಿಲ್ಲೆಯಲ್ಲಿ ಇರಲಿಲ್ಲ, ಡಿಸಿಯಿಂದ ವರದಿ ಪಡೆದಿದ್ದೇನೆ. ವರದಿಯಲ್ಲಿ ಎಲ್ಲವೂ ಸಹಜವಿದೆ. ಮಳೆ ಸರಾಸರಿ ಬಂದಿದೆ. ಕೊಪ್ಪ, ಮೂಡಿಗೆರೆಗಳಲ್ಲಿ ಮಾತ್ರ ಸ್ವಲ್ಪ ಮಳೆ ಹೆಚ್ಚು ಬಿದ್ದಿದೆ. ಉಳಿದ ಕಡೆ ವಾಡಿಕೆ ಮಳೆಯಾಗಿದೆ ಎಂದರು.

ಸದ್ಯ ನಿಯಂತ್ರಣದಲ್ಲಿ ಪರಿಸ್ಥಿತಿ ಇಲ್ಲ ಅಂದಿದ್ರೆ ನಾನೇ ಹೋಗಿರ್ತಿದ್ದೆ. ಅದಕ್ಕಿಂತ ಆದ್ಯತೆ ನನಗೆ ಮತ್ತೊಂದಿಲ್ಲ, ಆದರೆ ಎಲ್ಲವೂ ಸಹಜ ಸ್ಥಿತಿಯಲ್ಲಿದೆ. ಇಂದು ಸಂಜೆ ಚಿಕ್ಕಮಗಳೂರಿಗೆ ಹೋಗುತ್ತಿದ್ದೇನೆ ಎಂದು ಸಿಟಿ ರವಿ ಅವರು ತಿಳಿಸಿದರು.

ಮೂಡಿಗೆರೆಯಲ್ಲಿ 3, ಕೊಪ್ಪದ ಕೂಳೂರಿನಲ್ಲಿ 3 ಮನೆಗಳು, ಶೃಂಗೇರಿಯಲ್ಲಿ 17 ಜನರನ್ನ ಸ್ಥಳಾಂತರ ಮಾಡಲಾಗಿದೆ. ಇಲ್ಲಿಯವರೆಗೂ ಗಂಜಿ ಕೇಂದ್ರ ತೆರೆದಿಲ್ಲ, 21 ಕಡೆ ಗಾಳಿ ಜೋರಾಗಿ ಬೀಸಿ ವಿದ್ಯುತ್ ಸಂಪರ್ಕ ಕಡಿತ, ಮರಗಳು ಬಿದ್ದಿವೆ. 102 ಮನೆಗಳು ಭಾಗಶಃ ಹಾನಿಯಾಗಿವೆ.

Next Story

RELATED STORIES