Top

'ನಾಳೆ ನಾನೂ ಸಹ ಟಿವಿ ಮುಂದೆ ಕುಳಿತು ಜಪ ಮಾಡುತ್ತೇನೆ' - ಡಿ.ಕೆ ಶಿವಕುಮಾರ್​

ನಾಳೆ ನಾನೂ ಸಹ ಟಿವಿ ಮುಂದೆ ಕುಳಿತು ಜಪ ಮಾಡುತ್ತೇನೆ - ಡಿ.ಕೆ ಶಿವಕುಮಾರ್​
X

ಗುಲ್ಬರ್ಗಾ/ಕಲಬುರಗಿ: ರಾಮಜನ್ಮ ಭೂಮಿ ಅಯೋಧ್ಯೆ ಯಾರ ಆಸ್ತಿಯೂ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.

ಕಲಬುರಗಿಯ ಗಾಣಗಾಪುರದಲ್ಲಿರುವ ಶ್ರೀಗುರು ದತ್ತಾತ್ರೇಯ ಸನ್ನಿಧಿಯಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಮಾಡಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಯಾವುದೇ ಜಾತಿ, ಧರ್ಮ ಪಕ್ಷದ್ದೂ ಸಹ ಅಲ್ಲ. ದೇಶದ ಎಲ್ಲರಿಗೂ ಅಯೋಧ್ಯೆ ಕ್ರೆಡಿಟ್ ಹೋಗಬೇಕು ಎಂದರು.

ಇನ್ನು ರಾಮನಾಮ ಮೊದಲು ಜಪ ಮಾಡಿದ್ದೇ ನಾವು. ಗಾಂಧೀಜಿಯವರು ಕೊನೆ ಘಳಿಗೆಯಲ್ಲಿ ಹೇಳಿದ್ದು ಹೇರಾಮ್. ನಾಳೆ ನಾನೂ ಸಹ ಟಿವಿ ಮುಂದೆ ಕುಳಿತು ಜಪ ಮಾಡುತ್ತೇನೆ ಎಂದು ಕಲಬುರಗಿಯಲ್ಲಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಇಂದು ನಮ್ಮ ಶಾಸಕಾಂಗ ಪಕ್ಷದ ನಾಯಕರಿಗೆ ಕೋವಿಡ್​ ಆಗಿದೆ ಅಂತ ಹೇಳಿ ನನಗೆ ವಾರ್ತೆ ಬಂತು. ದೇವರ ಸನ್ನಿಧಿಯಲ್ಲಿ ನಾವು ಸೇರಿದ್ದೇವೆ. ಆ ಭಗವಂತ ದತ್ತಾತ್ರೇಯ, ಚಾಮುಂಡೇಶ್ವರಿ, ನಾಡಿನ ಎಲ್ಲಾ ಜನರ ಆಶೀರ್ವಾದದಿಂದ ಬೇಗ ಗುಣಮುಖರಾಗಿ ಬರಲಿ ಎಂದು ಆ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇವೆ ಎಂದು ತಿಳಿಸಿದರು.

ಅದೇ ರೀತಿ ರಾಜ್ಯದ ಮುಖ್ಯಮಂತ್ರಿಗಳು ಬಿ.ಎಸ್​ ಯಡಿಯೂರಪ್ಪ ಅವರು ಕೂಡ ಬೇಗ ಆರೋಗ್ಯವಂತರಾಗಿ, ಈ ರಾಜ್ಯಕ್ಕೆ ಉತ್ತಮವಾದ ಆಡಳಿತವನ್ನು, ಜನರ ಸಂಕಷ್ಟವನ್ನ ದೂರ ಮಾಡುವಂತ ಶಕ್ತಿ ಇಬ್ಬರು ನಾಯಕರಿಗೂ ಸದಾ ಸಿಗಲಿ ಎಂದು ನಾನು ಆ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇವೆ ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದರು.

Next Story

RELATED STORIES