‘ಮಾಜಿ ಸಿಎಂ ಡಿ. ದೇವರಾಜ ಅರಸು ನನ್ನನ್ನ ಆವರಿಸಿದ್ದಾರೆ’ – ಹೆಚ್​.ವಿಶ್ವನಾಥ್​

ಮೈಸೂರು: ದೇವರಾಜ ಅರಸು, ನನ್ನನ್ನ ಆವರಿಸಿದ್ದಾರೆ, ಮೈಸೂರು ಸಂಸ್ಥಾನ ನಮಗೆ ಅನ್ನ, ಅರಿವು ಹಾಗೂ ಅಧಿಕಾರವನ್ನು ಕೊಟ್ಟಿದೆ ಎಂದು ಹೆಚ್​ ವಿಶ್ವನಾಥ್​ ಅವರು ಮಂಗಳವಾರ ಹೇಳಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ, ಕನ್ನಡ ಸಾಹಿತ್ಯ ಪರಿಷತ್ತು ಆಯೋಜನೆ ಮಾಡಿದ್ದ ವಿಶ್ವನಾಥ್ ಸಾಹಿತ್ಯಿಕ- ಸಾಂಸ್ಕೃತಿಕ’ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 1978ರಲ್ಲಿ ನಾನು ಶಾಸಕನಾದೆ ಇದಕ್ಕೆ ಕಾರಣ ನಮ್ಮ ನಾಯಕ ದಿ. ಡಿ.ದೇವರಾಜ ಅರಸರು ಕಾರಣ. ಅವರ ಗರಡಿಯಲ್ಲಿ ಬೆಳೆದ ಹುಡುಗ ನಾನು. ಸಾಕಷ್ಟು ಕನ್ನಡಪರ ಹೋರಾಟದಲ್ಲಿ ಭಾಗಿಯಾಗಿದ್ದೆ. ಹಾಗಾಗಿ ನಾನು ಕನ್ನಡ ಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದೆ. ಅಂದು ನನ್ನನ್ನು ಎಲ್ಲರು ಹೇಳುವಾಗ ಸಂತಸ ಹಿಮ್ಮಡಿಯಾಗಿತ್ತು ಎಂದು ಅವರು ಹೇಳಿದರು.

ಇನ್ನು ಸಾಹಿತಿಯ ಲೇಖನವನ್ನು ಯಾರು ತಡೆಯಲು ಆಗಲ್ಲ, ಜನತಂತ್ರ ವ್ಯವಸ್ಥೆ ಯಾರು ತಡೆಯಲು ಆಗಲ್ಲ, ನಾವು ಮಾಡಿದ್ದು ಒಂದು ಮಾದರಿ ಆಯಿತು. ನಾವು ಆಡಳಿತ ಪಕ್ಷದಿಂದ ವಿರೋಧ ಪಕ್ಷದ ಕಡೆಗೆ ಹೋದವರು. ಇದೇ ರೀತಿ ವಿವಿಧ ಕಡೆ ನಡೆಯಿತು ಇದನ್ನು ಜನರಿಗೆ ಅರ್ಥ ಆಗೋ ರೀತಿ ಬರೆಯಬೇಕು. ನಾವು ಅನುಭವಿಸಿದ್ದನ್ನು ನಾವು ಬರೆಯಲೇಬೇಕು ಎಂದರು.

ಬಾಂಬೆ ಡೈರಿಸ್​ನಿಂದ ನಾನು ಯಾವುದನ್ನು ಸಾಬೀತು ಮಾಡಲು ಹೊರಟಿಲ್ಲ. ಸರ್ಕಾರ ನನ್ನ ಕೈಯನ್ನ, ನನ್ನ ಬರವಣಿಗೆಯನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ, ಹಾಗಾಗಿ ನಾನು ಪುಸ್ತಕ ಬರೆಯುತ್ತೇನೆ ಎಂದು ಪುಸ್ತಕ ಬರೆಯುವ ಬಗ್ಗೆ ಹೆಚ್​.ವಿಶ್ವನಾಥ್ ಅವರು ಹೇಳಿಕೊಂಡರು.

ಈ ಕಾರ್ಯಕ್ರಮದಲ್ಲಿ ಎಂಎಲ್​ಸಿ ವಿಶ್ವನಾಥ್, ಸಾಹಿತಿಗಳಾದ ಪ್ರೊ.ಸಿ.ಪಿ ಕೃಷ್ಣಕುಮಾರ್(ಸಿಪಿಕೆ), ಪ್ರೊ.ಶಿವರಾಜಪ್ಪ, ಪ್ರೊ. ಭೈರವಮೂರ್ತಿ, ಪ್ರೊ.ಲೋಲಾಕ್ಷಿ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.

Recommended For You

About the Author: user

Leave a Reply

Your email address will not be published. Required fields are marked *