Top

ವೃದ್ಧ ದಂಪತಿಯ ಬಾಳಿಗೆ ಬೆಳಕಾದ ಕಿಚ್ಚ ಸು'ದೀಪ'

ವೃದ್ಧ ದಂಪತಿಯ ಬಾಳಿಗೆ ಬೆಳಕಾದ ಕಿಚ್ಚ ಸುದೀಪ
X

ಸಂಕಷ್ಟದಲ್ಲಿರೋರಿಗೆ ಸ್ಯಾಂಡಲ್​​ವುಡ್​ ಬಾದ್ಶಾ ಕಿಚ್ಚ ಸುದೀಪ್ ನೆರವಿನ ಹಸ್ತ ಮುಂದುವರೆದಿದೆ. ಕಳೆದ ಕೆಲ ದಿನಗಳಿಂದ ಕಿಚ್ಚ ಸುದೀಪ್ ಚಾರಿಟೇಬಲ್​ ಟ್ರಸ್ಟ್ ವತಿಯಿಂದ ಸಾಲು ಸಾಲು ಸಾಮಾಜಿಕ ಕಾರ್ಯಗಳು ನಡೀತಾನೇ ಇದೆ. ಬಲಗೈನಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾರ್ಬಾದು ಅನ್ನೋದು ಕಿಚ್ಚನ ಗುಣವಾದ್ರೂ,ಅವರು ಮಾಡ್ತಿರೋ ಕೆಲಸಗಳು ತಾನಾಗೇ ಬೆಳಕಿಗೆ ಬರ್ತಿವೆ ಅದಕ್ಕೆ ಮತ್ತೊಂದು ಉದಾಹರಣೆ ಇಲ್ಲಿದೆ.

ಬಾದ್ಶಾ ಕಿಚ್ಚ ಸುದೀಪ್​ ತೆರೆಮೇಲೆ ಮಾತ್ರ ಹೀರೋ ಅಲ್ಲದೇ, ರಿಯಲ್​ ಲೈಫ್​ನಲ್ಲೂ ಹೀರೋ ಅನ್ನೋದನ್ನ ಈಗಾಗ್ಲೇ ಸಾಬೀತು ಮಾಡಿದ್ದಾರೆ. ಅದರಲ್ಲೂ ಇತ್ತೀಚೆಗಂತೂ ಕಿಚ್ಚ ಚಾರಿಟೇಬಲ್ ಟ್ರಸ್ಟ್​ ವತಿಯಿಂದ ಸಾಕಷ್ಟು ಮಂದಿಗೆ ನೆರವಾಗಿದ್ದಾರೆ ಸುದೀಪ್.

ಈ ಹಿಂದೆ ಚಿತ್ರದುರ್ಗದಲ್ಲಿ ಶಾಲೆಗಳನ್ನ ದತ್ತು ತೆಗೆದುಕೊಂಡಿದ್ದು, ಬಡ ವಿದ್ಯಾರ್ಥೀಯ ವಿದ್ಯಾಭ್ಯಾಸಕ್ಕೆ ನೆರವಾಗಿದ್ದು, ಹುಚ್ಚ ವೆಂಕಟ್​ರ ನೆರವಿಗೆ ಮುಂದೆ ಬಂದಿದ್ದು,ಇದೆಲ್ಲಾ ಗೊತ್ತೇಯಿದೆ. ಇದೀಗ ತುಮಕೂರಿನ ವೃಧ್ಧ ದಂಪತಿಗೆ ಸಹಾಯ ಹಸ್ತ ಚಾಚಿದ್ದಾರೆ ಕಿಚ್ಚ ಸುದೀಪ.

ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕಿನ ಸಿದ್ಧಾಪುರ ಗ್ರಾಮದಲ್ಲಿ ವೃದ್ಧ ದಂಪತಿ, ಮೂರು ವರ್ಷಗಳ ಹಿಂದೆ ಮನೆ ಕಟ್ಟಿಸಿಕೊಂಡಿದ್ದರು. ಆದರೆ, ಅದಕ್ಕೆ ವಿದ್ಯುತ್ ಸಂಪರ್ಕ ಮಾಡಿಕೊಳ್ಳಲಾಗದೆ ಕತ್ತಲಲ್ಲಿಯೇ ಜೀವನ ಸಾಗಿಸ್ತಾ ಇದ್ರು. ವೃದ್ದ ದಂಪತಿಗಳಿಬ್ರೂ ವಿಶೇಷ ಚೇತನ ಮೊಮ್ಮೊಗನೊಂದಿಗೆ ವಾಸ ಮಾಡ್ತಾ ಇದ್ರು.

ಈ ವಿಷಯ ತಿಳಿದ ತಕ್ಷಣವೇ ಕಿಚ್ಚ ಸುದೀಪ್ ಚಾರಿಟೇಬಲ್, ಟ್ರಸ್ಟ್ ವೃದ್ದ ದಂಪತಿಗಳಾದ ರಾಧಮ್ಮ ಹಾಗೂ ನಾಗರಾಜು ಅವ್ರ ಮನೆಗೆ ಧಾವಿಸಿ ಸಹಾಯ ಮಾಡಿದ್ದಾರೆ. ವೃದ್ಧ ದಂಪತಿಯ ಮನೆಗೆ ,ತಾವೇ ತಮ್ಮ ಖರ್ಚಿನಲ್ಲಿ ವಿದ್ಯುತ್ ಸಂಪರ್ಕ ಹಾಕಿಸಿಕೊಟ್ಟಿದ್ದಾರೆ. ವಿದ್ಯುತ್ ಸಂಪರ್ಕಕ್ಕೆ ಬೇಕಾದ ಅನುಮತಿಗಳನ್ನೂ ಸಹ ಟ್ರಸ್ಟ್ ವತಿಯಿಂದ ಪಡೆಯಲಾಗಿದೆ.

ಒಟ್ನಲ್ಲಿ ಕಿಚ್ಚ ಸುದೀಪ್ ಚಾರಿಟೇಬಲ್​ ಟ್ರಸ್ಟ್​ ಇತ್ತೀಚಿನ ದಿನಗಳಿಂದ ಮಾತ್ರವಲ್ಲದೇ ಬಹುಕಾಲದಿಂದಲೂ ತಮ್ಮ ಕೈಲಾದ ಸಹಾಯ ಮಾಡ್ತಾ ಬರ್ತಿದ್ದಾರೆ. ಆದರೆ, ಇತ್ತೀಚೆಗೆ ಈ ವಿಚಾರಗಳು ಬೆಳಕಿಗೆ ಬರ್ತಿವೆ.

Next Story

RELATED STORIES