ನಮ್ಮನ್ನು ಹೆದರಿಸಬಹುದೆಂದು ಅವರು ನಿರೀಕ್ಷಿಸಿದ್ದರೆ ಅದು ಸರ್ಕಾರದ ಮೂರ್ಖತನ

ಬೆಂಗಳೂರು: ಕೊರೊನಾ ಉಪಕರಣಗಳ ಖರೀದಿಯಲ್ಲಿನ ಅಕ್ರಮಗಳನ್ನು ಬಯಲಿಗೆ ಎಳೆದಿದ್ದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ವಿಧಾನ ಪರಿಷತ್​ ಸದಸ್ಯರೊಬ್ಬರಿಂದ ವಕೀಲರ ಮೂಲಕ ನನಗೆ ಮತ್ತು ಡಿಕೆ ಶಿವಕುಮಾರ್ ಅವರಿಗೆ ನೋಟಿಸ್ ಕೊಡಿಸಿದ್ದಾರೆ, ಸಂತೋಷ. ಇದಕ್ಕೆ ಕಾನೂನಿನ ಮೂಲಕವೇ ಉತ್ತರ ಕೊಡ್ತೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಟ್ವಿಟ್​ ಮಾಡಿದ್ದಾರೆ.

ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಸಿಎಂ, ಸಚಿವರು ಇಲ್ಲವೇ ಮುಖ್ಯಕಾರ್ಯದರ್ಶಿಯವರಿಂದ ಲೀಗಲ್ ನೋಟಿಸ್ ಬರಬಹುದೆಂಬ ನಿರೀಕ್ಷೆ ಇತ್ತು. ಒಬ್ಬ ಎಂಎಲ್‌ಸಿಯಿಂದ ಕೊಡಿಸಿದ್ದಾರೆ. ಈ ರೀತಿ ನಮ್ಮನ್ನು ಹೆದರಿಸಬಹುದೆಂದು ಅವರು ನಿರೀಕ್ಷಿಸಿದ್ದರೆ ಅದು ಸರ್ಕಾರದ ಮೂರ್ಖತನ. ನಮ್ಮ ಹೋರಾಟವನ್ನು ನಾವು ಜನರ ಬಳಿ ಕೊಂಡೊಯ್ಯುತ್ತಿದ್ದೇವೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *