ಕೋವಿಡ್​-19 : ವಿಶ್ವದಾದ್ಯಂತ 1.74 ಕೋಟಿ ಮಂದಿದೆ ಸೋಂಕು, 6.76 ಲಕ್ಷ ಮಂದಿ ಸಾವು

ಅಮೆರಿಕಾ, ವಾಷಿಂಗ್ಟನ್: ಪ್ರಪಂಚದಲ್ಲಿ ಕೋವಿಡ್​ 19 ಸೋಂಕಿತರ ಸಂಖ್ಯೆ 1,74,54,129ಕ್ಕೆ ಬಂದು ನಿಂತಿದ್ದು, 675,764 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 1,09,26,716 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ವಿಶ್ವಮಾಪಕ(worldometer)‌ ಮಾಹಿತಿ ನೀಡಿದೆ.

ಅಮೆರಿಕಾ 46,34,582 ಸೋಂಕಿತರೊಂದಿಗೆ ಅಗ್ರ ಸ್ಥಾನದಲ್ಲಿದೆ. ಅಲ್ಲಿ 1,55,284 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. 22,83,877 ಮಂದಿ ಈವರೆಗೆ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಅತಿಹೆಚ್ಚು ಪ್ರಕರಣಗಳು ವರದಿಯಾದ ರಾಷ್ಟ್ರಗಳ ಸಾಲಿನಲ್ಲಿ ಬ್ರೆಜಿಲ್‌ ಇದ್ದು, ಈ ದೇಶದಲ್ಲಿ 26,13,789 ಪ್ರಕರಣಗಳು ಪತ್ತೆಯಾಗಿವೆ. 18,24,095 ಸೋಂಕಿತರು ಗುಣಮುಖರಾಗಿದ್ದು, 91,377 ಮಂದಿ ಮೃತಪಟ್ಟಿದ್ದಾರೆ.

ಕೊರೊನಾ ವೈರಸ್ ಸೋಂಕಿತರ ಪೈಕಿ ಮೂರನೇ ಸ್ಥಾನದಲ್ಲಿರುವ ಭಾರತದಲ್ಲಿ 16,39,350 ಪ್ರಕರಣಗಳು ದೃಢಪಟ್ಟಿದ್ದು, 10,59,093 ಮಂದಿ ಗುಣಮುಖರಾಗಿದ್ದಾರೆ. ಈವರೆಗೂ 35,786 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *