ಸೋಶಿಯಲ್​ ಮೀಡಿಯಾದಲ್ಲಿ ಐರಾ ಫೋಟೋ ವೈರಲ್​

ಸ್ಯಾಂಡಲ್​​ವುಡ್​ ಸಿಂಡ್ರೆಲಾ ರಾಧಿಕಾ ಪಂಡಿತ್ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟಿವ್​ ಆಗಿದ್ದು, ಆಗಾಗ್ಗೆ ಕೆಲ ಫೋಟೋಗಳನ್ನ ಅಪ್​ಲೋಡ್ ಮಾಡ್ತಾ ಇರ್ತಾರೆ. ಇದೀಗ ಕೊಂಚ ಗ್ಯಾಪ್​ನ ನಂತ್ರ ಐರಾಳ ಫೋಟೊವೊಂದನ್ನ ಅಪ್​​ಲೋಡ್ ಮಾಡಿದ್ದು, ಆ ಪೋಟೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಕಿಂಗ್​​ ಸ್ಟಾರ್ ದಂಪತಿಯ ಮುದ್ದು ಮಕ್ಕಳು ಐರಾ ಮತ್ತು ಜೂನಿಯರ್​ ಯಶ್​. ಇವರಿಬ್ಬರ ಯಾವುದೇ ವಿಡಿಯೋ, ಪೋಟೋ ಅಪ್​ಲೋಡ್​ ಆದ್ರೂ, ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತೆ. ಈಗಾಗಲೇ ಐರಾಳ ಸಾಕಷ್ಟು ತುಂಟಾಟದ ವಿಡಿಯೋಗಳು ಸೊಶೀಯಲ್​ ಮಿಡಿಯಾದಲ್ಲಿ ಹರಿದಾಡ್ತಿವೆ.

ಇತ್ತೀಚೆಗೆ ರಾಧಿಕಾ ಪಂಡಿತ್​, ಎಲ್ರೂ ಮನೆಯಲ್ಲಿ ಹೇಗೆ ಕಾಲ ಕಳಿತಿದ್ದಾರೆ. ಏನೆಲ್ಲಾ ವಿಚಾರಗಳನ್ನ ಮಿಸ್ ಮಾಡಿಕೊಳ್ತಿದ್ದಿರ ಅಂತ ಅಭಿಮಾನಿಗಳನ್ ಪ್ರಶ್ನಿಸಿದರು. ಆ ಪ್ರಶ್ನೆಗೆ ಸಾಕಷ್ಟು ಮಂದಿ ಐರಾ ಮತ್ತು ಜೂನಿಯರ್ ಯಶ್​ ಫೋಟೋಸ್​ ಮಿಸ್ ಮಾಡಿಕೊಳ್ತಿದ್ದೀವಿ ಅಂತ ಕಮೆಂಟ್ ಮಾಡಿದರು. ಹಾಗಾಗಿ ಇದೀಗ ರಾಧಿಕಾ ಪಂಡಿಂತ್​ ಐರಾಳ ಹೊಸ ಫೋಟೋವೊಂದನ್ನ ಅಪ್​ಲೋಡ್​ ಮಾಡಿದ್ದಾರೆ.

ಅಂದ್ಹಾಗೇ ಈ ಫೋಟೋದಲ್ಲಿ ಐರಾ ಬುಕ್​ ಹಿಡಿದು, ಓದೋದ್ರಲ್ಲಿ ಬ್ಯುಸಿಯಾಗಿದ್ದಾಳೆ. ಈಗಿನ ಕಾಲದ ಮಕ್ಕಳು ಯಾವಾಗ್ಲೂ ಮೊಬೈಲ್, ಟಿವಿ, ಗೇಮ್ಸ್ ಅಂತ ಅದ್ರಲ್ಲೇ ಬ್ಯುಸಿಯಾಗಿರ್ತಾರೆ. ಆದರೆ, ರಾಧಿಕಾ ಪಂಡಿತ್​ ಐರಾ ಕೈಗೆ ಬುಕ್​ ಕೊಟ್ಟು, ಈಗಿನಿಂದಲೇ ಪುಸ್ತಕ ಓದುವ ಆಸಕ್ತಿ ಬೆಳೆಸ್ತಿದ್ದಾರೆ. ಜೊತೆಗೆ ಐರಾ ಈ ಪುಸ್ತಕದಲ್ಲಿರುವ ಚಿತ್ರಗಳನ್ನ ನೋಡ್ತಿದ್ದಾಳೆ ಅಂತ ರಾಧಿಕಾ ಪಂಡಿಂತ್ ಬರೆದುಕೊಂಡಿದ್ದಾರೆ.

ಐರಾಳ ಈ ಫೋಟೋ ಅಪ್​​ಲೋಡ್​ ಮಾಡೋದ್ರ ಜೊತೆಗೆ, ಐರಾ ಸ್ನೇಹಿತೆ ,ನಟಿ ಅನುಪ್ರಭಾಕರ್​ ಪುತ್ರಿ ನಂದನಾ ಪ್ರಭಾಕರ್​ ಮುಖರ್ಜಿಗೆ, ರಾಧಿಕಾ ಪಂಡಿತ್​ ಥ್ಯಾಂಕ್ಸ್​ ಹೇಳಿದ್ದಾರೆ. ಯಾಕಂದರೆ ಐರಾ ಬರ್ತ್​ಡೇ ಗೆ ಅನುಪ್ರಭಾಕರ್​ ಈ ಪುಸ್ತಕವನ್ನ ಗಿಫ್ಟ್ ಆಗಿ ಕೊಟ್ಟಿದರಂತೆ.

ಸದ್ಯ ಐರಾ ಏನೇ ಮಾಡಿದ್ರೂ ಚೆಂದ. ಈಗಾಗಲೇ ಯಶ್​ ಮತ್ತು ರಾಧೀಕಾಪಂಡಿತ್​ರಂತೆ, ಪುಟಾಣಿ ಐರಾಗೂ ಕೂಡ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಆಕೆಯ ಫೋಟೋ, ವಿಡಿಯೋಸ್​ ಸೊಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಕೂಡ ಆಗುತ್ತೆ.

Recommended For You

About the Author: user

Leave a Reply

Your email address will not be published. Required fields are marked *