‘​ಅವ್ಯವಹಾರದ ಬಗ್ಗೆ ದಾಖಲೆ ಸಮೇತ ಉತ್ತರ ಹೇಳುವಲ್ಲಿ ಸರ್ಕಾರ ವಿಫಲ’ – ಹೆಚ್​.ಡಿ ದೇವೇಗೌಡ

ಬೆಂಗಳೂರು: ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961, ಸೆಕ್ಷನ್ 79-A, 79-B, 79-C ರದ್ದು ಮಾಡಿರುವುದು ರೈತ ವಿರೋಧಿ, ಎಪಿಎಂಸಿ ಕಾಯ್ದೆ ತಿದ್ದುಪಡಿಯೂ ಮಾರಕವಾಗಿದೆ. ಕೈಗಾರಿಕೆ ವಿವಾದ ಮತ್ತಿತರ ನಿಯಮಗಳ ತಿದ್ದುಪಡಿ, ರೈತ ವಿರೋಧಿ ತೀರ್ಮಾನವನ್ನು ಸರ್ಕಾರ ತೆಗೆದುಕೊಂಡಿದೆ ಎಂದು ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಅವರು ಮಂಗಳವಾರ ಹೇಳಿದ್ದಾರೆ.

ನಗರದಲ್ಲಿರುವ ಜೆಡಿಎಸ್​ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಕಾರಣ ನಾನು ಮಾತನಾಡಲು ಆಗಿಲ್ಲ, ಸರ್ಕಾರದ ನಿಯನ ಉಲ್ಲಂಘಿಸಬಾರದು ಅಂತ ಹಿಂದೆ ಸರಿದಿದ್ದೆ. ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಪರಿಣಾಮ ಏನಾಗಲಿದೆ. ಈ ಬಗ್ಗೆ ಸರ್ಕಾರ ಮಾಹಿತಿ ನೀಡದೆ ಕಾಯ್ದೆ ಜಾರಿ ಮಾಡಿದ್ದಾರೆ. ರಿಯಲ್ ಎಸ್ಟೇಟ್ ಮಾಫಿಯಾಗೆ ಅನುಕೂಲವಾಗಲಿದೆ ಎಂದು ಅವರು ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿದ್ದಾರೆ.

ಸದ್ಯ ಇದು ಅತ್ಯಂತ ಕೆಟ್ಟ ತಿದ್ದುಪಡಿ ಕಾಯ್ದೆ. ಯಾರೋ ಕೈಗಾರಿಕೆ ಉದ್ಯಮಿ ಬಂದು ಭೂಮಿ ಪಡೆಯುತ್ತಾನೆ. ಕೈಗಾರಿಕೆ ಉದ್ದೇಶಕ್ಕಾಗಿ ಪಡೆದ ಭೂಮಿಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡಬೇಕು. 7 ವರ್ಷಗಳ ನಂತರ ಅದೇ ಭೂಮಿಯನ್ನು ಪರಾಭಾರೆ ಮಾಡಬಹುದು. 7 ವರ್ಷಗಳ ಬಳಿಕ ಅಂದಿನ ಬೆಲೆಗೆ ಮಾರಾಟ ಮಾಡುತ್ತಾನೆ. ಬಹುಮತ ಇದೆ ಎನ್ನುವ ಅಹಂನಿಂದ ಇಂತಹ ಕಾನೂನು ತರುತ್ತಿದ್ದಾರೆ ಎಂದು ಸರ್ಕಾರವನ್ನು ಟೀಕಿಸಿದರು.

ಇನ್ನು ಮೋದಿ ಹೇಳಿದ್ದೆ ಅವರಿಗೆ ವೇದವಾಕ್ಯ ಆಗಿದೆ. ವಿರೋಧ ಪಕ್ಷಗಳ ವಿಶ್ವಾಸ ಪಡೆಯುತ್ತಿಲ್ಲ, ನಾನು ರಾಜ್ಯಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡುತ್ತೇನೆ. ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ದಲ್ಲಾಳಿಗೆ ಪೂರ್ಣ ಅವಕಾಶ ನೀಡಿದಂತಾಗಿದೆ. ನಾನು ಇದನ್ನು ಕಂಡತುಂಡವಾಗಿ ವಿರೋಧಿಸುತ್ತೇನೆ ಇದನ್ನ ವಿರೋಧಿಸುವ ಪಕ್ಷಗಳು ತಮ್ಮ ಅನಿಸಿಕೆ ಹೇಳಿದ್ದಾರೆ. ಕಾಂಗ್ರೆಸ್, ಸಿಪಿಐಎಂ ಸೇರಿ ಅನೇಕರು ವಿರೋಧಿಸಿದ್ದಾರೆ ಎಂದರು.

ಈ ಮೂರು ಕಾಯ್ದೆ ತಿದ್ದುಪಡಿ ವಿರುದ್ಧ ಹೋರಾಟ ರೂಪಿಸುತ್ತೇವೆ. ರಾಜ್ಯದ ಜೆಡಿಎಸ್ ಚುನಾಯಿತ ಸದಸ್ಯರಿಗೆ ಕರೆ ನೀಡುತ್ತೇನೆ. ರಾಜಭವನಕ್ಕೆ ತೆರಳಿ ಮನವಿ ಪತ್ರ ಸಲ್ಲಿಸುತ್ತೇವೆ. 200-250 ಜೆಡಿಎಸ್ ಕಾರ್ಯಕರ್ತರ ಶಾಂತಿಯುತ ಪ್ರತಿಭಟನೆ ಮಾಡುತ್ತೇವೆ. ರಾಜ್ಯಪಾಲರು ಅನುಮತಿ ನೀಡಿದರೆ ಈ ವಿಚಾರ ಮನವರಿಕೆ ಮಾಡಿಕೊಡುತ್ತೇವೆ. ಶಾಂತಿಯುತ ಹೋರಾಟಕ್ಕೆ ಸರ್ಕಾರ ಅನುಮತಿ ನೀಡಬೇಕು. ಆಗಸ್ಟ್​ 1ರಂದು ಹೋರಾಟದ ರೂಪುರೇಷೆ ಸಿದ್ಧಪಡಿಸುತ್ತೇವೆ. ಹೋರಾಟದ ನೇತೃತ್ವ ನಾನೇ ವಹಿಸಿಕೊಳ್ಳುತ್ತೇನೆ. ನಾವು ಪ್ರಾದೇಶಿಕ ಪಕ್ಷ ಉಳಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.

ಕೊರೊನಾ ಪ್ಯಾಕೇಜ್ ಸಹಾಯಧನ ಫಲಾನುಭವಿಗಳಿಗೆ ಸಿಕ್ಕಿದೆಯಾ(?) ಎಷ್ಟು ಹಣ ಪೋಲಾಗಿದೆ ಎಂಬುದು ಜಗಜ್ಜಾಹೀರಾಗಿದೆ. ಕುಮಾರಸ್ವಾಮಿ ಕೂಡ ಎರಡು ಪಕ್ಷಗಳ ಬಗ್ಗೆ ಅನಿಸಿಕೆ ಹೇಳಿದ್ದಾರೆ. 2 ಸಾವಿರ ಕೋಟಿ ಅವ್ಯವಹಾರ ಆಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ, ಬಿಜೆಪಿ ನಕಾರಾತ್ಮಕ ಉತ್ತರ ನೀಡಿದೆ. ದಾಖಲೆ ಸಮೇತ ಉತ್ತರ ಹೇಳುವಲ್ಲಿ ಸರ್ಕಾರ ವಿಫಲವಾಗಿದೆ. ಭ್ರಷ್ಟಾಚಾರಕ್ಕೆ ಒಳಗಾದವರಿಗೆ ಹೆಚ್ಚು ಶಕ್ತಿ ಬರುತ್ತದೆ. ನಾನು ದೇವರಾಜ ಅರಸು ಭ್ರಷ್ಟಾಚಾರದ ವಿರುದ್ಧ ವಿಪಕ್ಷ ನಾಯಕನಾಗಿ ಹೋರಾಟ ಮಾಡಿದ್ದೆ. ಆದರೆ, ಅವರೇ ಮತ್ತೆ ಅಧಿಕಾರಕ್ಕೆ ಬಂದರು. ಹಾಗಂದ ಮಾತ್ರಕ್ಕೆ ಕೊಳ್ಳೆ ಹೊಡೆಯಿರಿ ಎಂದು ಹೇಳುವುದಿಲ್ಲ ಎಂದು ಹೆಚ್ಡಿಡಿ ಅವರು ಕೋವಿಡ್​ 19 ಕಿಟ್​ ಅವ್ಯವಹಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *