ನೂತನ ಪೊಲೀಸ್​ ಕಮೀಷನರ್ ಕಮಲ್​​ ಪಂತ್​ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಪ್ರತಿಕ್ರಿಯೆ​

ಬೆಂಗಳೂರು: ಲಾಕ್​ಡೌನ್ ವೇಳೆ ಪೊಲೀಸರು ಸಾವನ್ನಪ್ಪಿರುತ್ತಾರೆ ಅವರಿಗೆ ಗೌರವ ಸಲ್ಲಿಸುತ್ತೇನೆ ಎಂದು ಬೆಂಗಳೂರು ನಗರ ನೂತನ ಕಮೀಷನರ್​ ಕಮಲ್​ ಪಂತ್​​​ ಅವರು ಹೇಳಿದರು.

ನಗರದಲ್ಲಿಂದು ಅಧಿಕೃತವಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ನಗರದಲ್ಲಿ ಸೇವೆ ಮಾಡಲು ಅವಕಾಶ ಸಿಕ್ಕಿದೆ. ಜನರ ಸೇವೆಗೆ ಸಿದ್ಧ. ನಗರದ ಕಚೇರಿಯಲ್ಲಿ ಜನ ಸೇವೆಗೆ ಲಭ್ಯ ಇರುತ್ತೇನೆ. ನಗರದ ಘನತೆಯನ್ನು ಹೆಚ್ಚಿಸಲು ಶ್ರಮಿಸುತ್ತೇವೆ ಎಂದು ಅವರು ತಿಳಿಸಿದರು.

ಇನ್ನು ಕೊರೊನಾ ನಿಯಂತ್ರಣಕ್ಕೆ ಮೊದಲ ಆದ್ಯತೆ ಜೊತೆ ಜೊತೆಗೆ ಕಾನೂನು ಸುವ್ಯವಸ್ಥೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಇನ್ನು ಹಿಂದೆ ಕಮೀಷನರ್ ಹುದ್ದೆ ನಿರ್ವಹಿಸಿದ ಹಿರಿಯ ಅಧಿಕಾರಿಗಳಂತೆ ನಾನು ಈ ಹುದ್ದೆಯನ್ನು ದಕ್ಷತೆಯಿಂದ ನಿರ್ವಹಿಸುತ್ತೇನೆ. ಉತ್ತಮ ಪೊಲೀಸಿಂಗ್ ನೀಡಲು ಬೆಂಗಳೂರು ನಾಗರಿಕರ ಸಹಕಾರ ಕೇಳುತ್ತೇನೆ. ತಿಂಗಳಿಗೊಮ್ಮೆ ನಾನು ಡಿಸಿಪಿಗಳ ಕಚೇರಿಗೆ ಭೇಟಿ ನೀಡುತ್ತೇನೆ. ದಿನ ಪೂರ್ತಿ ಆಯಾ ವಿಭಾಗದಲ್ಲಿ ನಡೆದ ತಿಂಗಳ ಕ್ರೈಂ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದು ಅವರು ಹೇಳಿದರು.

ಸದ್ಯ ಇಂದು ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಎಲ್ಲರ ಜತೆ ಮಾತನಾಡಿ ಮುಂದಿನ ದಿನಗಳಲ್ಲಿ ಉತ್ತಮ ನಿರ್ಣಯ ತೆಗೆದುಕೊಳ್ಳುತ್ತೇನೆ. ಈಗಾಗಲೇ ಹಿಂದೆ ಇದ್ದ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದಾರೆ, ಅದನ್ನು ನಾನು ಮುಂದುವರೆಸುತ್ತೇನೆ ಎಂದು ನೂತನ ಕಮೀಷನರ್ ಕಮಲ್ ಪಂತ್​ ಅವರು ವಿಶ್ವಾಸದ ಮಾತುಗಳನ್ನಾಡಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *