ಕೊರೊನಾಗಿಂತ ಭೀಕರ ಬಿಜೆಪಿಯ ಭ್ರಷ್ಟಾಚಾರ – ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ದಕ್ಷಿಣ ಕನ್ನಡ: ಕೋವಿಡ್ ವಿಚಾರದಲ್ಲಿ ಪ್ರತಿಪಕ್ಷವಾಗಿ ಸರ್ಕಾರದ ಜೊತೆ ಕೈ ಜೋಡಿಸಿದ್ದೇವೆ, ಕೊರೊನಾ ವಿಚಾರದಲ್ಲಿ ಸರ್ಕಾರದ ಭ್ರಷ್ಟಾಚಾರಕ್ಕೆ ನಾವು ಬೆಂಬಲ ನೀಡೋದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಹೇಳಿದರು.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 4 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ 2 ಸಾವಿರ ಕೋಟಿ ರೂಪಾಯಿ ಯನ್ನು ಸರ್ಕಾರ ಲೂಟಿ ಮಾಡಿದೆ. ಕೊರೊನಾದಲ್ಲಿ ಭ್ರಷ್ಟಾಚಾರ-ಬಿಜೆಪಿ ಸರ್ಕಾರದ ಸಂಸ್ಕಾರ ಎಂದು ಸರ್ಕಾರವನ್ನು ಟೀಕಿಸಿದರು.

ಪಬ್ಲಿಕ್ ಅಕೌಂಟ್ಸ್ ಕಮೀಟಿ ಮೀಟಿಂಗ್​ಗೆ ಅವಕಾಶ ಮಾಡಿಕೊಡಿ. ಸಾರ್ವಜನಿಕರ ದುಡ್ಡಿನ ಬಗ್ಗೆ ಪಾರದರ್ಶಕ ತನಿಖೆಯಾಗಲಿ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸವನ್ನು ನಿಲ್ಲಿಸಲಾಗಿದೆ. ಸರ್ಕಾರಕ್ಕೆ ಬೇಕಾದ ಕೆಲಸ ಮಾಡುತ್ತಿದ್ದಾರೆ. ಬೇಕಾದ ಬಿಲ್​ಗಳನ್ನು ಕೊಡುತ್ತಿದ್ದಾರೆ. 4 ಲಕ್ಷದ ವೆಂಟಿಲೇಟರ್ ಕಿಟ್ಅನ್ನು 18 ಲಕ್ಷ ಕೊಟ್ಟು ತೆಗೆದುಕೊಂಡಿದ್ದಾರೆ. 1,050 ರೂಪಾಯಿಗೆ ಥರ್ಮಲ್ ಸ್ಕ್ಯಾನ್​ಅನ್ನು ಖರೀದಿ ಮಾಡಿದ್ದೇನೆ. 100 ರೂಪಾಯಿಗೆ ಸ್ಯಾನಿಟೈಸರ್​ಅನ್ನು ಖರೀದಿ ಮಾಡಿದ್ದೇನೆ. ನೀವು ಸಾವಿರಾರು ರೂಪಾಯಿ ಖರ್ಚು ಮಾಡಿ ಖರೀದಿ ಮಾಡಿದ್ದೀರಿ. ನೀವು ನನ್ನ ಮೇಲೆ ಕೇಸ್ ಮಾಡಿ, ಮಾನನಷ್ಟ ಮೊಕದ್ದಮೆ ಹಾಕಿ. ನನ್ನನ್ನು ಬೇಕಾದರೆ ಅರೆಸ್ಟ್ ಮಾಡಿ. ಹಗರಣದ ಬಗ್ಗೆ ತನಿಖೆ ಮಾಡಲು ಅವಕಾಶ ಕೊಡಿ ಎಂದರು.

ಗಾಂಧಿ ಲೆಕ್ಕ ಬೇರೆ, ಕೃಷ್ಣ ಲೆಕ್ಕ ಬೇರೆ, ಸರ್ಕಾರದ ಲೆಕ್ಕ ಬೇರೆ, ಸರ್ಕಾರದ ಕಿಟ್​ಗಳಿಗೆ ಮೋದಿ ಚಿಹ್ನೆ, ಪಕ್ಷದ ಚಿಹ್ನೆ ಹಾಕಿದ್ದಾರೆ. ಕಿಟ್​ಗಳಿಗೆ ಪಕ್ಷದ ಚಿಹ್ನೆ ಹಾಕಿದವರನ್ನು ಬಂಧಿಸಲು ಆಗಿಲ್ಲ, ಕೇಸ್ ಹಾಕಿ ಬಂಧನ ಮಾಡೋಕೆ ಆಗಿಲ್ಲ, ಮತ್ತೆ ಯಾವ ರೀತಿ ನಮ್ಮ ಸಹಕಾರ ಬಯಸುತ್ತಿದ್ದೀರಿ ಎಂದು ಅವರು ಸಿಎಂ ಬಿಎಸ್​ವೈಗೆ ಪ್ರಶ್ನೆ ಮಾಡಿದರು.

ಆಟೋ/ಕ್ಯಾಬ್ ಚಾಲಕನಿಗೆ ಇವತ್ತಿನ ತನಕವೂ ಸಹಾಯಧನ ಸಿಕ್ಕಿಲ್ಲ, ಚಾಲಕರು ಸತ್ತ ಮೇಲೆ ಸಹಾಯಧನ ನೀಡುತ್ತೀರಾ(?) ವಲಸೆ ಕಾರ್ಮಿಕರಿಗೆ ಸರ್ಕಾರ ರಕ್ಷಣೆ ನೀಡಿಲ್ಲ, ಸರ್ಕಾರ ಕೊರೊನಾ ಹೆಣಗಳ ಮೇಲೆ ಹಣ ಮಾಡಲು ಹೊರಟಿದೆ. ಬಿಜೆಪಿ ಮಂತ್ರಿಗಳು ಕೊರೊನಾ ಆಸ್ಪತ್ರೆ ಗಳಿಗೆ ಭೇಟಿ ನೀಡಿಲ್ಲ, ಹೊರ ರಾಜ್ಯ/ಹೊರ ದೇಶಗಳಿಂದ ಬಂದವರಿಗೆ ಬೀಗ ಹಾಕಿದ್ರಿ, ನಾಡು ಕಟ್ಟಲು ಸಹಾಯ ಮಾಡಿದವರನ್ನು ನೀಚವಾಗಿ ನಡೆಸಿಕೊಂಡ್ರಿ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕೊರೊನಾಗಿಂತ ಭೀಕರ ಬಿಜೆಪಿಯ ಭ್ರಷ್ಟಾಚಾರ. ರಾಜ್ಯದ ಜನತೆಗೆ ದೊಡ್ಡ ಶಾಪ ಬಿಜೆಪಿ ಸರ್ಕಾರ. ಸರ್ಕಾರದ ತನಿಖೆ ಬಗ್ಗೆ ಕೋರ್ಟ್ ಮೂಲಕ ತನಿಖೆಯಾಗಬೇಕು. ನ್ಯಾಯಾಧೀಶರು ಈ ಪ್ರಕರಣವನ್ನು ತನಿಖೆ ಮಾಡಬೇಕು. ನನ್ನ ಮೇಲೆ ಇಡಿ, ಸಿಬಿಐ ಪ್ರಯೋಗ ಮಾಡಿದ್ರಿ, ನನ್ನನ್ನು ಗಲ್ಲು ಹಾಕಲು ಹೊರಟಿದ್ದೀರಿ ಎಂದು ಅವರು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Recommended For You

About the Author: user

Leave a Reply

Your email address will not be published. Required fields are marked *