Top

ಈ ವರ್ಷ ಕನ್ನಡ ಬಿಗ್​ಬಾಸ್​ ಸೀಸನ್​ 8 ನಡೆಯುತ್ತಾ..?

ಈ ವರ್ಷ ಕನ್ನಡ ಬಿಗ್​ಬಾಸ್​ ಸೀಸನ್​ 8 ನಡೆಯುತ್ತಾ..?
X

ಕೊರೊನಾ ಹಾವಳಿಯ ಹೆಚ್ಚಾಗಿರುವ ಈ ಸಮಯದಲ್ಲಿ ಕಿರುತೆರೆ ಧಾರಾವಾಹಿ ಮತ್ತು ಕಾರ್ಯಕ್ರಮಗಳ ಶೂಟಿಂಗ್​ ಕಷ್ಟವಾಗ್ತಿದೆ. ಇನ್ನು ಸಿನಿಮಾ ಶೂಟಿಂಗ್​ ತಲೆನೋವಂತೂ ಬೇಡವೇ ಬೇಡ. ಹಾಗಾದ್ರೆ, ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ ಬಾಸ್​ ಕಥೆಯೇನು(?) ಈ ವರ್ಷ ಕನ್ನಡ ಬಿಗ್​ ಬಾಸ್​​ ಕಾರ್ಯಕ್ರಮ ಬರುತ್ತಾ(?) ಇಲ್ವಾ(?)

ಡೆಡ್ಲಿ ಕೊರೊನಾ ವೈರಸ್​​​ ಆರ್ಭಟದಿಂದ ಸಿನಿಮಾ, ಕಿರುತೆರೆ ಶೂಟಿಂಗ್​ಗೆ ಭಾರೀ ಸಮಸ್ಯೆ ಎದುರಾಗಿದೆ. ಮೈಯೆಲ್ಲಾ ಕಣ್ಣಾಗಿಸಿಕೊಂಡು ಚಿತ್ರೀಕರಣ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಸಾಕಷ್ಟು ಮುನ್ನಜಾಗ್ರತಾ ಕ್ರಮಗಳನ್ನ ಕೈಗೊಂಡು ಶೂಟಿಂಗ್​ ನಡೆಸಲಾಗ್ತಿದೆ. ದೊಡ್ಡ ದೊಡ್ಡ ಸಿನಿಮಾಗಳ ಶೂಟಿಂಗ್​ ನಡೆಸಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಇಂತಾ ಹೊತ್ತಲ್ಲಿ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ ಬಾಸ್ ಕಥೆಯೇನು(?) ಅನ್ನುವ ಪ್ರಶ್ನೆ ಮೂಡುತ್ತೆ.

ಹಿಂದಿ ಬಿಟ್ರೆ ಕನ್ನಡದಲ್ಲೇ ಬಿಗ್​ಬಾಸ್​ ಶೋ ಸೂಪರ್​ ಹಿಟ್​ ಆಗಿರೋದು. ಈಗಾಲೇ 7 ಸೀಸನ್​​ ಯಶಸ್ವಿಯಾಗಿ ಮುಕ್ತಾಯವಾಗಿದೆ. ವೀಕ್ಷಕರನ್ನ ಕಾರ್ಯಕ್ರಮ ರಂಜಿಸುತ್ತಲೇ ಬರ್ತಿದೆ. ಆದರೆ, ಕೊರೊನಾ ಸೋಂಕು ಹರಡುವ ಭೀತಿ ಹೆಚ್ಚಾಗಿರುವ ಸಮಯದಲ್ಲಿ ನೂರಾರು ಜನ ಕೆಲಸ ಮಾಡುವ ಕಾರ್ಯಕ್ರಮವನ್ನ ಆಯೋಜಿಸಲು ಸಾಧ್ಯಾನಾ ಅನ್ನುವ ಅನುಮಾನ ಮೂಡುತ್ತೆ. ಅದೇ ಕಾರಣಕ್ಕೆ ಈ ವರ್ಷ ಕನ್ನಡ ಬಿಗ್​ಬಾಸ್​ ಸೀಸನ್​ 8 ನಡೆಯುತ್ತಾ ಇಲ್ವಾ. ಅನ್ನೋ ಗೊಂದಲ ಮೂಡಿದೆ.

ತೆಲುಗಿನಲ್ಲಿ ಬಿಗ್​ಬಾಸ್​ ಸೀಸನ್​-4 ಶುರುವಾಗ್ತಿದೆ. ನಾಗಾರ್ಜುನ ಈ ಬಾರಿ ಕಾರ್ಯಕ್ರಮದ ನಿರೂಪಣೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಪ್ರೋಮೋ ಶೂಟಿಂಗ್​ನಲ್ಲಿ ನಾಗ್​ ಭಾಗವಹಿಸಿದ್ದು, ಫೋಟೋಗಳನ್ನ ಶೇರ್​ ಮಾಡಿದ್ದಾರೆ.

ತೆಲುಗಿನಲ್ಲಿ ಬಿಗ್​ಬಾಸ್​ ಶೋ ಪ್ರಾರಂಭವಾಗ್ತಿದೆ. ಕನ್ನಡದಲ್ಲಿ ಆಗುತ್ತಾ(?)ಇಲ್ವಾ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕೊರೊನಾ ಹಾವಳಿ ನಡುವೆ ಶೋ ಪ್ರಾರಂಭಿಸೋದು ಕಷ್ಟ. ಆದರೆ, ಈ ವರ್ಷ ಶೋ ಬಂದೇ ಬರುತ್ತೆ ಅಂತಿದೆ ವಾಹಿನಿ ಮೂಲಗಳು. ಪ್ರತಿ ಬಾರಿ ಅಕ್ಟೋಬರ್​ನಲ್ಲಿ ಶೋ ಶುರುವಾಗುತ್ತಿತ್ತು. ಈ ಬಾರಿ ಡಿಸೆಂಬರ್​ನಲ್ಲಿ ಆರಂಭವಾಗಬಹುದು. ಕಾದು ನೋಡೋಣ ಎಂದು ಹೇಳಿದ್ದಾರೆ. ಕಿಚ್ಚ ಸುದೀಪ್​ ಅವರು ಕಾರ್ಯಕ್ರಮ ಆಯೋಜಕರ ಜೊತೆ ಸಂಪರ್ಕದಲ್ಲಿದ್ದು, ಕಾರ್ಯಕ್ರಮ ನಿರೂಪಣೆಗೆ ಉತ್ಸುಕರಾಗಿದ್ದಾರೆ.

Next Story

RELATED STORIES