ಸಿಇಟಿ ಪರೀಕ್ಷೆ ನಿರ್ಧಾರ ಮರುಪರಿಶೀಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್​ ಸೂಚನೆ

ಬೆಂಗಳೂರು: ಜುಲೈ 30ರಂದು ಸಿಇಟಿ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಬಗ್ಗೆ ಮತ್ತೆ ಪರಿಶೀಲನೆ ಮಾಡುವಂತೆ ಹೈಕೋರ್ಟ್​ ಸೂಚನೆ ನೀಡಿದೆ.

ಸಿಇಟಿ ಪರೀಕ್ಷೆಯನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಸಾರ್ವಜನಿಕ ಹಿತ್ತಾಶಕ್ತಿ ಅರ್ಜಿ(ಪಿಐಎಲ್​) ಸಲ್ಲಿಸಲಾಗಿತ್ತು. ಈ ಬಗ್ಗೆ ಇಂದು ವಿಚಾರಣೆ ನಡೆಸಿದ ಹೈಕೋರ್ಟ್​ ವಿಭಾಗೀಯ ಪೀಠದ ಸಿಜೆ ಎ.ಎಸ್ ಒಕಾ ಅವರು, ಜು.30ರ ಸಿಇಟಿ ಪರೀಕ್ಷೆ ನಿರ್ಧಾರ ಮರುಪರಿಶೀಲಿಸಿ, ನಾಳೆ ಮಧ್ಯಾಹ್ನ 2.30ರೊಳಗೆ ನಿರ್ಧಾರ ತಿಳಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು.

ಕಂಟೈನ್​ಮೆಂಟ್ ಝೋನ್​ನವರು ಹೇಗೆ ಪರೀಕ್ಷೆ ಬರೆಯುತ್ತಾರೆ. ಅವರು ಹೊರಗೆ ಬರುವಂತಿಲ್ಲ, ಬೆಂಗಳೂರಿನಲ್ಲಿ 5,000ಕ್ಕೂ ಹೆಚ್ಚು ಕಂಟೈನ್​ಮೆಂಟ್​ ಝೋನ್​ಗಳಿವೆ. ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯದವರಿಗೆ ಪೂರಕ ಪರೀಕ್ಷೆಯಿತ್ತು. ಆದರೆ, ಸಿಇಟಿಗೆ ಯಾವುದೇ ಪೂರಕ ಪರೀಕ್ಷೆಯಿಲ್ಲ. ಕಳೆದ ಎರಡು ವಾರದಿಂದ 5,000 ಕೊರೊನಾ ಪ್ರಕರಣ ಪತ್ತೆ. ಬೇರೆ ರಾಜ್ಯಗಳಿಂದಲೂ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಹಲವರು ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತರಾಗುತ್ತಾರೆ ಎಂದು ಹೈಕೋರ್ಟ್​ ರಾಜ್ಯ ಸರ್ಕಾರಕ್ಕೆ ತಿಳಿಸಿದೆ.

ಇದೇ ವೇಳೆ ಅರ್ಜಿದಾರರಿಗೆ ವಿಭಾಗೀಯ ಪೀಠವು ಪ್ರಶ್ನೆ ಮಾಡಿದ್ದು, ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ದರಾಗಿರುತ್ತಾರೆ. ಕೊನೆ ಗಳಿಗೆಯಲ್ಲಿ ಅರ್ಜಿ ಸಲ್ಲಿಸಿದರೆ ಅವರ ಸ್ಥಿತಿ ಏನು(?) ಮೇ 13ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿರ್ಧಾರ ಕೈಗೊಂಡಿದೆ. ಇಷ್ಟು ದಿನ ಸುಮ್ಮನಿದ್ದು ಈಗ ಏಕೆ ಅರ್ಜಿ ಸಲ್ಲಿಸಿದಿರಿ(?) ಸರ್ಕಾರಕ್ಕೆ ಯಾಕೆ ಮುಂಚಿತವಾಗಿ ಮನವಿ ಸಲ್ಲಿಸಲಿಲ್ಲ ಎಂದು ಹೇಳಿತ್ತು.

Recommended For You

About the Author: user

Leave a Reply

Your email address will not be published. Required fields are marked *