Top

'ಸಿಎಂ ಅನಾರೋಗ್ಯಕ್ಕೆ ಒಳಗಾದಾಗ ಆರೋಪ ಮಾಡೋದು ಸದಾಚಾರವಲ್ಲ'

ಸಿಎಂ ಅನಾರೋಗ್ಯಕ್ಕೆ ಒಳಗಾದಾಗ ಆರೋಪ ಮಾಡೋದು ಸದಾಚಾರವಲ್ಲ
X

ಬೆಳಗಾವಿ: ರಾಜ್ಯದ ಸಿಎಂ ಅನಾರೋಗ್ಯಕ್ಕೆ ಒಳಗಾದಾಗ ಆರೋಪ ಮಾಡೋದು ಸದಾಚಾರ ಅಲ್ಲ, ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಕೊರೊನಾ ಸೋಂಕು ದೃಢಪಟ್ಟಿದೆ, ಈ ಇಬ್ಬರು ಶೀಘ್ರದಲ್ಲೇ ಆರೋಗ್ಯವಾಗಲಿ ಎಂದು ಹಾರೈಕೆ ಎಂದು ಮಾಜಿ ಸ್ಪೀಕರ್​ ಕೆ.ಆರ್​. ರಮೇಶ್ ಕುಮಾರ್ ಅವರು ಮಂಗಳವಾರ ಹೇಳಿದರು.

ಬೆಳಗಾವಿ ನಗರದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೊರೊನಾ ವೈರಸ್ ಆರಂಭದಲ್ಲಿ ವಿಧಾನ ಮಂಡಲ ಅಧಿವೇಶನ ಮುಂದುಡಿಕೆ ಮಾಡಲಾಗಿತ್ತು. ವಿಪತ್ತು ಬಂದ ಸಂದರ್ಭದಲ್ಲಿ ನಾವು ಸರ್ಕಾರಕ್ಕೆ ಸಹಕಾರ ನೀಡಿದ್ದೇವೆ. ನಾವು ನೀಡಿದ ಸಹಕಾರ ಸರ್ಕಾರ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ, ಸರ್ಕಾರ ಹಣ ಖರ್ಚು ಮಾಡುವಲ್ಲಿ ಯಡವಿದೆ ಎಂದರು.

ಇನ್ನು ಸರ್ಕಾರಕ್ಕೆ ಒಮ್ಮೆ ವಿರೋಧ ಪಕ್ಷದ ನಾಯಕರು ಎಚ್ಚರಿಕೆ ನೀಡಿತ್ತು. ಹಣದ ದುರುಪಯೋಗ ಆಗಿದೇ ಎಂದು ವಿಪಕ್ಷ ಸಿದ್ದರಾಮಯ್ಯ ಆರೋಪ ಮಾಡಿದರು. ಇದಕ್ಕೆ ರಾಜ್ಯದ ಇಬ್ಬರು ಸಚಿವರು ಉತ್ತರ ನೀಡಿದರು. ಈ ಬಗ್ಗೆ 20 ಪತ್ರಗಳನ್ನು ವಿಪಕ್ಷ ನಾಯಕರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆರೋಪಗಳಿಗೆ ದಾಖಲೆ ಒದಗಿಸಿ ನ್ಯಾಯಾಂಗ ತನಿಖೆಗೆ ಆಗ್ರಹ ಮಾಡಲಾಗಿದೆ. ಇದಕ್ಕೆ ಸಂಪುಟದ 5 ಜನ ಸಚಿವರು ಪ್ರತ್ಯಾರೋಪ ಮಾಡಿದರು ಎಂದು ಅವರು ತಿಳಿಸಿದರು.

ಪ್ರಜಾಪ್ರಭುತ್ವದಲ್ಲಿ ವಿಪಕ್ಷ ವಾಚ್ ಡಾಗ್ ಆಗಿ ಕೆಲಸ ಮಾಡುತ್ತಿದೆ. ಈ ಬಗ್ಗೆ ಸರ್ಕಾರ ಸೂಕ್ತ ತನಿಖೆ ಆಗಬೇಕು. ಪಿಎಂ ಕೇರ್​ನಿಂದ ಭಾರತ ಸರ್ಕಾರ 50 ಸಾವಿರ ವೆಂಟಿಲೇಟರ್ ಖರೀದಿಸಿದೆ. ಇದಕ್ಕೆ ಭಾರತ ಸರ್ಕಾರ 4 ಲಕ್ಷ ರೂಪಾಯಿ ವೆಚ್ಚ ಮಾಡಿದೆ. ಆದರೆ, ರಾಜ್ಯ ಸರ್ಕಾರ 5 ರಿಂದ 18 ಲಕ್ಷದ ವರೆಗೂ ಖರ್ಚು ಮಾಡಿದ್ದಾರೆ ಎಂದು ಆರೋಪವಿದೆ ಎಂದು ನುಡಿದರು.

85 ಲಕ್ಷ ಜನರಿಗೆ ಆಹಾರ ಪದಾರ್ಥಗಳನ್ನು ಕೊಟ್ಟಿರುವುದಾಗಿ ಭಾರತ ಸರ್ಕಾರ ಹೇಳಿದೆ. ಕಳಪೆ ಗುಣಮಟ್ಟದ ಪಿಪಿ ಕಿಟ್ ಖರೀದಿ ಮಾಡಲಾಗಿದೆ. 10 ಲಕ್ಷ ಮಾಸ್ಕ ಖರೀದಿ ಮಾಡಲಾಗಿದೆ. 50 ರೂಪಾಯಿಗೆ ಸಿಗುವ ಮಾಸ್ಟ್​ಅನ್ನು 100 ರಿಂದ 150 ರುಪಾಯಿ ಕೊಟ್ಟು ಖರೀದಿಸಲಾಗಿದೆ. ಥರ್ಮಲ್ ಸ್ಕ್ಯಾನರ್ ಒಂದರ ಬೆಲೆ 2 ರಿಂದ 3 ಸಾವಿರ ರೂಪಾಯಿ ಇದೆ. 5,900 ರೂಪಾಯಿ ನೀಡಿ ಖರೀದಿ ಮಾಡ್ತಾರೆ. ಸಮಾಜ ಕಲ್ಯಾಣ ಇಲಾಖೆ ಹೆಚ್ಚಿನ ದರದಲ್ಲಿ ಸಾಮಗ್ರಿ ಖರೀದಿಸಲಾಗಿದೆ. ಆರೋಪಕ್ಕೆ ಪ್ರತ್ಯಾರೋಪ ಉತ್ತರವಲ್ಲ, ನಮ್ಮ ನೇರವಾದ ಆರೋಪಗಳಿಗೆ ಸ್ಪಷ್ಟವಾದ ಮಾಹಿತಿ ನೀಡಬೇಕು. ಕೋವಿಡ್ ಸಾಮಾಗ್ರಿ ಖರೀದಿ ಅಕ್ರಮ ಬಗ್ಗೆ ನ್ಯಾಯಾಂಗ ತನಿಖೆ ಮಾಡಲು ಆಗ್ರಹ ಮಾಡುತ್ತೇವೆ ಎಂದು ಕೆ.ಆರ್​. ರಮೇಶ್ ಕುಮಾರ್ ಅವರು ಹೇಳಿದ್ದಾರೆ.

Next Story

RELATED STORIES