Top

ಹಿಟ್​ ಸಿನಿಮಾಗಳಲ್ಲಿ ನಟಿಸಿದ ಪುಟಾಣಿ ಈಗ ಯುಪಿಎಸ್​ಸಿನಲ್ಲಿ 167 ರ‍್ಯಾಂಕ್

ಹಿಟ್​ ಸಿನಿಮಾಗಳಲ್ಲಿ ನಟಿಸಿದ ಪುಟಾಣಿ ಈಗ ಯುಪಿಎಸ್​ಸಿನಲ್ಲಿ 167 ರ‍್ಯಾಂಕ್
X

ಕನ್ನಡ ಚಿತ್ರರಂಗದಲ್ಲಿ, ಸ್ಟಾರ್ ಹೀರೋಗಳ ಜೊತೆ ಸ್ಕ್ರೀನ್​ ಶೇರ್ ಮಾಡಿದ್ದ ಬಾಲನಟಿಯೊಬ್ರು, ಇದೀಗ ಇಡೀ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಮುಂದಿನ ದಿನಗಳಲ್ಲಿ ಐಎಎಸ್​ ಅಧಿಕಾರಿಯಾಗಿ ಕರ್ತವ್ಯ ನಿಭಾಯಿಸುವ ಕನಸನ್ನ ಹೊತ್ತಿದ್ದಾರೆ.

ಸ್ಯಾಂಡಲ್​ವುಡ್​ಗೆ ಬಾಲನಟ ನಟಿಯರಾಗಿ ಎಂಟ್ರಿ ಕೊಟ್ಟ ಸಾಕಷ್ಟು ಮಕ್ಕಳು, ಇಂದು ಚಿತ್ರರಂಗದಲ್ಲೇ ಕಲಾವಿದರಾಗಿ ನಟನೆಯಲ್ಲಿ ಬ್ಯುಸಿಯಾಗರೋದನ್ನ ನೋಡಿದ್ದೇವೆ. ಆದರೆ, ಇಲ್ಲೊಬ್ಬ ಬಾಲನಟಿ ಮಾತ್ರ, ಐಎಎಸ್​ ಅಧಿಕಾರಿಯಾಗಿ, ಸಮಾಜಕ್ಕೆ ಉತ್ತಮ ಆಡಳಿತ ಸೇವೆ ಕೊಡೋ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಆ ಬಾಲನಟಿ ಮತ್ಯಾರು ಅಲ್ಲ. ಕೀರ್ತನಾ.

ಕನ್ನಡದ ಆಲ್​ಮೋಸ್ಟ್​ ಸ್ಟಾರ್​ ನಟನರ ಜೊತೆ ನಟಿಸಿದ್ದಾರೆ ಕೀರ್ತನಾ. ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್ ಅಭಿನಯದ ದೊರೆ, ರಿಯಲ್​ ಸ್ಟಾರ್ ಉಪೇಂದ್ರ ಅಭಿನಯದ ಎ, ಕರ್ಪೂರದ ಗೊಂಬೆ, ಹಬ್ಬ, ಲೇಡಿ ಕಮಿಷನರ್, ಸರ್ಕಲ್​ ಇನ್ಸ್​ಪೆಕ್ಟರ್ ಹೀಗೆ ಸುಮಾರು 32 ಸಿನಿಮಾಗಳಲ್ಲಿ ಕೀರ್ತನಾ, ಬಾಲನಟಿಯಾಗಿ ಅಭಿನಯಸಿ ಗೆದ್ದಿದ್ದಾರೆ.

ಬಾಲನಟಿಯಾಗಿ ಎಲ್ಲರ ಮನೆಮಾತಾಗಿದ್ದ ಕೀರ್ತನಾ, ಇದೀಗ ಸರ್ಕಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಸಜ್ಜಾಗಿದ್ದಾರೆ. ದೇಶದ ಅತ್ಯುನ್ನತ ನಾಗರೀಕ ಸೇವೆಗಳ ನೇಮಕಕ್ಕೆ ನಡೆಸಲಾದ ಯುಪಿಎಸ್​ಸಿ ಪರೀಕ್ಷೆಗಯಲ್ಲಿ ಕೀರ್ತನಾ ತೇರ್ಗಡೆಯಾಗಿದ್ದಾರೆ. ಯುಪಿಎಸ್​ಸಿ ಪರೀಕ್ಷೆ ಬರೆದು, ಇಡೀ ರಾಜ್ಯಕ್ಕೆ 167ನೇ ರ್ಯಾಂಕ್​ ಪಡೆದಿದ್ದಾರೆ. ಈಗಾಗಲೇ ಬಿಬಿಎಂಪಿ ನೋಡಲ್​ ಅಧಿಕಾರಿಯಾಗಿ ಕಾರ್ಯ ನಿರ್ವಹಿಸ್ತಾ ಇರೋ ಕೀರ್ತನಾ ಮುಂದಿನ ದಿನಗಳಲ್ಲಿ ಐಎಎಸ್​ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸೋ ಹಂತ ತಲುಪಿದ್ದಾರೆ.

ವಿಶೇಷ ಅಂದ್ರೆ ಈ ಬಾರಿ ಸುಮಾರು 37 ರ್ಯಾಂಕ್​ಗಳು ಕರ್ನಾಟಕ ರಾಜ್ಯದ ಪಾಲಾಗಿದೆ. ಅದರಲ್ಲೂ ಈ ಪರೀಕ್ಷೆಯಲ್ಲಿ ತೇರ್ಗಡೆಯಾದ 19 ಮಂದಿ, ಹೆಮ್ಮೆಯ ಡಾ.ರಾಜ್​ಕುಮಾರ್ ಸಿವಿಲ್​ ಸರ್ವೀಸ್​ ಅಕಾಡೆಮಿಯಲ್ಲಿ ತರಬೇತಿ ಪಡೆದವರಾಗಿದ್ದಾರೆ ಹಾಗೂ ಬಾಲನಟಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರೋ ಕೀರ್ತನಾ ಕೂಡ, ರಾಜ್​ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ.

ಉದ್ಯೋಗದ ಜೊತೆಜೊತೆಗೆ ಯುಪಿಎಸ್​ಸಿ ಪರೀಕ್ಷೆ ಬರೆಯುತ್ತಿದ್ದ ಕೀರ್ತನಾ, ಸತತ 5 ಬಾರಿ ಪ್ರಯತ್ನ ಮಾಡಿ, 6ನೇ ಬಾರಿಗೆ ಸಕ್ಸಸ್​ ಕಂಡುಕೊಂಡಿದ್ದಾರೆ. ಕೀರ್ತನಾ ಐಎಎಸ್​ ಅಧಿಕಾರಿಯಾಗಬೇಕು ಅನ್ನೋದು ಅವರ ತಂದೆಯ ಕನಸಾಗಿತ್ತಂತೆ. ಆ ಕನಸು ಇಂದು ಈಡೇರಿದೆ.

ಒಟ್ನಲ್ಲಿ ಸ್ಯಾಂಡಲ್​​ವುಡ್​ನಲ್ಲಿ ಬಣ್ಣ ಹಚ್ಚಿ, ಬಾಲನಟಿಯಾಗಿ ಜನಮನ ಗೆದ್ದಿದ್ದ ಕೀರ್ತನಾ,ಇದೀಗ ಮತ್ತೊಮ್ಮೆ ಉತ್ತಮ ಆಡಳಿತ ಅಧಿಕಾರಿಯಾಗಿ ಕರ್ನಾಟಕದ ಜನಮನ ಗೆಲ್ಲಲ್ಲು ಸಜ್ಜಾಗಿದ್ದಾರೆ.

Next Story

RELATED STORIES