‘ನಾನು ಲೀಗಲ್ ನೋಟಿಸ್​ಗೆ ಕಾಯ್ತಿದ್ದೆ ಕೊಟ್ಟಿದ್ದಾರೆ ಸಂತೋಷ’ – ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಮಂಡ್ಯ: ಬಿಜೆಪಿ ಸರ್ಕಾರ ಕೋವಿಡ್-19 ತಡೆಗಟ್ಟುವಲ್ಲಿ ವಿಫಲವಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದರು.

ಮಂಡ್ಯದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವೈದ್ಯಕೀಯ ಉಪಕರಣ ಖರೀದಿಯಲ್ಲಿ ಭ್ರಷ್ಟಾಚಾರ ಮಾಡಿದೆ. ಕರ್ನಾಟಕದಲ್ಲಿ ಇದುವರೆಗೆ, 1,16,638 ಜನಕ್ಕೆ ಕೊರೊನಾ ಬಂದಿದೆ. ಎರಡು ಸಾವಿರ ಜನ ಸತ್ತಿದ್ದಾರೆ. ನಾವು ಕೊರೊನಾಗಾಗಿ ನಾಲ್ಕು ಸಾವಿರ ಕೋಟಿ ಖರ್ಚು ಮಾಡಿದ್ದೇವೆಂದ ಸರ್ಕಾರ ಯಾವುದಕ್ಕೆ ಖರ್ಚು ಮಾಡಿದೆ ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದರು.

ಇನ್ನು ಎಲ್ಲಿ ಹೋದರು ಬೆಡ್ ಇಲ್ಲ, ಔಷಧಿ ಇಲ್ಲ. ಊಟ ಸಮರ್ಪಕವಾಗಿ ಕೊಡುತ್ತಿಲ್ಲ, ಡೆಡ್ ಬಾಡಿಗಳನ್ನು ಕಸದ ಥರ ಸುರಿಯುತ್ತಿದ್ದಾರೆ. ಕೋವಿಡ್​ಗೆ ಸಂಬಂಧಿಸಿದಂತೆ ಸರ್ಕಾರ ಯಾವ ಮುಂಜಾಗ್ರತೆ ಕ್ರಮಕೈಗೊಂಡಿಲ್ಲ, ಮೋದಿ ಮಾತು ಕೇಳಿ ಜನ ಶಂಕ, ಜಾಗಟೆ ಬಾರಿಸಿದ್ರು ಆದರೆ ಕೊರೊನಾ ಕಡಿಮೆ ಆಗಲಿಲ್ಲ, ಇದೀಗ ವಿಶ್ವದಲ್ಲಿ ಕೊರೋನಾ ಸೋಂಕಿನಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಮೊದಲ ಸ್ಥಾನಕ್ಕೆ ಭಾರತ ಬಂದರೂ ಆಶ್ಚರ್ಯ ಇಲ್ಲ ಎಂದು ಹೇಳಿದರು.

ಸದ್ಯ ರಾಜ್ಯದಲ್ಲಿ ಒಬ್ಬ ಮಂತ್ರಿ ಸಹ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ, ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗಲ್ಲ, ನಾನು ಸಿಎಂ ಆಗಿದ್ರೆ ರಾಜ್ಯದ ಎಲ್ಲಾ ಜನಕ್ಕೆ ತಲಾ ಹತ್ತು ಸಾವಿರ ಹಣ ಘೋಷಿಸುವೆ. ನಾನು ಲೆಕ್ಕ ಕೊಡಿ ಅಂತ ಸರ್ಕಾರವನ್ನ ಕೇಳಿದ್ರೆ ಸಿದ್ದರಾಮಯ್ಯ ಯಾರು ಲೆಕ್ಕ ಕೇಳೋಕೆ ಅಂತಾರೆ. ಒಬ್ಬ ಸಾಮಾನ್ಯ ಪ್ರಜೆಗೂ ಸರ್ಕಾರವನ್ನು ಪ್ರಶ್ನಿಸುವ ಅಧಿಕಾರ ಇದೆ ಅಂತ ಸರ್ಕಾರ ಹೇಳುತ್ತೆ. ಸಚಿವ ಅಶೋಕ್ ಪಾಪಾ ಸಂವಿಧಾನವೇ ಓದಿಲ್ಲ ಅನ್ಸುತ್ತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸರ್ಕಾರವನ್ನು ಟೀಕಿಸಿದ್ದಾರೆ.

ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರಿಗೆ ನೋಟೀಸ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ನಾನು ಲೀಗಲ್ ನೋಟಿಸ್​ಗೆ ಕಾಯ್ತಿದ್ದೆ, ಕೊಟ್ಟಿದ್ದಾರೆ ಸಂತೋಷ. ನನಗೆ ಮತ್ತು ಡಿ.ಕೆ.ಶಿವಕುಮಾರ್​ಗೆ ಕೊಟ್ಟಿದ್ದಾರೆ. ಸಿಎಂ, ಸಚಿವರು ಅಥವಾ ಸರ್ಕಾರದ ಕಾರ್ಯದರ್ಶಿ ಕೊಡಬೇಕು. ಆದರೆ, ಎಂಎಲ್​ಸಿ ರವಿಕುಮಾರ್ ಕೈಲಿ ನೋಟಿಸ್​ ಕೊಡಿಸಿದ್ದಾರೆ ಎಂದರು.

Recommended For You

About the Author: user

Leave a Reply

Your email address will not be published. Required fields are marked *