ಕೋವಿಡ್​ 19: ದೇಶದಾದ್ಯಂತ ಕಳೆದ 24 ಗಂಟೆಯಲ್ಲಿ 55,079 ಕೇಸ್​​ ಪತ್ತೆ, 779 ಮಂದಿ ಸಾವು

ನವದೆಹಲಿ: ದೇಶದಲ್ಲಿ ಕೋವಿಡ್​ 19 ಸೋಂಕಿತ ಸಂಖ್ಯೆ  ದಿನ ದಿನೇ ಹೆಚ್ಚಾಗುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ 55,079 ಹೊಸ ಕೇಸ್​ಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ16,38,871ಕ್ಕೆ ಏರಿಕೆಯಾದ್ರೆ, 779 ಮಂದಿ ಒಂದೇ ದಿನ ಬಲಿಯಾಗಿದ್ದಾರೆ. ಸದ್ಯ ಇಲ್ಲಿಯವರೆಗೆ ಬಲಿಯಾದವರ ಸಂಖ್ಯೆ 33,425ಕ್ಕೆ ಬಂದು ನಿಂತಿದೆ.

16,38,871 ಮಂದಿ ಸೋಂಕಿತರ ಪೈಕಿ ಒಟ್ಟು ಗುಣಮುಖರಾದವರ ಸಂಖ್ಯೆ 10,57,806ಕ್ಕೆ ತಲುಪಿದೆ. ಪ್ರಸ್ತುತ ದೇಶದಲ್ಲಿನ್ನೂ 5,45,318 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಇನ್ನು ಕರ್ನಾಟಕದಲ್ಲಿ ನಿನ್ನೆ ಒಂದೇ ದಿನಕ್ಕೆ 6,128 ಕೋವಿಡ್​-19 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ನಿನ್ನೆ ಸಾವನ್ನಪ್ಪಿದ್ದವರು 83 ಮಂದಿ. ರಾಜ್ಯದಲ್ಲಿ ಒಟ್ಟು 69,699 ಸಕ್ರಿಯ ಪ್ರಕರಣಗಳಿದ್ದು, ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡವರು 3,793 ಮಂದಿ.

ಬೆಂಗಳೂರಿನಲ್ಲಿಯೇ 2,233 ಪ್ರಕರಣಗಳು ದೃಢಪಟ್ಟಿದ್ದರೆ, 26 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಒಟ್ಟು 36,522 ಸಕ್ರಿಯ ಪ್ರಕರಣಗಳಿವೆ. ನಿನ್ನೆ 1,912 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *