Top

ಹಬ್ಬದ ಸಂಭ್ರಮದಲ್ಲಿ ಬಂತು ‘ಕಾಲಚಕ್ರ’ ವಿಶೇಷ ಹಾಡು

ಹಬ್ಬದ ಸಂಭ್ರಮದಲ್ಲಿ ಬಂತು ‘ಕಾಲಚಕ್ರ’ ವಿಶೇಷ ಹಾಡು
X

ಕೊರೊನಾ ಮತ್ತು ಲಾಕ್​ಡೌನ್​ ಹಿನ್ನಲೆಯಲ್ಲಿ ಈ ಬಾರಿ ಸ್ಯಾಂಡಲ್​ವುಡ್​ನಲ್ಲಿ ವರಮಹಾಲಕ್ಷ್ಮೀ ಹಬ್ಬ ಮಂಕಾಗಿತ್ತು. ಇದ್ದಿದ್ದರಲ್ಲಿ ಕೆಲ ಸಿನಿಮಾಗಳ ಹೊಸ ಪೋಸ್ಟರ್ಸ್​​ ರಿಲೀಸ್​ ಆಗಿದ್ದೇ ಹೆಚ್ಚು. ಆದರೆ, ಹಬ್ಬದ ಸಂಭ್ರಮದಲ್ಲೇ ಕಾಲಚಕ್ರ ಚಿತ್ರದ ಸ್ಪೆಷಲ್​ ವೀಡಿಯೋ ಸಾಂಗ್​ ರಿಲೀಸ್​ ಆಗಿ ಸಖತ್ ಸದ್ದು ಮಾಡ್ತಿದೆ. ಸೆಲೆಬ್ರೆಟಿಗಳು ಹಾಡು ನೋಡಿ ಮೆಚ್ಚುಕೊಂಡಿದ್ದು, ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

ಇಂಡಿಯಾ ವರ್ಸಸ್​ ಇಂಗ್ಲೆಂಡ್​ ನಂತರ ವಸಿಷ್ಠ ಎನ್ ಸಿಂಹ ಹೀರೊ ಆಗಿ ನಟಿಸ್ತಿರೋ ಹೊಸ ಸಿನಿಮಾ ಕಾಲಚಕ್ರ. ರಶ್ಮಿ ಫಿಲಂಸ್ ಮೂಲಕ ರಶ್ಮಿ ಕೆ ನಿರ್ಮಿಸಿರುವ ‘ಕಾಲಚಕ್ರ’ ಚಿತ್ರದ ‘ತರಗೆಲೆ’ ಹಾಡು ವರಮಹಾಲಕ್ಷ್ಮೀ ಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾಗಿದೆ. ಸಂತೋಷ್ ನಾಯಕ್ ಸಾಹಿತ್ಯ ಬರೆದಿರುವ ಈ ಹಾಡನ್ನು ಕೈಲಾಷ್ ಕೇರ್ ಹಾಡಿದ್ದಾರೆ‌. ಅದ್ಧೂರಿ ಸೆಟ್​ನಲ್ಲಿ ಹಾಡನ್ನ ಶೂಟ್​ ಮಾಡಲಾಗಿದೆ.

ಗುರುಕಿರಣ್ ಸಂಗೀತ ಹಾಡಿಗೆ ಟ್ಯೂನ್​ ಹಾಕಿದ್ದಾರೆ. ಒಂದಷ್ಟು ಡ್ಯಾನ್ಸರ್​​ ವಿಭಿನ್ನ ಮೇಕಪ್​ನಲ್ಲಿ ವಿಭಿನ್ನ ಗೆಟಪ್​ನಲ್ಲಿ ವಸಿಷ್ಟ ಸಿಂಗ್​ ಹೆಜ್ಜೆಗೆ ಸಾಥ್​ ಕೊಟ್ಟಿದ್ದಾರೆ. ಛಾಯಾಗ್ರಾಹಕ ಎಲ್​. ಎಂ ಸೂರಿ ಅಂಡ್​ ಟೀಂ ಬಹಳ ಸೊಗಸಾಗಿ ಹಾಡನ್ನ ಸೆರೆ ಹಿಡಿದಿದ್ದಾರೆ. ಮುರಳಿ ಮಾಸ್ಟರ್​ ಕೊರಿಯೋಗ್ರಫಿಯಲ್ಲಿ ‘ತರಗೆಲೆ’ ಸಾಂಗ್​ ಶೂಟ್​ ಮಾಡಲಾಗಿದೆ.

ಸುಮಂತ್ ಕ್ರಾಂತಿ ರಚನೆ ಹಾಗೂ ನಿರ್ದೇಶನದ ಸೈಕಲಾಜಿಕಲ್ ಕಥಾಹಂದರದ ಚಿತ್ರವನ್ನ ಬೆಂಗಳೂರು, ಮಂಗಳೂರಿನಲ್ಲಿ ಶೂಟ್​ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ‘ಕಾಲಚಕ್ರ’ ಚಿತ್ರದ ಟೀಸರ್ ಬಿಡುಗಡೆ ಮಾಡಿ, ಮೆಚ್ಚುಗೆ ಸೂಚಿಸಿದ್ದರು. ಯೂಟ್ಯೂಬ್​ನಲ್ಲಿ ಕಾಲಚಕ್ರ ಟೀಸರ್​ಗೆ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ.

ಸೌಂದರ್ ರಾಜ್ ಸಂಕಲನ, ಡಿಫರೆಂಟ್ ಡ್ಯಾನಿ‌ ಸಾಹಸ ನಿರ್ದೇಶನ, ಮೋಹನ್ ಬಿ ಕೆರೆ ಅವರ ಕಲಾ‌ ನಿರ್ದೇಶನವಿರುವ ಈ ಚಿತ್ರಕ್ಕೆ ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ. ವಸಿಷ್ಠ ಎನ್ ಸಿಂಹ, ರಕ್ಷ, ದೀಪಕ್ ಶೆಟ್ಟಿ, ಸುಚೇಂದ್ರ ಪ್ರಸಾದ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಸದ್ಯ ರಿಲೀಸ್​ ಆಗಿರುವ ಹಾಡನ್ನ ಶಿವಣ್ಣ, ಎಸ್​.ಪಿ ರವಿ ಚೆನ್ನಣ್ಣನವರ್​ ಸೇರಿದಂತೆ ಸ್ಯಾಂಡಲ್​ವುಡ್ ಸೆಲೆಬ್ರಿಟಿಗಳು ಮೆಚ್ಚಿಕೊಂಡಿದ್ದಾರೆ.

ಜೀವನದ ಕಟು ಸತ್ಯವನ್ನ ಹೇಳುವ ಸಾಲುಗಳಿರುವ ತರಗೆಲೆ ಹಾಡು ಸಿನಿರಸಿಕರು ಮನಗೆದ್ದಿದೆ. ಈಗಾಗಲೇ ಕಾಲಚಕ್ರ ಚಿತ್ರದ ಶೂಟಿಂಗ್​ ಕಂಪ್ಲೀಟ್​ ಆಗಿದ್ದು, ಪೋಸ್ಟ್​ ಪ್ರೊಡಕ್ಷನ್​ ವರ್ಕ್​ ಜೋರಾಗಿದೆ. ಸಿನಿಮಾ ಪ್ರದರ್ಶನಕ್ಕೆ ಅನುಮತಿ ಸಿಕ್ಕಿದ ಕೂಡಲೇ ಕಾಲಚಕ್ರ ರಿಲೀಸ್​ಗೆ ಪ್ಲಾನ್​ ನಡೀತಿದೆ.

Next Story

RELATED STORIES