ಏಕಾಂಗಿಯಾಗಿ ನಾನು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ – ಸಚಿವ ಸಿ.ಟಿ ರವಿ

ಬೆಂಗಳೂರು: ಸಂಪುಟ ಪುನಾರಚನೆ ಸಿಎಂ ಪರಮಾಧಿಕಾರ, ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಅವರು ಬುಧವಾರ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಯಾರನ್ನು ಕಳಿಸಬೇಕು ನಿರ್ಧಾರ ಮಾಡುತ್ತಾರೆ. ಕೆಲವರು ನಿರೀಕ್ಷೆ ಇಟ್ಟು ಪಕ್ಷಕ್ಕೆ ಸೇರಿದ್ದಾರೆ. ಅವರಿಗೂ ಅವಕಾಶ ಕೊಡಬೇಕು. ಅಂತಿಮವಾಗಿ ಸಿಎಂ ನಿರ್ಧಾರ ಮಾಡ್ತಾರೆ ಎಂದು ಅವರು ತಿಳಿಸಿದ್ದಾರೆ.

ಡಿಸಿಎಂ ಲಕ್ಷ್ಮಣ ಸವದಿ ದೆಹಲಿ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ನೋಡಿ ತಿಳಿದುಕೊಂಡೆ. ಕೆಲವೊಮ್ಮೆ ಕೆಲ ಘಟನೆ ಕಾಕತಾಳಿಯವಾಗಿ ಆಗುತ್ವೆ. ಅವರು ದೆಹಲಿಗೆ ಯಾಕೆ ಹೋಗಿದ್ರೋ ಗೊತ್ತಿಲ್ಲ, ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ವಿಚಾರ ಇಲ್ಲ ಎಂದು ಹೇಳಿದ್ದಾರೆ.

ಇನ್ನು ಸಿನಿಮಾ ಮಂದಿರ, ಜಿಮ್ ರೀ ಓಪನ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಮಾಡಬೇಕು. ಇಂದು ಹಿರಿಯ ನಟರ ಜೊತೆ ಚರ್ಚೆ ಮಾಡಿದ್ದೇನೆ. ಡಿಮ್ಯಾಂಡ್​ ಚಾರ್ಜಸ್ ಕಡಿಮೆ ಮಾಡಬೇಕು. ತೆರಿಗೆ ವಿನಾಯ್ತಿ ಕೊಡಬೇಕು ಅಂತ ಕೇಳಿದ್ದಾರೆ. ಎಂಎಸ್​ಎಂಇ ವ್ಯಾಪ್ತಿಗೆ ಸಿನಿಮಾ ಇಂಡಸ್ಟ್ರಿ ತರಬೇಕು. ಈ ಬಗ್ಗೆ ಮನವಿ ಮಾಡಿದ್ದಾರೆ. ಅವರ ನಿರ್ಣಯಗಳನ್ನು ನಾನು ಕೇಳಿದ್ದೇನೆ. ಏಕಾಂಗಿಯಾಗಿ ನಾನು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ, ಸಿಎಂ ಜೊತೆ ಭೇಟಿ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಮ್ಮ ಸರ್ಕಾರ ಕಡುಬಡವರ ಜೊತೆ ಇದೆ. ಮುಂದೆಯೂ ಬಡವರ ಜೊತೆಯೇ ಇರಲಿದೆ ಎಂದು ವಿಧಾನಸೌಧದಲ್ಲಿ ಸಚಿವ ಸಿ.ಟಿ ರವಿ ಅವರು ಮಾತನಾಡಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *