Top

ಸಖತ್​ ಸೌಂಡ್​ ಮಾಡ್ತಿದೆ ‘ರತ್ನನ್​​ಪ್ರಪಂಚ’ ಪೋಸ್ಟರ್

ಸಖತ್​ ಸೌಂಡ್​ ಮಾಡ್ತಿದೆ ‘ರತ್ನನ್​​ಪ್ರಪಂಚ’ ಪೋಸ್ಟರ್
X

ಸೋಷಿಯಲ್​ ಮೀಡಿಯಾದಲ್ಲಿ ಕಳೆದೆರಡು ದಿನಗಳಿಂದ ಒಂದು ಸಿನಿಮಾ ಪೋಸ್ಟರ್​ ಭಾರೀ ವೈರಲ್ಲಾಗಿದೆ.. ಸ್ಯಾಂಡಲ್​ವುಡ್​ ಸೂಪರ್​ ಸ್ಟಾರ್ಸ್​ ಕೂಡ ಈ ಪೋಸ್ಟರ್​ ನೋಡಿ ಮೆಚ್ಚಿಕೊಂಡಿದ್ದಾರೆ.

ಕೆ.ಆರ್​.ಜಿ ಸ್ಟುಡಿಯೋಸ್​ ಬ್ಯಾನರ್​ನಲ್ಲಿ ಕಾರ್ತಿಕ್​ ಗೌಡ ಮತ್ತು ಯೋಗಿ ಜಿ ರಾಜ್​ ನಿರ್ಮಾಣದ ಚೊಚ್ಚಲ ಸಿನಿಮಾ ‘ರತ್ನನ್​​ಪ್ರಪಂಚ’. ವರಮಹಾಲಕ್ಷ್ಮೀ ಹಬ್ಬದ ಸಂಭ್ರಮದಲ್ಲಿ ಚಿತ್ರದ ಫಸ್ಟ್​ ಲುಕ್​ ಪೋಸ್ಟರ್ ರಿಲೀಸ್​ ಆಗಿದೆ. ಕೈಯಲ್ಲಿ ಮಲ್ಲಿಗೆ ಹೂವು, ಪೆಪ್ಪರ್​ಮೆಂಟ್​ ಡಬ್ಬಿ ಹಿಡ್ದು ಡಾಲಿ ಧನಂಜಯ ರತ್ನನ್​ ಪ್ರಪಂಚಕ್ಕೆ ಎಲ್ಲರನ್ನೂ ಕರ್ಕೊಂಡ್​ ಹೋಗ್ತಿದ್ದಾರೆ.

ದಯವಿಟ್ಟು ಗಮನಿಸಿ ಚಿತ್ರದ ಮೂಲಕ ಪರಿಚಿತರಾಗಿದ್ದ ರೋಹಿತ್ ಪದಕಿ ‘ರತ್ನನ್​​ಪ್ರಪಂಚ’ ಚಿತ್ರದ ಸಾರಥಿ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದಾರೆ. ಸದ್ಯಕ್ಕೆ ಪ್ರಿ-ಪ್ರೊಡಕ್ಷನ್ ಹಂತದಲ್ಲಿದೆ ರತ್ನನ್ ಪ್ರಪಂಚ. ಧನಂಜಯ್​​ ಜೊತೆಗೆ ಬೇರೆ ಯಾರೆಲ್ಲಾ ‘ರತ್ನನ್​​ಪ್ರಪಂಚ’ ಸಿನಿಮಾದಲ್ಲಿ ನಟಿಸ್ತಾರೆ ಅನ್ನೋದು ಇನ್ನಷ್ಟೆ ಗೊತ್ತಾಗಬೇಕಿದೆ. ಸುದೀಪ್​, ಗಣೇಶ್​, ಅಪ್ಪು ಸೇರಿದಂತೆ ಇಡೀ ಸ್ಯಾಂಡಲ್​ವುಡ್​ ಪೋಸ್ಟರ್​ ನೋಡಿ ಮೆಚ್ಚಿಕೊಂಡಿದೆ.

ಚಿತ್ರದ ಕಥಾನಾಯಕನ ಹೆಸರು ರತ್ನಾಕರ. ಹಾಗಾಗಿಯೇ ಚಿತ್ರಕ್ಕೆ 'ರತ್ನನ್ ಪ್ರಪಂಚ' ಅಂತ ಹೆಸರಿಡಲಾಗಿದೆ. ಧನಂಜಯ ಅಭಿನಯದ 'ಯುವರತ್ನ', 'ಸಲಗ','ಪೊಗರು' ಸಿನಿಮಾಗಳು ರಿಲೀಸ್‌ಗೆ ರೆಡಿ ಆಗ್ತಿವೆ.'ಡಾಲಿ', 'ಬಡವ ರಾಸ್ಕಲ್', ಡಾನ್ ಜಯರಾಜ್‌ ಬಯೋಪಿಕ್ ಸಿನಿಮಾಗಳ ಶೂಟಿಂಗ್​ ನಡೀತಿದೆ. ಇತ್ತೀಚೆಗೆ ರಚಿತಾ ರಾಮ್‌ ಜೊತೆ ಒಂದು ಸಿನಿಮಾ ಒಪ್ಪಿಕೊಂಡಿರೋ ಧನಮಝಯ ಶಿವಣ್ಣನ ಜೊತೆಗೂ ಹೊಸ ಸಿನಿಮಾದಲ್ಲಿ ನಟಿಸೋದು ಪಕ್ಕಾ ಆಗಿದೆ. ಇದೆಲ್ಲದರ ನಡುವೆ 'ರತ್ನನ್ ಪ್ರಪಂಚ' ಸಿನಿಮಾ ಅನೌನ್ಸ್​ ಆಗಿದೆ.

Next Story

RELATED STORIES