‘ಮಾಜಿ ಸಚಿವ ಪುಟ್ಟರಾಜು ನನ್ನನ್ನ ತಮ್ಮನಂತೆ ನೋಡಿಕೊಳ್ಳುತ್ತಿದ್ದಾರೆ’ – ಶಾಸಕ ಮುರುಗೇಶ್​ ನಿರಾಣಿ

ಮೈಸೂರು: ಡಿಸಿಎಂ ಲಕ್ಷ್ಮಣ ಸವದಿ ದೆಹಲಿಗೆ ಹೋಗಿದ್ದೆ ನನಗೆ ಗೊತ್ತಿಲ್ಲ, ನಾನು ಬೆಳಗಿನಿಂದ ರಾತ್ರಿವರೆಗೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದೆ ಎಂದುಲ ಬಿಜೆಪಿ ಶಾಸಕ ಮುರುಗೇಶ್​ ನಿರಾಣಿ ಅವರು ಬುಧವಾರ ಹೇಳಿದ್ದಾರೆ.

ಮೈಸೂರು ಜಿಲ್ಲೆಯ ಸುತ್ತೂರು ಮಠಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಅವರು, ರಾಜ್ಯ ರಾಜಕಾರಣದಲ್ಲಿ ಏನಾಗ್ತಿದೆ ಎಂಬುದು ನನಗೆ ಗೊತ್ತಿಲ್ಲ. ಇಂದು ಬೆಂಗಳೂರಿಗೆ ಹೋಗಿ ಮಾಹಿತಿ ಪಡೆಯುತ್ತೇನೆ. ಆದರೆ, ಮೂರು ವರ್ಷವೂ ಯಡಿಯೂರಪ್ಪನವರೇ ಮುಖ್ಯಮಂತ್ರಿ ಆಗಿರ್ತಾರೆ ಎಂದರು.

ನಾನು ರಾಜಕಾರಣದಲ್ಲಿ ಬಹಳ ಚಿಕ್ಕವ. ಕಾರ್ಖಾನೆ ಬಗ್ಗೆ ಕೇಳಿದರೆ ಮಾತ್ರ ನಾನು ಹೇಳುತ್ತೇನೆ. ರಾಜಕಾರಣದ ಬಗ್ಗೆ ಅಷ್ಟೊಂದು ಗೊತ್ತಿಲ್ಲ. ನಾನು ಮಂತ್ರಿ ಆಗಿಲ್ಲ ಅಂದ್ರು ಮಂತ್ರಿಗಿಂತ ಚೆನ್ನಾಗಿದ್ದೇನೆ. 5 ಸಾವಿರ ಕೋಟಿ ಟರ್ನ್ ಓವರ್ ಇದೆ. ಮುಂದಿನ ಬಾರಿಯ ಚುನಾವಣೆಗೆ ಟಿಕೆಟ್ ಕೊಡದಿದ್ರು. ನಾನು ಬಿಜೆಪಿಯಲ್ಲೇ ಇರ್ತೇನೆ’ ಎಂದು ಅವರು ತಿಳಿಸಿದರು.

ಮೈ ಶುಗರ್ ಕಾರ್ಖಾನೆ ಮೇಲೆ ನಿರಾಣಿ ಕಣ್ಣಿದೆ ಎಂಬ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ನಿರಾಣಿ ಅವರು, ನಾನೊಬ್ಬ ಕೈಗಾರಿಕೋದ್ಯಮಿ ಇದ್ದೇನೆ. ಟೆಂಡರ್​ ಬಿಡ್ ವೇಳೆ ನನ್ನ ಬಳಿ ಅಷ್ಟು ಹಣ ಇದ್ದರೆ ನಾನು ಬಿಡ್​ನಲ್ಲಿ ಭಾಗಿಯಾಗುತ್ತೇನೆ. ಗ್ಲೋಬಲ್​ನಲ್ಲಿ ಬಿಡ್​ಗೆ ಕೆಲವೊಂದು ನಿಯಮ ಇರುತ್ತೆ. ಇದರಲ್ಲಿ ಯಾರು ಬೇಕಾದರು ಹೋಗಿ ಭಾಗಿಯಾಬಹುದು. ಇದರಲ್ಲಿ ಯಾರ ಹಸ್ತಕ್ಷೇಪವು ನಡೆಯಲ್ಲ. ಫೈನಾನ್ಸಿಯಲ್ ನಾನು ಚೆನ್ನಾಗಿದ್ದರೆ ಬಿಡ್ ಮಾಡುತ್ತೇನೆ ಇಲ್ಲವಾದರೆ ಇಲ್ಲ ಎಂದು ಅವರು ನುಡಿದರು.

ಸದ್ಯ ನಮ್ಮ ಪಕ್ಷದಲ್ಲಿ ಯಾರು ಇದಕ್ಕೆ ವಿರೋಧ ಮಾಡುತ್ತಿಲ್ಲ, ನಿರಾಣಿ ಒಬ್ಬರು ಕೈಗಾರಿಕೋದ್ಯಮಿಯಾಗಿದ್ದಾರೆ. ಇದು ನಮ್ಮ 224 ಶಾಸಕರಿಗು ಗೊತ್ತಿದೆ. ಸ್ಥಳೀಯ ರೈತರು ಜನರೆಲ್ಲರೂ ಈಗಾಗಲೇ ಕಾರ್ಖಾನೆ ನೋಡಿದ್ದಾರೆ. ಕಾರ್ಖಾನೆ ಪ್ರಾರಂಭಕ್ಕೆ ಜೆಡಿಎಸ್-ಕಾಂಗ್ರೆಸ್ ನಾಯಕರು ಸಹಕಾರ ನೀಡಿದ್ದಾರೆ. ಮಾಜಿ ಸಚಿವ ಪುಟ್ಟರಾಜು ನನ್ನನ್ನ ತಮ್ಮನಂತೆ ನೋಡಿಕೊಳ್ಳುತ್ತಿದ್ದಾರೆ. ಹಾಗಾಗಿ ಕಾರ್ಖಾನೆ ಉದ್ಘಾಟನೆಗೆ ಯಾವುದೇ ಸಮಸ್ಯೆಯು ಇಲ್ಲ ಎಂದು ಶಾಸಕ ಮುರುಗೇಶ್​ ನಿರಾಣಿ ಅವರು ಮಾತನಾಡಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *