ವಿಕ್ರಮ್​​ ರವಿಚಂದ್ರನ್​ ಅಭಿನಯದ ‘ತ್ರಿವಿಕ್ರಮ’ ಸಿನಿಮಾಗೆ ಒಲಿದು ಬಂದ ಮಹಾ’ಲಕ್ಷ್ಮಿ’

ವಿಕ್ರಂ ರವಿಚಂದ್ರನ್, ಕನ್ನಡ ಬೆಳ್ಳಿತೆರೆ ಮೇಲೆ ಮಿನುಗಬೇಕು, ರಾರಾಜಿಸಬೇಕು ಅಂತ ಕನಸು ಹೊತ್ತು ಸಜ್ಜಾಗಿರೋ ಜ್ಯೂನಿಯರ್ ಕನಸುಗಾರ, ರವಿಚಂದ್ರನ್ ಮಗ ಅನ್ನೋ ಹಣೆಪಟ್ಟಿ ಇಲ್ಲದೇ ಸಿನಿಮಾದಲ್ಲಿ ತನ್ನ ಟ್ಯಾಲೆಂಟ್ ತೋರಿಸಿ ಸ್ಟಾರ್ ನಟನಾಗಬೇಕು ಅನ್ನೋ ಮಹದಾಸೆಯನ್ನು ಇಟ್ಟುಕೊಂಡಿರೋ ಹುಡುಗ. ಅಪ್ಪ ರವಿಚಂದ್ರನ್ ಸ್ಟಾರ್ ಆಗಿದ್ರೂ ಕೂಡ, ಅಪ್ಪನ ಸ್ಟಾರ್ ವ್ಯಾಲ್ಯೂವನ್ನು ಬಳಸಿಕೊಳ್ಳದೇ, ಬೇರೆ ಸಿನಿಮಾಗಳಲ್ಲಿ ಒಬ್ಬ ಕಾರ್ಮಿಕನಂತೆ ದುಡಿದು ಸಿನಿಮಾ ಎಕ್ಸ್ ಪೀರಿಯನ್ಸ್ ಪಡೆದುಕೊಂಡ ಹುಡುಗ ಕ್ರೇಜಿ ಸ್ಟಾರ್ ಎರಡನೇ ಪುತ್ರ ವಿಕ್ರಂ ರವಿಚಂದ್ರನ್.

ಸದ್ಯ ವಿಕ್ಕಿ ಈಗ ‘ತ್ರಿವಿಕ್ರಮ’ ಸಿನಿಮಾ ಮಾಡುತ್ತಿದ್ದಾರೆ. ವಿಕ್ರಂ ಹೆಸರಿಗೆ, ನಟನಾ ಟ್ಯಾಲೆಂಟ್​ಗೆ, ಲುಕ್, ಮ್ಯಾನರಿಸಂ ಗೆ ತಕ್ಕಂಥ ಕಥೆಯನ್ನು ನಿರ್ದೇಶಕ ಸಹನಾ ಮೂರ್ಥಿ ಕೆತ್ತಿ ಸಿದ್ಧಪಡಿಸಿ ಶೂಟಿಂಗ್ ಕೂಡ ಮಾಡಿದ್ದಾರೆ. ಸಹನಾ ಮೂರ್ತಿ ರವಿಚಂದ್ರನ್ ಎರಡನೇ ಪುತ್ರನ ಮೊದಲ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ ಅಂದ ಮೇಲೆ ಆ ಸಿನಿಮಾದ ಮೇಲಿನ ನಿರೀಕ್ಷೆ ಒಂದು ಹಿಡಿ ಹೆಚ್ಚೇ ಇರುತ್ತೆ, ಅದನ್ನು ಸಹನಾ ಮೂರ್ತಿ ಫುಲ್ ಫಿಲ್ ಮಾಡಿದ್ದಾರೆ ಅನ್ನೋದು ಈಗಾಗಲೇ ಬಂದಿರೋ ತ್ರಿವಿಕ್ರಮ ಸಿನಿಮಾ ಫಸ್ಟ್ ಲುಕ್ ಟೀಸರ್ ಗಳೇ ಸಾರಿ ಸಾರಿ ಹೇಳುತ್ತೀವೆ. ಇದೀಗ ವರಮಹಾ ಲಕ್ಷ್ಮಿ ಹಬ್ಬದಂದು ತ್ರಿವಿಕ್ರಮನ ಜೋಳಿಗೆಗೆ ಲಕ್ಷ್ಮಿ ಬಂದು ಸೇರಿದ್ದಾಳೆ.

ಜ್ಯೂನಿಯರ್ ಕನಸುಗಾರ ವಿಕ್ರಂ ರವಿಚಂದ್ರನ್ ಚಿತ್ರರಂಗಕ್ಕೆ ಡೆಬ್ಯೂ ಆಗುತ್ತಿರೋ ಸಿನಿಮಾ ತ್ರಿವಿಕ್ರಮ. ಸಹನಾ ಮೂರ್ತಿ ಸಿಕ್ಕಾಪಟ್ಟೆ ಮುತ್ತುವರ್ಜಿ ವಹಿಸಿ ವಿಕ್ಕಿಗಾಗಿಯೇ ಈ ಸಿನಿಮಾ ಸಿದ್ಧಪಡಿಸಿದ್ದಾರೆ. ನಿರ್ಮಾಪಕ ಸೋಮಣ್ಣ ಅವರು ವೀಕ್ರಂ ಅವರನ್ನು ಸಕ್ಕತ್ತಾಗಿ ತೋರಿಸಬೇಕು. ಅದೆಷ್ಟೇ ಖರ್ಚಾದರು ಪರವಾಗಿಲ್ಲ ಅಂತ ‘ತ್ರಿವಿಕ್ರಮ’ನಿಗಾಗಿ ಕೋಟಿ ಕೋಟಿ ಬಂಡವಾಳ ಸುರಿದಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್, ತ್ರಿವಿಕ್ರಮನ ಎರಡು ಹಾಡುಗಳ ಚಿತ್ರೀಕರಣವನ್ನು ಭಾರತ ಚೀನಾ, ಪಾಕಿಸ್ತಾನ ಗಡಿಗಳಲ್ಲಿ ಚಿತ್ರೀಕರಸೋಕೆ ಪ್ಲಾನ್ ಮಾಡಿರೋದು. ನಿರ್ಮಾಪಕ ಸೋಮಣ್ಣರ ಈ ಎಫರ್ಟ್ ಗೆ ಈಗ ಚಿನ್ನದಂತ ಬೆಲೆ ಬಂದಿದೆ. ಯಾಕಂದ್ರೆ ತ್ರಿವಿಕ್ರಮ ಸಿನಿಮಾದ ಹಾಡುಗಳು ಮಾರಾಟವಾಗಿದ್ದು ವಿಕ್ರಂ ಮೊದಲ ಸಿನಿಮಾದಲ್ಲೇ ದಾಖಲೆ ಬರೆದಿದ್ದಾರೆ.

ಸದ್ಯ ಜ್ಯೂನಿಯರ್ ಕನಸುಗಾರ ವಿಕ್ಕಿಯ ತ್ರಿವಿಕ್ರಮನಿಗೆ ಭಾರೀ ಡಿಮ್ಯಾಂಡ್ ಬಂದಿದೆ. ಇದರ ಮೊದಲ ಹೆಜ್ಜೆಯಂತೆ ತ್ರಿವಿಕ್ರಮ ಸಿನಿಮಾದ ಆಡಿಯೋ ಹಕ್ಕು 50 ಲಕ್ಷಕ್ಕೆ ಮಾರಾಟವಾಗಿದ್ದು, A2 ಮ್ಯೂಸಿಕ್ ಆಡಿಯೋ ಸಂಸ್ಥೆ ತ್ರಿವಿಕ್ರಮನ ಹಾಡುಗಳನ್ನು ಕೇಳಿ ಖುಷಿಯಿಂದ ಡಿಮ್ಯಾಂಡ್ ಮಾಡಿ ಹಾಡುಗಳನ್ನು ಖರೀದಿಸಿದೆ.

ವಿಕ್ರಂ ರವಿಚಂದ್ರನ್ ಮೊದಲ ಸಿನಿಮಾದ ಹಾಡುಗಳು ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿರೋದು, ತ್ರಿವಿಕ್ರಮ ಸಿನಿಮಾದ ಕ್ರೆಡಿಬಲಿಟಿಯನ್ನು ತೋರಿಸುತ್ತೆ. ತ್ರಿವಿಕ್ರಮ ಸಿನಿಮಾದಲ್ಲಿ ಒಟ್ಟು 6 ಹಾಡುಗಳಿದ್ದು, ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್, ಹಾಗೂ ಯೋಗರಾಜ್ ಭಟ್ ಹಾಡುಗಳನ್ನು ಬರೆದಿದ್ದಾರೆ. ಅರ್ಜುನ್ ಜನ್ಯ ಭರ್ಜರಿ ಮ್ಯೂಸಿಕ್ ಟ್ಯೂನ್ ಕೊಟ್ಟಿದ್ದು, ವಿಜಯ್ ಪ್ರಕಾಶ್ ಮತ್ತು ಸಂಚಿತ್ ಹೆಗಡೆ ಹಾಡುಗಳಿಗೆ ಧ್ವನಿಯಾಗಿದ್ದಾರೆ. ತ್ರಿವಿಕ್ರಮ ಸಿನಿಮಾದ ಹಾಡುಗಳ ಸೌಂಡು ಮಾರುಕಟ್ಟೆಯಲ್ಲಿ ಜೋರಾಗಿದ್ದು, ಸಿನಿಮಾದ ಮೇಲಿರೋ ನಿರೀಕ್ಷೆಯನ್ನು ಚಿತ್ರತಂಡ ಉಳಿಸಿಕೊಳ್ಳುತ್ತೆ ಅನ್ನೋದಕ್ಕೆ ಇದೇ ಸಾಕ್ಷಿ.

Recommended For You

About the Author: user

Leave a Reply

Your email address will not be published. Required fields are marked *